


ಭದ್ರಾವತಿ ಹೊಸ ಸಿದ್ದಾಪುರದಲ್ಲಿ ರಾತ್ರಿ ಘೋರ ಕೃತ್ಯ
ಬರ್ತಡೇ ದಿನ ಗುರಾಯಿಸಿದ್ದ ಎಂಬ ವಿಚಾರಕ್ಕೆ ಗಲಾಟೆ
ಸತ್ಯರಾಜ್ ಹಲ್ಲೆಗೊಳಾದ ವ್ಯಕ್ತಿ, ಪೊಲೀಸರಿಂದ ತಲಾಶೆ
ಪಿಎಸ್ಐ ಟಿ.ರಮೇಶ್, ಭಾರತಿಯವರಿಂದ ಹುಡುಕಾಟ
ಭದ್ರಾವತಿ ; ಕ್ರೈಂ ಸಿಟಿ ಭದ್ರಾವತಿಯಲ್ಲಿ ದಿನೇ, ದಿನೇ ಕ್ರೈಂಗಳು ಹೆಚ್ಚಾಗುತ್ತಿದ್ದು, ಸಣ್ಣ, ಪುಟ್ಟ ವಿಚಾರಕ್ಕೆ ಹಲ್ಲೆ, ಪ್ರತಿ ಹಲ್ಲೆ ನಡೆಯುತ್ತಿದೆ..ಇದರಿಂದ ನಾಗರಿಕರು ಭಯಭೀತಿಯಾಗಿದ್ದಾರೆ.
ಹೌದು..ತಾಲೂಕಿನ ಹೊಸ ಸಿದ್ದಾಪುರದ ಬೇಕರಿ ಬಳಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ತಡರಾತ್ರಿ ಆಯುಧದಿಂದ ಹಲ್ಲೆ ಮಾಡಲಾಗಿದ್ದು, ಸಿದ್ದಾಪುರ ಭೀತಿಯಿಂದ ಓಡಾಡಬೇಕಾದ ಸ್ಥಿತಿ ಎದುರಾಗಿದೆ.

ಸತ್ಯರಾಜ್ (30) ಗಾಯಗೊಂಡ ಯುವಕನಾಗಿದ್ದು, ವಿನಯ್, ಶನಿ, ಭೈರವ ಎಂಬುವರು ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಸತ್ಯರಾಜ್ ಅಕ್ಕ ದೀಪ ಎಂಬುವರು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನೂ ಪಿಎಸ್ಐ ಗಳಾದ ಟಿ.ರಮೇಶ್, ಭಾರತಿ ಆರೋಪಿಗಳ ಬಲೆಗಾಗಿ ತಲಾಶೆ ನಡೆಸಿದ್ದಾರೆ.

ಏನಿದು ಘಟನೆ
ಹಲ್ಲೆಗೊಳಗಾದ ಸತ್ಯರಾಜ್ ಹೊಸಸಿದ್ದಾಪುರದಲ್ಲಿ ತಂದೆ-ತಾಯಿಯೊಂದಿಗೆ ಸಿವಿಲ್ ಕಂಟ್ರಾಕ್ಟರ್ ವರ್ಕ ಮಾಡಿಕೊಂಡು ವಾಸವಿದ್ದರು. ಅಕ್ಕ ದೀಪ ಮಗಳಿಗೆ ರಜೆ ಇದ್ದ ಕಾರಣ ತಾಯಿ ಮನೆಗೆ 04 ದಿವಸದ ಹಿಂದೆ ಬಂದಿದ್ದಾರೆ. ಈ ನಡುವೆ ಅಕ್ಕ ದೀಪ ಸತ್ಯರಾಜ್‌ನಿಗೆ ಮನೆಯಲ್ಲಿ ದೇವರ ಪೂಜೆ ಮಾಡಲು ದೇವರ ಪೋಟೋ ತೆಗೆದುಕೊಂಡು ಬಾ ಎಂದು ರಾತ್ರಿ
ಕಳಿಸಿದ್ದಾರೆ. ಇದಾದ ಬಳಿಕ ಸುಮಾರು 09-30 ಪಿ ಎಂ ಗಂಟೆ ಸಮಯದಲ್ಲಿ ಪೋನ್ ಮಾಡಿ ಕೇಳಿದಾಗ ನಾನು ನನ್ನ ಸ್ನೇಹಿತ ಪ್ರದೀಪ್ ಹೋಟೇಲ್ ನಲ್ಲಿ ಊಟ ಮಾಡುತ್ತಿದ್ದೆನೆ.ಊಟ ಮುಗಿಸಿಕೊಂಡು ಬರುತ್ತೇನೆ
ಎಂದು ಸತ್ಯ ರಾಜ್ ಅಕ್ಕನಿಗೆ ಹೇಳಿದ್ದಾರೆ. ಇದಾದ ಬಳಿಕ ಅಕ್ಕ ಸುಮಾರು 11-30 ಪಿ ಎಂ ಸಮಯದಲ್ಲಿ ತಮ್ಮನಿಗೆ ಪೋನ್ ಮಾಡಿದಾಗ ಬ್ಯೂಸಿ ಬಂದಿದೆ. ನಂತರ ಪ್ರದೀಪ ಎಂಬುವನು ಪೋನ್ ಮಾಡಿ ಅಕ್ಕ ಸುಮಾರು 11-30 ಗಂಟೆ ಸಮಯದಲ್ಲಿ ಹೊಸಸಿದ್ದಾಪುರ ಬೇಕರಿ ಹತ್ತಿರ ವಿನಯಾ ಮತ್ತು ಶನಿ ಅವರು ಸತ್ಯ ಬೈಕಿನಲ್ಲಿ ಬರುವಾಗ ಅಡ್ಡಹಾಕಿ ಕೊಲೆ ಮಾಡುವ ಉದ್ದೇಶದಿಂದ ಆಯುಧದಿಂದ ಸತ್ಯನಿಗೆ ಬಲಮೊಣಕಾಲಿಗೆ ಹಾಗೂ ತಲೆಯ ಮಧ್ಯ ಭಾಗಕ್ಕೆ ಹೊಡೆದಿದ್ದು ತಲೆಯಲ್ಲಿ ತೀವ್ರತರವಾದ ಗಾಯವಾಗಿದೆ. ಇನ್ನೂ ಎದೆಯ ಭಾಗಕ್ಕೆ ಎರಡುಕಡೆ ಗುದ್ದಿದ್ದು ಒಳಭಾಗ ಪೆಟ್ಟಾಗಿದೆ. ನಂತರ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ ಎಂದು ಅಕ್ಕನಿಗೆ ಹೇಳುತ್ತಾರೆ. ಇದಾದ ಬಳಿಕ ಅಕ್ಕ ತಮ್ಮನನ್ನು ಶಿವಮೊಗ್ಗ ಮ್ಯಾಕ್ಸ್ ಹಾಸ್ಪಿಟಲ್ ಕರೆದುಕೊಂಡು ಹೋಗಿದ್ದು, ಐಸಿಯುನಲ್ಲಿ ಇದ್ದಾರೆ
ಘಟನೆಗೆ ಏನು ಕಾರಣ?
ಸತ್ಯರಾಜ್ ತನ್ನ ಹುಟ್ಟುಹಬ್ಬದ ದಿನ ಡ್ಯಾನ್ಸ್ ಮಾಡುವ ವೇಳೆ ಗುರಾಯಿಸಿದ ಎಂಬ ಕಾರಣಕ್ಕೆ ವಿನಯ್, ಶನಿ, ಭೈರವ ಎಂಬುವರ ನಡುವೆ ಜಗಳ ಆಗಿದೆ.
ನಂತರ ಹಿರಿಯರ ಸಮಕ್ಷಮ ರಾಜಿ ಮಾಡಲಾಗಿತ್ತು. ಆದರೆ ಅದೇ ದುರುದ್ದೇಶದ ವಿಚಾರದಲ್ಲಿ ರಾತ್ರಿ 11-30 ಪಿ ಎಂ ಸಮಯದಲ್ಲಿ ಹರಿತವಾದ ಆಯುಧದಿಂದ ವಿನಯಾ ಮತ್ತು ಶನಿ ಇನ್ನೊಬ್ಬ ಭೈರವನು ಸೇರಿ ಕೊಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ಮೂರು ಜನರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಅಕ್ಕ ದೂರು ನೀಡಿದ್ದಾರೆ. ಪೊಲೀಸರು ಭದ್ರಾವತಿ ನ್ಯೂ 102/2025 ಕಲಂ 126(2),109(1),115(2),ಸಹಿತ 3(5) BNSS ACT ಪ್ರಕಾರ ದೂರು ದಾಖಲಿಸಿದ್ದಾರೆ. ಒಟ್ಟಾರೆ ಈ ಊರಿನಲ್ಲಿ ರಾತ್ರಿ ಓಡಾಡಬೇಕಾದರೆ ಜನ ಒಂದಿಷ್ಟು ಭೀತಿಯಲ್ಲಿಯೇ ಹೋಗಬೇಕಿದೆ.