
ಚನ್ನಗಿರಿ : ದೇವಾಲಯಗಳು ಕೇವಲ ಪೂಜೆ, ಪ್ರಸಾದಕ್ಕಷ್ಟೆ ಸೀಮಿತವಾಗಬಾರದು ಶೈಕ್ಷಣಿಕ, ಸಾಂಸ್ಕೃತಿಕ, ಅನ್ನಾದಾನ ಸೇವಾಕೇಂದ್ರದ ಜೋತೆಗೆ ಮಕ್ಕಳನ್ನು ಸಂಸ್ಕಾರಯುತರನ್ನಾಗಿಸುವ ಕೇಂದ್ರವಾಗಬೇಕು, ೧೯೮೦ ಕ್ಕಿಂತ ಹಿಂದೆ ದೇವರ ಮೂರ್ತಿ ಕಲ್ಲಿನ ಮೂರ್ತಿಗಳಿದ್ದವು ಮನುಷ್ಯರ ಮನಸ್ಸು ಬಂಗಾರವಾಗಿತ್ತು ಇತ್ತಿಚಿನ ದಿನಗಳಲ್ಲಿ ದೇವರ ಮೂರ್ತಿ ಬೆಳ್ಳಿ ಬಂಗಾರವಾಗುತ್ತಿದ್ದು ಮನುಷ್ಯನ ಮನಸ್ಸು ಮಾತ್ರ ಕಲ್ಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ದೇವಾಲಯ ಸಂವರ್ಧನಾ ಸಮಿತಿಯ ಸಂಯೋಜಕರಾದ ಮನೋಹರ ಮಠದ್ ತಿಳಿಸಿದರು.
ಚನ್ನಗಿರಿ ನಗರದ ಶ್ರೀ ರಾಘವೇಂದ್ರ ಸ್ವಾಮಿ ಸಮುದಾಯ ಭವನದಲ್ಲಿ ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ ಚನ್ನಗಿರಿ ವತಿಯಿಂದ ಆಯೋಜಿಸಲಾಗಿದ್ದ ಹಿಂದೂ ದೇವಾಲಯ ಭಕ್ತ ಮಂಡಳಿ ಸದಸ್ಯರ ಚಿಂತನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಗುಡಿ ಜನರ ಜೀವನಾಡಿ. ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳು ಸಮಾಜವನ್ನು ಒಂದುಗೂಡಿಸುವ ಕೇಂದ್ರ ಬಿಂದು. ಮಾತ್ರವಲ್ಲದೆ ಸಭ್ಯತೆ, ಸಂಸ್ಕೃತಿ, ನಂಬಿಕೆ, ಹಾಗೂ ಪರಂಪರೆಗಳು ಮೈಗುಡಿಸಿಕೊಂಡಿರುವುದಕ್ಕೆ ಮೂಲ ಕಾರಣ ನಮ್ಮ ದೇವಾಲಯಗಳೇ ಆಗಿವೆ.
ಹಿಂದೂ ದೇವಾಲಯಗಳು ಹಿಂದೂ ಸಮಾಜದ ಶಕ್ತಿಕೇಂದ್ರ ಆಗಬೇಕು. ಸಂಘಟಿತಾ ಹಿಂದೂ ಸಮಾಜ ಸಶಕ್ತ ಭಾರತ ಆಗಲು ದೇವಾಲಯ ಕೇಂದ್ರಿತ ಸುರಕ್ಷಾ ಸಂಸ್ಕಾರ ಚಟುವಟಿಕೆ ಆಗುವ ದೃಷ್ಟಿಯಿಂದ ದೇವಾಲಯ ಸಂವರ್ಧನ ಸಮಿತಿ ವತಿಯಿಂದ ದೇವಾಲಯ ಭಕ್ತ ಮಂಡಳಿಯವರ ಚಿಂತನಾ ಸಭೆಯನ್ನುಗಳನ್ನು ನಡೆಸಲಾಗುತ್ತಿದೆ.


ರಾಜ್ಯದಲ್ಲಿ ಸುಮಾರು ೨.೫ ಲಕ್ಷಕ್ಕೊ ಹೆಚ್ಚು ದೇವಾಲಯಗಳಿದ್ದು ಪ್ರತಿ ಗ್ರಾಮದಲ್ಲೂ ದೇವಾಲಯಗಳು ನಿರ್ಮಾಣವಾಗಿದ್ದು ಹಿಂದೂ ಧರ್ಮದ ವೈಶಿಷ್ಟ ಪ್ರತಿ ನಿತ್ಯ ಪೂಜೆ ಪುನಸ್ಕರಗಳ ಹೋಮ ಅವನ ಚಟುವಟಿಕೆಗಳ ಮೂಲಕ ಭಗವಂತನ ಆವಾಸಸ್ಥಾನ ವಾಗುತ್ತದೆ ನಮ್ಮ ಊರಿನಲ್ಲಿರುವ ದೇವಸ್ಥಾನ ಶ್ರದ್ದಾ ಕೇಂದ್ರ, ಭಕ್ತಿಕೇಂದ್ರ, ಸೇವಾಕೇಂದ್ರ ಚಟುವಡಿಕೆಗಳನ್ನು ಹೊಂದಿದ ಕೇಂದ್ರಗಳಾನ್ನಾಗಿ ಮಾಡುವುದೇ ನಮ್ಮ ಕಾರ್ಯವಾಗಬೇಕು ಎಂದು ತಿಳಿಸಿದರು
ಕಾರ್ಯಕ್ರಮದ ವಕ್ತಾರರು ಶಿವಮೂಗ್ಗ ರಾ,ಸ್ವ,ಸಂ ವಿಭಾಗ ಸಹ ಕಾರ್ಯವಾಹ ಮಧುಕರ ಮತ್ತೂರು ಮಾತನಾಡಿ ಭಾರತ ಭೂಮಿ ಪುಣ್ಯಭೂಮಿ ಇಂತಹ ದೇಶದಲ್ಲಿ ನಾವೆಲ್ಲರೂ ಸಹ ವಾಸ ಮಾಡುತ್ತಿರುವುದು ಪುಣ್ಯ, ದೇವರಿಂದ ನಮಗೆ ಶಕ್ತಿ ಸೀಗಬೇಕು ನಮ್ಮಿದ್ದ ದೇವರಿಗೆ ಶಕ್ತಿ ಸಿಗುವುದಿಲ್ಲ, ಅದ್ದರಿಂದ ನಮಗೆ ದೇವಾಲಯಗಳೆ ಶಕ್ತಿ ಕೇಂದ್ರವಾಗಬೇಕು ದೇಶÀದಲ್ಲಿ ಎಲ್ಲೆಲ್ಲಿ ನದಿಗಳಿವೆ ಅಲ್ಲೆಲ್ಲ್ಲಾ ದೇವಾಲಯಗಳು ಇರುವುದು ನಮ್ಮ ದೇಶದ ಸಂಸ್ಕೃತಿ ಪರಂಪರೆ ಧಾರ್ಮಿಕ ನೆಲೆಗಳು ದೇವಾ¯ಯಗಳನ್ನು ಆರಾಧನೆಮಾಡುವುದು ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರಕ್ಕೆ ಮಾತ್ರ ಮಿಸಲು ಇಡುವುದಲ್ಲ ಎಲ್ಲರನ್ನೂ ಒಂದು ಗುಡಿಸುವ ಕಾರ್ಯ ದೇವಾಲಗಳದ್ದಾಗಬೇಕು, ಹಿಂದಿನ ಕಾಲದ ಯುನಿವರ್ಸಿಟಿಗಳನ್ನು ಪೋಷಣೆ ಮಾಡುತ್ತಿದ್ದ್ದು ದೇವಾಲಯಗಳು ಶಿಕ್ಷಣ ಕೇಂದ್ರಗಳೆಲ್ಲಾವು ಧಾರ್ಮಿಕ ಸಾಮಾಜಿಕ ನೆಲೆಗಳನ್ನು ಕಂಡುಕೊಂಡು ಸಮಾಜಗಳಲ್ಲಿ ವ್ಯಾಜ್ಯಗಳನ್ನು ತೀರ್ಮಾನ ಮಾಡಲು ದೇವಾಲಯಗಳಿಗೆ ಹೋಗುವ ಪದ್ದತಿ ಇತ್ತು ಇಂದು ಮುಂದುವರೆದು ನ್ಯಾಯಾದ ಕೇಂದ್ರವಾಗಿ ದೇವಾಲಯಗಳು ಸಮರಸದ ಬಾಳ್ವಗೆ ದೇವಾಲಯ ಪ್ರಮುಖ ಪಾತ್ರದೊಂದಿಗೆ ಶ್ರದ್ಧಾ ಕೇಂದ್ರಗಳಾಗಿಯು ಸಹ ದೇವಾಲಯಗಳು ನೋಡಬಹುದು.
ದೇವಾಲಯಗಳು ಶೈಕ್ಷಣಿಕ, ಸೇವಾ ಚಟುವಟಿಕೆಯ ಕೇಂದ್ರ ಉಚಿತ ಪಾಠ, ಅನ್ನಾ ದಾನ , ಸಾಮಾಜದಲ್ಲಿ ವಂಚಿತರು ಪೀಡಿತರ ನೆರವಿಗೆ ನಿಲ್ಲುವಂತಾಗಬೇಕು ದೇವಾಲಯಗಳಲ್ಲಿ ಎಲ್ಲರಿಗೂ ಮುಕ್ತ ಪ್ರವೇಶವಾಗಿರುವಂತೆ ನೋಡಿಕೊಳ್ಳಬೇಕು ಸಂಸ್ಕಾರದಜೋತೆಗೆ ಸಂಸ್ಕೃತಿಯ ಕೇಂದ್ರವನ್ನಾಗಿ ದೇವಾಲಯ ಅಭಿವೃದ್ಧಿ ಸಮಿತಿಯನ್ನು ರಚಿಸಿ ಅದರಿಂದ ಈ ಎಲ್ಲಾ ಕಾರ್ಯಗಳನ್ನು ಮಾಡುವುದರಿಂದ ಸಮಾಜ ಒಗ್ಗೂಡಿಸಿ ಧರ್ಮ ರಕ್ಷಣೆ ಮಾಡಲು ನಾವೆಲ್ಲರೂ ಬದ್ದರಾಗಬೇಕು ಎಂದು ನುಡಿದರು
ಈ ಸಂದರ್ಭದಲ್ಲಿ ಶಿವಮೂಗ್ಗ ವಿಭಾಗ ದೇವಾಲಯ ಸಂವರ್ಧನಾ ಸಮಿತಿಯ ಸಂಯೋಕ್ ಓಂಕಾರ್, ದಾವಣಗೆರೆ ಜಿಲ್ಲಾ ದೇವಾಲಯ ಸಂವರ್ಧನಾ ಸಮಿತಿಯ ಜಿಲ್ಲಾ ಸಹ ಸಂಯೋಜಕ್ ವಸಂತ್ ಕುಮಾರ್.ಎಂ. ದಾವಣಗೆರೆ ಜಿಲ್ಲಾ ಗೋ ಸೇವಾ ಸಂಯೋಜಕ್ ಶಿವಲಿಂಗಪ್ಪ, ಚನ್ನಗಿರಿ ತಾ. ದೇವಾಲಯ ಸಂವರ್ಧನಾ ಸಮಿತಿಯ ಸಂಯೋಜಕ್ ಸ್ವಾಮಿ, ಗ್ರಾಮ ವಿಕಾಸ ಶಿವಮೊಗ್ಗ ವಿಭಾಗ ಸಂಯೋಜಕ್ ಓಂಕಾರಪ್ಪ ಹೆಚ್. ಡಿ. ಹೊನ್ನೆಬಾಗಿ, ದಾವಣಗೆರೆ ಜಿಲ್ಲಾ ಸಹ ಕಾರ್ಯವಾಹ ಯಶವಂತ್, ದಾವಣಗೆರೆ ಜಿಲ್ಲಾ ರಾ.ಸ್ವ.ಸಂಘದ ಸೇವಾ ಪ್ರಮುಖ್ ವೇದಾನಂದ, ವಿ.ಹಿಂ. ಪ. ಕೋಶಾದ್ಯಕ್ಷರಾದ ಕೆ.ಹೆಚ್ ಮಂಜುನಾಥ್, ಮಧು, ರಾ,ಸ್ವಾ,ಸಂ, ತಾಲ್ಲೂಕ್ ಕಾರ್ಯವಾಹ ಮಧುಸೂದನ್, ಸಹಕಾರ್ಯವಾಹ ಹರೀಶ್ ಬಾಬು, ಬೂದಿಸ್ವಾಮಿ ದೈವ ಸಂಸ್ಕೃತಿ ಪ್ರತಿಷ್ಠಾನ ಹೊದಿಗೆರೆ, ಶಿವ ಕೇಶವ ಭಜನ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸುಜಾತ, ಬಾಲಾಜಿ ಭಜನ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸುವರ್ಣಮ್ಮ, ವೀಣಾ, ಗಂಗಮ್ಮ , ಕಶ್ಯಪ್ ಕೃಷ್ಣಮೂರ್ತಿ, ತಾಲ್ಲೂಕಿನ ಹಲವಾರು ದೇವಾಲಯಗಳ ಕಮೀಟಿಯ ಸದಸ್ಯರುಗಳು ಭಾಗವಹಿಸಿದ್ದರು

