


ದಾವಣಗೆರೆ : ಹಠ ಮಾಡಿ ಸಿಎಂ ಸಿದ್ದರಾಮಯ್ಯ ಜಾತಿಗಣತಿ ವರದಿ ಮಂಡಿಸಿದರೆ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಿದ ನಂತರ ಮಹಾಸಭಾದ ಮುಂದಿನ ನಡೆ ಏನು ಎನ್ನುವುದನ್ನು ತಿಳಿಸಲಾಗುವುದು. ವರದಿ ಬಿಡುಗಡೆಗೆ ವೀರಶೈವ ಸಮಾಜ ಬಾಂಧವರು ಮತ್ತು ಮಠಾಧೀಶರು ಬೇಡ ಎನ್ನುತ್ತಿದ್ದಾರೆ. ಆದರೆ ಸರ್ಕಾರ ಹಠ ಮಾಡಿ ವರದಿ ಬಿಡುಗಡೆ ಮಾಡಿದರೆ ಮಹಾಸಭಾದ ಮುಂದೆ ಏನು ಮಾಡಬೇಕು ಎನ್ನುವುದನ್ನು ನಂತರ ತೀರ್ಮಾನ ಕೈಗೊಳ್ಳಲಿದೆ ಎಂದರು.
