ನಂದೀಶ್ ಭದ್ರಾವತಿ ದಾವಣಗೆರೆ
ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ ಹಾಗೂ ಆಗ್ನೆಯ, ನೈಋತ್ಯ ಪದವೀಧರ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದ್ದು, ರಾತ್ರಿ ವೇಳೆಗೆ ಫಲಿತಾಂಶ ಪ್ರಕಟವಾಗುವ ಸಂಭವ ಇದೆ. ಸಂಜೆ ಆರು ಗಂಟೆಗೆ ಆಗ್ನೇಯ ಕ್ಷೇತ್ರದ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಇದ್ದರೆ, ನೈಋತ್ಯದಲ್ಲಿ ಬಿಜೆಪಿ ಮುನ್ನಡೆ ಇತ್ತು.
ವಿಧಾನ ಪರಿಷತ್‌ನ ಪದವೀಧರರು ಮತ್ತು ಶಿಕ್ಷಕರ ಆರು ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಜೂನ್ 3 ರಂದು ಈ ಕ್ಷೆತ್ರಗಳಿಗೆ ಮತದಾನ ನಡೆದಿತ್ತು. ಮತ ಪತ್ರ ಹಾಕಿದ್ದು, ಪ್ರಾಶಸ್ತö್ಯದ ಮತಗಳನ್ನು ಎಣಿಕೆ ಮಾಡಬೇಕಾಗಿರುವುದರಿಂದ ಫಲಿತಾಂಶ ವಿಳಂಬವಾಗಲಿದೆ.
ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಆರು, ಬಿಜೆಪಿಯ ನಾಲ್ಕು, ಜೆಡಿಎಸ್‌ನ ಇಬ್ಬರು ಅಭ್ಯರ್ಥಿಗಳು ಸೇರಿದಂತೆ ಒಟ್ಟು 78 ಅಭ್ಯರ್ಥಿಗಳು ಚುನಾವಣಾ ಕಣದಲಿದ್ದು, ಬುಧವಾರ ಬೆಳಗ್ಗೆ 8ಕ್ಕೆ ಮತಎಣಿಕೆ ಆರಂಭವಾಯಿತು. ಮೈಸೂರಿನ ಮಹಾರಾಣಿ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರ ಕ್ಷೇತ್ರಗಳ ಬೆಂಗಳೂರು ಸರ್ಕಾರಿ ಕಲಾ ಕಾಲೇಜು, ಬೆಂಗಳೂರು ಪದವೀಧರ ಮತ್ತು ಆಗ್ನೆಯ ಶಿಕ್ಷಕರ ಕ್ಷೆತ್ರಗಳಮತ ಎಣಕೆ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ನಡೆಯಿತು.
ಪ್ರತೀ ಕ್ಷೇತ್ರಕ್ಕೂ 14 ಟೇಬಲ್?ಗಳಿದ್ದು, ಒಬ್ಬ ಮೇಲ್ವಿಚಾರಕ ಹಾಗೂ ಸಹಾಯಕರ ನೇತೃತ್ವದಲ್ಲಿ ಎಣಿಕೆ ನಡೆಯುತ್ತಿದೆ. ಚಲಾವಣೆಯಾದ ಒಟ್ಟು ಮತಗಳನ್ನು ಮಿಶ್ರಣ ಮಾಡಿ ಅವುಗಳನ್ನು 25 ಬ್ಯಾಲೆಟ್ ಪೇಪರ್‌ಗಳಲ್ಲಿ ಬಂಡಲ್ ಮಾಡಿದ ನಂತರ ಎಣಿಕೆ ಮಾಡಲಾಗುತ್ತಿದೆ.
ದಕ್ಷಿಣ ಶಿಕ್ಷಕರ ಕ್ಷೇತ್ರ: ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರ ಬರಲಿದೆ. ಇಲ್ಲಿ ಒಟ್ಟು 20,549 ಮತದಾರರಿದ್ದಾರೆ. ಈ ಪೈಕಿ 18,979 ಮತ ಚಲಾವಣೆಯಾಗಿದೆ. ಶೇ.88.07 ಮತದಾನವಾಗಿದೆ. ಕ್ಷೇತ್ರದಲ್ಲಿ 11 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ವಿವೇಕಾನಂದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮರೀತಿಬ್ಬೇಗೌಡ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು.
ನೈರುತ್ಯ ಶಿಕ್ಷಕರ ಕ್ಷೇತ್ರ:
ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಕೊಡಗು, ಶಿವಮೊಗ್ಗ, ಉಡುಪಿ ಜಿಲ್ಲೆಗಳು ಈ ವ್ಯಾಪ್ತಿಗೆ ಬರುತ್ತದೆ. 23,402 ಮತದಾರರಿದ್ದು, 19,320 ಶಿಕ್ಷಕರು ಮತ ಚಲಾಯಿಸಿದ್ದಾರೆ. ಒಟ್ಟಾರೆ ಶೇ.82.56ರಷ್ಟು ಮತದಾನವಾಗಿದೆ. 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೈತ್ರಿ ಅಭ್ಯರ್ಥಿ ಎಸ್.ಎಲ್.ಬೋಜೇಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ನಡುವೆ ಸ್ಪರ್ಧೆಯಿತ್ತು.
ನೈರುತ್ಯ ಪದವೀಧರ ಕ್ಷೇತ್ರ
ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಕೊಡಗು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳು ನೈರುತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಇಲ್ಲಿ 66,529 ಮತದಾರರು ಮತ ಚಲಾಯಿಸಿದ್ದಾರೆ. ಒಟ್ಟು ಮತದಾರರ ಸಂಖ್ಯೆ 85,089. ಶೇ.78.19ರಷ್ಟು ಮತದಾನವಾಗಿದೆ. 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ಡಾ.ಧನಂಜಯ ಸಾರ್ಜೀ ಹಾಗೂ ಆಯನೂರು ಮಂಜುನಾಥ್ ನಡುವೆ ನೇರ ಸ್ಪರ್ಧೆಯಿದೆ. ಬಿಜೆಪಿಯಿಂದ ಟಿಕೆಟ್ ಸಿಗದೆ ಬಂಡಾಯವಾಗಿ ಸ್ಪರ್ಧಿಸಿರುವ ರಘುಪತಿ ಭಟ್ ಸ್ಪರ್ಧೆಯಿಂದ ಫಲಿತಾಂಶ ಕೆರಳಿಸಿದೆ.
ಸಂಜೆ 6ಕ್ಕೆ ಆಗ್ನೇಯ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ
ದಾವಣಗೆರೆ : ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ಮೈಸೂರಿನಲ್ಲಿ ಪ್ರಾರಂಭವಾಗಿದ್ದು, ಭಾರತೀಯ ಜನತಾಪಾರ್ಟಿ ಮುನ್ನಡೆಯಲ್ಲಿತ್ತು. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಿ.ಟಿ.ಶ್ರೀನಿವಾಸ್ ಮುನ್ನಡೆಯಲ್ಲಿದ್ದರು. ಸದ್ಯ ಮಾಹಿತಿ ಪ್ರಕಾರ ಫಲಿತಾಂಶದ ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದ ವೇಳೆ ಕಾಂಗ್ರೆಸ್ ಡಿ.ಟಿ.ಶ್ರೀನಿವಾಸ್ – 5170 ಮತಗಳು ಬಿಜೆಪಿಯ ಡಾ.ವೈ.ಎ.ನಾರಾಯಣ ಸ್ವಾಮಿಗೆ 4382, ವಿನೋದ ಶಿವರಾಜ್‌ಗೆ 3658 ಮತಗಳು ಬಿದ್ದಿದ್ದು, ಡಿ.ಟಿ.ಶ್ರೀನಿವಾಸ್ 788 ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ. ಈ ಬಾರಿ ಡಿ.ಟಿ.ಶ್ರೀನಿವಾಸ ಹಿರಿಯೂರಿನ ಮಾಜಿ ಶಾಸಕಿ ಕೆ.ಪೂರ್ಣಿಮಾ ಪತಿಯಾಗಿದ್ದಾರೆ.
ನೈಋತ್ಯ ಕ್ಷೇತ್ರದಲ್ಲಿ ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದ ವೇಳೆ ಡಾ.ಧನಂಜಯ್ ಸರ್ಜಿ ಮುನ್ನಡೆಯಲ್ಲಿದ್ದರು. ಎರಡನೇ ಸ್ಥಾನದಲ್ಲಿ ಕಾಂಗ್ರೆಸ್‌ನ ಆಯನೂರು ಮಂಜುನಾಥ್, ಮೂರನೆ ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್, ನಾಲ್ಕನೆ ಸ್ಥಾನದಲ್ಲಿ ಕೈ ಬಂಡಾಯ ಅಭ್ಯರ್ಥಿ ಎಸ್.ಪಿ.ದಿನೇಶ್ ಇದ್ದರು.
ಮೊದಲ ಸುತ್ತಿನ ಎಣಿಕೆ ಮುಕ್ತಾಯ ಬಿಜೆಪಿ ಮುನ್ನಡೆಯಲ್ಲಿತ್ತು. ಎರಡನೇ ಸುತ್ತಿನಲ್ಲಿಯೂ ಓಟ ಮುಂದುವರಿಸಿದ ಸರ್ಜಿ, ಎರಡನೇ ಸುತ್ತಿನಲ್ಲಿ 25 ಸಾವಿರ ಮತ ಪಡೆದರು.ಧನಂಜಯ ಸರ್ಜಿಗೆ 11200 ಮತಗಳು, ಆಯನೂರು ಮಂಜುನಾಥ್‌ಗೆ 7700 ಮತಗಳು ಬಿದ್ದವು. ಈ ಸಮಯದಲ್ಲಿ 40000 ಮತಗಳ ಎಣಿಕೆ ನಡೆಯಬೇಕಿದ್ದು,
14 ಸಾವಿರ ಮತ ಎಣಿಕೆಯಲ್ಲಿ ಸರ್ಜಿಗೆ 7800, ಆಯನೂರು ಮಂಜುನಾಥ್‌ಗೆ 5000 ಮತ, ರಘುಪತಿ ಭಟ್‌ಗೆ 4000 ಮತಗಳು, ಪಕ್ಷೇತರ ಅಭ್ಯರ್ಥಿ ಎಸ್.ಪಿ ದಿನೇಶ್ 1112 ಮತ ಪಡೆದರು.
—