


ನಂದೀಶ್ ಭದ್ರಾವತಿ ದಾವಣಗೆರೆ
ದಾವಣಗೆರೆಯಲ್ಲಿ ಯಾರಾದ್ರೂ ಸಿಟ್ಟು ಮಾಡಿಕೊಳ್ಳದ ಪೊಲೀಸ್ ಅಧಿಕಾರಿ ಯಾರು ಅಂಥ ಕೇಳಿದ್ರೆ ಮೊದಲು ಥಟ್ ಅಂತ ಹೇಳುವುದೇ ಡಿಆರ್ ಡಿವೈಎಸ್ಪಿ ಪ್ರಕಾಶ್ ಅಂತ.

ಹೌದು..ದಾವಣಗೆರೆಯಲ್ಲಿ ಡಿಆರ್ ಡಿಎಸ್ಪಿ ಪ್ರಕಾಶ ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆದ ಚಾಕಚಾಕ್ಯತೆ ಹೊಂದಿದ್ದಾರೆ. ಇವರು ಪ್ರಾಮಾಣಿಕ, ದಿಟ್ಟ, ದಕ್ಷ ಪೊಲೀಸ್ ಅಧಿಕಾರಿಯಾಗಿದ್ದು ದಾವಣಗೆರೆಗೆ ದೊರೆತಿ ರುವುದು ಜಿಲ್ಲಾ ಪೊಲೀಸ್ ಇಲಾಖೆಯ ಭಾಗ್ಯ.

ಇವರು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹಿಂಡಸಘಟ್ಟವರಾಗಿದ್ದು, ತಂದೆ ಪಿ.ಬಿ.ಬಸವನಗೌಡ, ತಾಯಿ ರುದ್ರಮ್ಮ. ತಂದೆ ಮೇಷ್ಟ್ರು ಆಗಿದ್ದು, ಮಕ್ಕಳನ್ನು ಶಿಕ್ಷಣವಂತರಾಗಿ ಮಾಡಿದ್ದಾರೆ.
ಪ್ರಾಥಮಿಕ ಶಾಲೆಯನ್ನು ಹಿಂಡಸಘಟ್ಟದಲ್ಲಿ ಮುಗಿಸಿದ ಇವರು ಕೊಕನೂರಿನಲ್ಲಿ ಪ್ರೌಢಶಾಲೆ ಮುಗಿಸಿದರು. ಬಳಿಕ ಕಾಲೇಜು ಶಿಕ್ಷಣವನ್ನು ದಾವಣಗೆರೆಯ ಮೋತಿ ವೀರಪ್ಪ ಕಾಲೇಜಿನಲ್ಲಿ ಮುಗಿಸಿದರು. ಮೈಸೂರಿನ ವಸಂತ ಮಹಲ್ ನಲ್ಲಿ ಟಿಸಿಎಚ್ ಮಾಡಿದರು. ಬಳಿಕ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. 2016ರಲ್ಲಿ ರಾಜ್ಯ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು.
ಅದ್ಬುತ ಕನ್ನಡ
ಪ್ರಕಾಶ್ ಗೆ ಕನ್ನಡದ ಮೇಲೆ ಸಾಕಷ್ಟು ಅಭಿಮಾನವಿದ್ದು,
ಅದ್ಭುತ ಕನ್ನಡ ಮಾತನಾಡುತ್ತಾರೆ. ತರಬೇತಿ ಪಡೆಯುವಾಗ, ಮುಂತಾದೆಡೆ ಕಾರ್ಯ ನಿರ್ವಹಿಸುವಾಗ ಸ್ಥಳೀಯರ ಮತ್ತು ಸಹೋದ್ಯೋಗಿಗಳ ಸಹಕಾರದಿಂದ ಇಷ್ಟು ಚೆನ್ನಾಗಿ ಕನ್ನಡ ಕಲಿಯಲು ಸಾಧ್ಯವಾಯಿತು ಎಂದು ಪ್ರಕಾಶ್ ವಿನೀತರಾಗಿ ನುಡಿಯುತ್ತಾರೆ. ಜೊತೆಗೆ ಭಾಷೆಯ ಪ್ರಾಮುಖ್ಯತೆ ಅರಿವಾಗಿದ್ದೂ ಒಂದು ಕಾರಣ, ಕೆಲಸ ಚೆನ್ನಾಗಿ ಮಾಡಿದರೆ ಜನರೂ ಸಹಕಾರ ನೀಡುತ್ತಾರೆ ಎಂಬ ಅಂಶ ಮನವರಿಕೆಯಾಯಿತು ಎಂದು ಪ್ರಕಾಶ್ ಹೇಳುತ್ತಾರೆ.
2016 ರಲ್ಲಿ ಡಿಎಸ್ಪಿಯಾಗಿ ನೇಮಕ
2016 ರಲ್ಲಿ ಡಿಎಸ್ ಪಿ ಯಾಗಿ ನಿಯೋಜಿತರಾದ ಪ್ರಕಾಶ್ ಅವರು ಬಹಳ ವಿನೂತನವಾದ ಕಾರ್ಯಯೋಜನೆಗಳನ್ನು ಹಮ್ಮಿಕೊಂಡರು. ಭದ್ರಾವತಿ, ಶಿವಮೊಗ್ಗ, ಹಾವೇರಿ, ಚಿತ್ರದುರ್ಗ, ಬಳ್ಳಾರಿಯಲ್ಲಿ ಕೆಲಸ ಮಾಡಿದ್ದು, ಸಾಕಷ್ಟು ಪ್ರಕರಣಗಳು ಇವರಿಗೆ ಮರೆಯಲಾಗದಂಥ ಮತ್ತು ಆತ್ಮತೃಪ್ತಿ ತಂದುಕೊಟ್ಟಿವೆ.
ಸಾಕಷ್ಟು ಕೊಲೆ ಪ್ರಕರಣದಲ್ಲಿ ಸಹಾಯ
ಡಿಎಸ್ಪಿ ಪ್ರಕಾಶ್ ದಾವಣಗೆರೆ ಜಿಲ್ಲೆಯ ಸಾಕಷ್ಟು ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ. ಇವರದ್ದೇ ಇಲಾಖೆಯ ಶ್ವಾನದಳ ಆರೋಪಿಗಳನ್ನು ತಲಾಶ್ ಮಾಡುವಲ್ಲಿ ಯಶಸ್ವಿ ಹೆಜ್ಜೆ ಇಟ್ಟಿದೆ. ಇದರಿಂದ ಡಾ. ಪ್ರಕಾಶ್ ರವರಿಗೆ ಬಹಳಷ್ಟು ಆತ್ಮಸ್ಥೈರ್ಯ ಮೂಡಿ ಮುನ್ನುಗ್ಗುವ ಛಲ, ಹುಮ್ಮಸ್ಸು ಉಂಟಾಯಿತು ಮತ್ತು ನಾವು ಹೋರಾಟ ಮಾಡಿದರೆ ಗೆದ್ದೇಗೆಲ್ಲುತ್ತೇವೆ ಎಂಬ ಭರವಸೆ ದೃಢವಾಯಿತು. ಅದಲ್ಲದೇ ಹಿರಿಯ ಅಧಿಕಾರಿಗಳಿಂದ ಮತ್ತು ಜನತೆಯಿಂದ ಪ್ರಶಂಸೆಗೂ ಪಾತ್ರರಾಗಿದ್ದಾರೆ
ಸಾಕಷ್ಟು ಪ್ರಶಸ್ತಿ ಸನ್ಮಾನ, ಸಿಎಂ ಪದಕ
ಇವರ ಸಾಧನೆಯನ್ನು ಗುರುತಿಸಿ ಸಾಕಷ್ಟು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿವೆ. 2025ರ ಶ್ರೇಷ್ಠ ಅಧಿಕಾರಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಎಲ್ಲೇ ಕೆಲಸ ಮಾಡಿದರೂ ಗಾಂಜಾ, ಅಫೀಮು ದಂಧೆ, ಗೂಂಡಾಗಿರಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಪರೋಕ್ಷವಾಗಿ ದಿಟ್ಟತನ ಮೆರೆದ ಇವರನ್ನು ಸೂಪರ್ ಕಾಪ್ ಅಂತಲೇ ಕರೆಯುತ್ತಾರೆ.
ನ್ಯಾಯ ಹಾಗೂ ಸಮಾನತೆಯನ್ನು ಕಾಪಾಡುವ ಪ್ರಕಾಶ್
ಏನೇ ಒತ್ತಡ ತಂದರೂ ಯಾವುದೇ ಪ್ರಕರಣದಲ್ಲಿ ಅನ್ಯರ ಹಸ್ತಕ್ಷೇಪಕ್ಕೆ ಇವರು ಆಸ್ಪದ ನೀಡುವುದಿಲ್ಲ. ಪೊಲೀಸ್ ಹುದ್ದೆಯಲ್ಲಿ ಕಾನೂನು ಉಲ್ಲಂಘನೆ ಆಗಬಾರದು, ನ್ಯಾಯ ಹಾಗೂ ಸಮಾನತೆಯನ್ನು ಕಾಪಾಡುವುದು ಅತಿಮುಖ್ಯ ಎನ್ನುವುದು ಇವರ ಅಭಿಪ್ರಾಯವಾಗಿದೆ. ಇನ್ನು ಇವರಿಗೆ ಒಂದು ದಿನವಾದರೂ ಈ ವೃತ್ತಿಗೆ ಬಂದದ್ದಕ್ಕೆ ಬೇಸರವಿಲ್ಲ. ತಾವು ಮೇಷ್ಟ್ರು ಆಗಿಯೇ ಮುಂದುವರಿಯಬೇಕಾಗಿತ್ತು ಎಂದು ಒಂದು ಸಾರಿಯೂ ಅನ್ನಿಸಿಲ್ಲ. ಸಮವಸ್ತ್ರ ಧರಿಸಿದಾಗಿನಿಂದಲೂ ಈ ವೃತ್ತಿ ದೈವಕೃಪೆಯಿಂದ ಒಲಿದಿದೆ ಎಂದೇ ಭಾವಿಸಿರುವುದಾಗಿ ತಿಳಿಸುತ್ತಾರೆ.
ನಮ್ಮ ಕರ್ತವ್ಯವನ್ನು ಜನ ಗೌರವಿಸಲಿ
ನನ್ನ ವೃತ್ತಿ ಜೀವನ ಪರಸ್ಪರ ಗೌರವದಿಂದ ಕೂಡಿದೆ ಜನರು ಅಪೇಕ್ಷಿಸುವುದನ್ನು ಪೊಲೀಸರು ಗೌರವಿಸಬೇಕು. ಅದೇ ರೀತಿ ಜನರು ಕೂಡ ಪೊಲೀಸರ ಕರ್ತವ್ಯ ನಿರ್ವಹಣೆಯನ್ನು ಗೌರವಿಸಬೇಕು ಎಂಬುದು ಇವರ ಕಳಕಳಿಯಾಗಿದೆ.
ಕ್ರೀಡೆಗೆ ಹೆಚ್ಚಿನ ಆದ್ಯತೆ
ಇವರ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಗಳ ಸಿಬ್ಬಂದಿಯ ನಡುವೆ ಕ್ರಿಕೆಟ್ ಪಂದ್ಯ, ಸೇರಿದಂತೆ ವಿವಿಧ ಪಂದ್ಯಗಳ ಆಯೋಜಿಸುವ ಮೂಲಕ ಸಿಬ್ಬಂದಿಗಳ ನಡುವೆ ಏಕತೆ, ಸೌಹಾರ್ದ ಮತ್ತು ಶಕ್ತಿಯ ಪುನಶ್ಚೇತನಕ್ಕೂ ನಾಂದಿ ಹಾಡಿದ್ದಾರೆ.ಇವರು ಹಣದ ಹಿಂದೆ, ಅಧಿಕಾರದ ಹಿಂದೆ, ಪ್ರಚಾರದ ಹಿಂದೆ ಬಿದ್ದವರಲ್ಲ. ನಗುಮುಖದ ಈ ಅಧಿಕಾರಿ ಸಿಬ್ಬಂದಿಗಳಿಗೆ ಸ್ಫೂರ್ತಿಯ ಚಿಲುಮೆ ಮತ್ತು ದುಷ್ಕರ್ಮಿಗಳಿಗೆ ಸಿಂಹ ಸ್ವಪ್ನವಾಗಿದ್ದಾರೆ.
ಹಣಗಳಿಕೆಗಿಂತ ಕೆಲಸದ ಪರಿಪೂರ್ಣತೆ ಮುಖ್ಯ
ಜೀವನದಲ್ಲಿ ನೆನಪಿಡಬೇಕಾದ ಶಿಕ್ಷಕರೆಂದರೆ ಶಾಲಾ ಶಿಕ್ಷಕರ ಜೊತೆಗೆ ತಂದೆ-ತಾಯಿಗಳೇ ಆಗಿದ್ದಾರೆ. ಏಕೆಂದರೆ ನಾವು ಇಂದು ಏನಾಗಿದ್ದೇವೋ ಅದಕ್ಕೆ ಅವರೇ ಕಾರಣ. ಹಣಗಳಿಕೆಗಿಂತ ನಿನ್ನ ಕೆಲಸದ ಪರಿಪೂರ್ಣತೆಯೇ ಮುಖ್ಯ. ನಿನ್ನ ವರ್ತನೆ ಸರಿಯಿದ್ದರೆ ದೇವರು ಧೈರ್ಯ ನೀಡುತ್ತಾನೆ ಎಂದು ನನ್ನ ತಂದೆ ತಾಯಿಗಳೇ ಸ್ಫೂರ್ತಿ ನೀಡಿದ್ದಾರೆ ಎಂದು ಪ್ರಕಾಶ್ ತಿಳಿಸುತ್ತಾರೆ.
ಕೊರೊನಾ ವೇಳೆ ಸಾಕಷ್ಟು ಕೆಲಸ
ಕೊರೋನಾ ಹೆಮ್ಮಾರಿ ನಾಡಿಗೆ ದಾಳಿ ಮಾಡಿದಾಗಿನಿಂದ ರಾಜ್ಯ ಪೊಲೀಸ್ ಇಲಾಖೆ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಅದರಲ್ಲೂ ಪ್ರಕಾಶ್ ದಾವಣಗೆ ರೆಯಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ.
ಬಡವರಿಗೆ ಸಹಾಯ
ಡಿಎಸ್ಪಿ ಪ್ರಕಾಶ್ ಕೇವಲ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿಲ್ಲ. ಮುಂದೆ ಹೋಗಿ ವಲಸಿಗರಿಗೆ, ಬಡವರಿಗೆ ಹೆಚ್ಚಿನ ಸಹಾಯ ಮಾಡುತ್ತಿದ್ದಾರೆ. ಮಾನವೀಯ ಸವಾಲಾಗಿ ಇದನ್ನು ಎದುರಿಸುವುದು ಕೂಡ ಪ್ರಮುಖವಾಗಿದೆ. ನಿಜವಾದ ಬಾಧಿತರನ್ನು ಪತ್ತೆ ಹಚ್ಚಿ ಅವರ ಪಟ್ಟಿ ಮಾಡಿಕೊಂಡು ನೆರವು ಕೊಡಿಸುತ್ತಿದ್ದಾರೆ.
ಪ್ರತಿಯೊಂದು ಪೊಲೀಸ್ ಠಾಣಾವಾರು ಗುಂಪುಗಳನ್ನಾಗಿ ಮಾಡಿ ವಲಸಿಗರಿಗೆ, ನಿರಾಶ್ರಿತರಿಗೆ, ವಸತಿರಹಿತರಿಗೆ ಇವರ ಕಾರ್ಯವ್ಯಾಪ್ತಿಗೆ ಬರುವ ವಿಭಾಗದಲ್ಲಿ ಸರ್ಕಾರದ ಕಡೆಯಿಂದ ಸಾಧ್ಯವಾದಷ್ಟು ನೆರವು ಕೊಡಿಸುತ್ತಿದ್ದಾರೆ. ಆದ್ದರಿಂದ ಭಗವಂತನು ಪ್ರಕಾಶ್ ಹಾಗೂ ಅವರ ಕುಟುಂಬವರ್ಗದವರಿಗೂ ಆಯುರಾರೋಗ್ಯ, ಸಿರಿಸಂಪದಗಳನ್ನು ಅನುಗ್ರಹಿಸಲಿ, ತನ್ಮೂಲಕ ಅವರ ಕಾರ್ಯದಕ್ಷತೆ ಹೆಚ್ಚಾಗಲಿ, ತನ್ಮೂಲಕ ನಾಡಿನ ಜನಜೀವನ ಹಸನಾಗಲಿ ಎಂದು ಅವರ ಹಿತೈಷಿಗಳು ಹಾರೈಸಿದ್ದಾರೆ.
…..
ಜಿಲ್ಲಾ ಸಶಸ್ತ್ರ ಮೀಸಲು ಪಡೆಯದ್ದು ಏನು ಕೆಲಸ?
* ಅಗತ್ಯವಿರುವ ಗಂಭೀರ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗಳನ್ನು ನಿಭಾಯಿಸಲು ಸ್ಥಾಪಿಸಲಾದ ಪೊಲೀಸ್ ಘಟಕಗಳಾಗಿವೆ.
* ಸಾರ್ವಜನಿಕ ಕಾರ್ಯಕ್ರಮಗಳು, ನಾಗರಿಕ ಅಶಾಂತಿ ಮತ್ತು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಕೆಲಸ
*ಪ್ರಮುಖ ಕಾವಲು ಹುದ್ದೆಗಳನ್ನು ನಿರ್ವಹಿಸುತ್ತಾರೆ ಮತ್ತು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತಾರೆ. ನಿಯೋಜನೆಯ ಪ್ರಕಾರವನ್ನು ಅವಲಂಬಿಸಿ, ಅವರು ಬಂದೂಕುಗಳನ್ನು ಹೊಂದಿರಬಹುದು ಅಥವಾ ಹೊಂದಿರದೇ ಇರಬಹುದು.
…..
ಡಿಎಎಆರ್ ಪ್ರಕಾಶ್ ಸಾಧನೆ ಏನು
*ಪ್ರಧಾನಿ ಮೋದಿ, ರಾಹುಲ್ ಗಾಂಧಿ,ಉತ್ತರ ಪ್ತದೇಶ ಸಿಎಂ ಯೋಗಿ ಆದಿತ್ಯನಾಥ್, ಅಮಿತ್ ಶಾ ಬಂದ ವೇಳೆ ಸೂಕ್ತ ಬಂದೋಬಸ್ತ್
*ಅಪರಾಧಿ ಚಟುವಟಿಕೆವುಳ್ಳ ವ್ಯಕ್ತಿಗಳನ್ನು ಕರೆದುಕೊಂಡು ಹೋಗುವ ವೇಳೆ ಸೂಕ್ತ ಬಂದೋ ಬಸ್ತ್
* ಹೆಚ್ಚು ಹಣವನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಹೋಗುವ ವೇಳೆ ಹೆಚ್ಚು ಭದ್ರತೆ
* ಸ್ವಾತಂತ್ರ್ಯ , ಗಾಂಧಿ ಜಯಂತಿ ವೇಳೆ, ಮೇಲಧಿಕಾರಿಗಳ ಸೂಚನೆ ಮೇರೆಗೆ ಕವಾಯತು, ಗಾರ್ಡ್ ಆಫ್ ಹಾರ್ನರ್
.
* ಪೊಲೀಸ್ ವಾಹನಗಳ ನಿರ್ವಹಣೆ, ಶ್ವಾನಗಳಿಗೆ ಹೆಚ್ಚು ಟ್ರೈನಿಂಗ್, ಪಾತಕಿಗಳನ್ನು ಹಿಡಿಯಲು ಹಿಂದಿನಿಂದ ಕೆಲಸ
* ಗಲಾಟೆ, ಧಾರ್ಮಿಕ ಹಬ್ಬದ ವೇಳೆ ಹೆಚ್ಚು ಭದ್ರತೆಯನ್ನು ಡಿಎಎಆರ್ ಪ್ರಕಾಶ್ ನೇತೃತ್ವದಲ್ಲಿ ನೀಡಲಾಗಿದೆ
* ಶಸ್ತ್ರಾಸ್ತ್ರಗಳ ತರಬೇತಿ, ಶಸ್ತ್ರಾಸ್ತ್ರಗಳ ಸೂಕ್ತ ನಿರ್ವಹಣೆ, ಹೊಸ ಪೊಲೀಸರಿಗೆ ಸೂಕ್ತ ತರಬೇತಿಯನ್ನು ಸಹ ಡಿಎಎಆರ್ ನೇತೃತ್ವದಲ್ಲಿ ನೀಡಲಾಗಿದೆ.
*ದಾವಣಗೆರೆಯಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ನಿರ್ಮಾಣದ ವೇಳೆ ಸೂಕ್ತ ಸಲಹೆ, ನಿರ್ವಹಣೆ ಜತೆಗೆ ಎಸ್ಪಿ ಮತ್ತು ಐಜಿಪಿಗೆ ಸೂಕ್ತ ಮಾಹಿತಿ ನೀಡಿದ್ದಾರೆ.
* ಪೊಲೀಸ್ ಕುಟುಂಬಗಳಿಗೆ ಕ್ರೀಡಾಕೂಟ, ರಕ್ತದಾನಶಿಬಿರ, ಹೋಳಿಹಬ್ಬ ಆಚರಣೆ ಸೇರಿದಂತೆ ನಾನಾ ಕ್ರೀಡಾ ಕೂಟಗಳನ್ನು ಆಯೋಜಿಸಿ ಒತ್ತಡದಲ್ಲಿನ ಸಿಬ್ಬಂದಿಗಳನ್ನು ಸಂತೋಷ ಪಡಿಸಿದ್ದಾರೆ.
…
ಪೊಲೀಸ್ ಕ್ರೀಡಾಕೂಟದ ವೇಳೆ ಸಮಗ್ರ ಪ್ರಶಸ್ತಿ
ಪ್ರತಿ ವರ್ಷ ನಡೆಯುವ ಪೊಲೀಸ್ ಕ್ರೀಡಾಕೂಟದ ವೇಳೆ ಸಮಗ್ರ ಪ್ರಶಸ್ತಿ ಪಡೆದುಕೊಳ್ಳುವಲ್ಲಿ ಡಿಎಆರ್ ಪ್ರಥಮ ಸ್ಥಾನಪಡೆಯುತ್ತಿದೆ. ಇದರಲ್ಲಿ ಡಿಎಎಆರ್ ಪ್ರಕಾಶ್ ಪಾತ್ರ ಪ್ರಮುಖವಾಗಿದೆ.
…
ಹಾವೇರಿಯಲ್ಲಿ ಅದ್ದೂರಿ ಬೀಳ್ಕೋಡುಗೆ
ವಿಧಾನಸಭೆ ಚುನಾವಣೆ ವೇಳೆ ಡಿಎಸ್ಪಿ ಪ್ರಕಾಶ್ ಹಾವೇರಿಗೆ ಹೋಗಿ ದಾವಣಗೆರೆಗೆ ಬರುವ ವೇಳೆ ಅಲ್ಲಿನ ಸಿಬ್ಬಂದಿಗಳು ಪುಷ್ಪಾರ್ಚನೆ ಮಾಡಿ ಅದ್ದೂರಿ ಬೀಳ್ಕೋಡುಗೆ ಕೊಟ್ಟಿದ್ದರು. ಇನ್ನೂ ಶಿವಮೊಗ್ಗದಲ್ಲಿ ಕೆಲಸ ಮಾಡುವ ತನ್ನ ಅಧೀನ ಸಿಬ್ಬಂದಿಗಳ ಪ್ರೀತಿಗಳಿಸಿದ್ದರು.
…
ಪೊಲೀಸ್ ಇಲಾಖೆ ಶ್ವಾನ ಮೃತಪಟ್ಟವೇಳೆ ಕಣ್ಣೀರು ಅವುಗಳಿಗೆ ಸಮಾಧಿ
ಪೊಲೀಸ್ ಇಲಾಖೆಯಲ್ಲಿ ಕ್ರೈಂ ಲೋಕದ ಪಾತಕಿಗಳನ್ನು ಹಿಡಿದ ಶ್ವಾನಗಳು ಮೃತಪಟ್ಟಾಗ ಅವುಗಳ ಸಾಧನೆಗಳನ್ನು ಕಂಡು ಡಿಎಎಆರ್ ಪ್ರಕಾಶ್ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಮೃತ ಶ್ವಾನಗಳಿಗೆ ಗೌರವ ಸೂಚಿಸಿ ಸಮಾಧಿಕಟ್ಟಿಸುವಲ್ಲಿ ಇವರ ಪಾತ್ರ ಪ್ರಮುಖ
….