ಪ್ರತಿ ವರ್ಷ ಏಪ್ರಿಲ್ 1ರಿಂದ ಮಾರ್ಚ್ 31ರ ನಡುವೆ ಲಿಂಗಾನುಪಾತ ಗಣತಿ .ಡಿ.3ರವರೆಗಿನ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 1000 ಪುರುಷರಿಗೆ 914 ಮಹಿಳೆಯರಿದ್ದಾರೆ.
ಬೆಂಗಳೂರು.
ಬಳ್ಳಾರಿ, ರಾಯಚೂರು, ತುಮಕೂರಿನಲ್ಲಿ ಬಾಣಂತಿ ಸಾವಿನ ಬೆನ್ನೇಲೆ ಜನನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಆರ್ಥಿಕವಾಗಿ, ಹೂಡಿಕೆಯಲ್ಲಿ ಮತ್ತು ಅಭಿವೃದ್ಧಿಯಲ್ಲಿ ಶರವೇಗದಲ್ಲಿ ಸಾಗುತ್ತಿರುವ ಬೆಂಗಳೂರು ನಗರ ಲಿಂಗಾನುಪಾತದ ಪಟ್ಟಿಯಲ್ಲಿ ಕಡೆಯ ಸ್ಥಾನ (31) ದಲ್ಲಿದೆ.
ಪ್ರತಿ ವರ್ಷ ಏಪ್ರಿಲ್ 1ರಿಂದ ಮಾರ್ಚ್ 31ರ ನಡುವೆ ಲಿಂಗಾನುಪಾತ ಗಣತಿ ಮಾಡಲಾಗುತ್ತಿದ್ದು, ಪ್ರಸ್ತುತ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕ ಮಾತ್ರ ಬಾಕಿ ಇದೆ. ಈಗಾಗಲೆ ಶಿವಮೊಗ್ಗ ಜಿಲ್ಲೆ 1000/972 ಅನುಪಾತದೊಂದಿಗೆ ಅತ್ಯುತ್ತಮ ಸಾಧನೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಕಳೆದ ವರ್ಷ 1000/927 ಅನುಪಾತದೊಂದಿಗೆ 13ನೇ ಸ್ಥಾನದಲ್ಲಿದ್ದ ದಾವಣಗೆರೆ ಜಿಲ್ಲೆಯ ಲಿಂಗಾನುಪಾತದಲ್ಲಿ ದೊಡ್ಡ ಮಟ್ಟದ ಸುಧಾರಣೆ ಕಂಡುಬAದಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 1000 ಪುರುಷರಿಗೆ 966 ಮಹಿಳೆಯರಿದ್ದಾರೆ.
ಇನ್ನು ಆರ್ಥಿಕವಾಗಿ, ಹೂಡಿಕೆಯಲ್ಲಿ ಮತ್ತು ಅಭಿವೃದ್ಧಿಯಲ್ಲಿ ಶರವೇಗದಲ್ಲಿ ಸಾಗುತ್ತಿರುವ ಬೆಂಗಳೂರು ನಗರ ಲಿಂಗಾನುಪಾತದ ಪಟ್ಟಿಯಲ್ಲಿ ಕಡೆಯ ಸ್ಥಾನ (31) ದಲ್ಲಿದೆ. ಬೆಂಗಳೂರು ಗ್ರಾಮಾಂತರ 30ನೇ ಸ್ಥಾನದಲ್ಲಿದೆ. ಎರಡೂ ಜಿಲ್ಲೆಗಳ ಲಿಂಗಾನುಪಾತ ಕ್ರಮವಾಗಿ 881 ಮತ್ತು 892 ಇದೆ. ಇದರೊಂದಿಗೆ ಗದಗ (898), ಕಲಬುರ್ಗಿ (900), ಮೈಸೂರು (900), (901). (901). ವಿಜಯಪುರ (902), ಚಿಕ್ಕಮಗಳೂರು (904), ರಾಯಚೂರು (906) ಜಿಲ್ಲೆಗಳಲ್ಲಿ ಹೆಣ್ಣುಮಕ್ಕಳ ಜನನ ಪ್ರಮಾಣ ಕುಸಿದಿದೆ.
ಕರ್ನಾಟಕದ ಒಟ್ಟಾರೆ ಲಿಂಗಾನುಪಾತ ಗಣತಿಯಲ್ಲಿ ಮಲೆನಾಡು ಶಿವಮೊಗ್ಗ ಜಿಲ್ಲೆ ಅತ್ಯುತ್ತಮ ಅನುಪಾತದೊಂದಿಗೆ ಅಗ್ರ ಸ್ಥಾನದಲ್ಲಿದ್ದು, ದಾವಣಗೆರೆ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಆದರೆ, ಒಟ್ಟಾರೆ ಜನನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಯಾಕಾಗಿ ಲಿಂಗಾನುಪಾತ ಕುಸಿತ.
ಒಂದೆಡೆ ಹೆಣ್ಣು ಭ್ರೂಣ ಲಿಂಗ ಪತ್ತೆ, ಮತ್ತೊಂದೆಡೆ ನವಜಾತ ಶಿಶು, ಬಾಣಂತಿಯರ ಮರಣದ ಸುದ್ದಿಗಳು ರಾಜ್ಯವನ್ನು ವ್ಯಾಪಿಸಿವೆ. ಈ ನಡುವೆ ರಾಜ್ಯದ ಸರಾಸರಿ ಲಿಂಗಾನುಪಾತದಲ್ಲಿ ಚೇತರಿಕೆ ಕಂಡುಬAದಿರುವುದು ಆಶಾಭಾವನೆ ಮೂಡಿಸಿದೆ. ಆದರೆ, ರಾಜ್ಯದಲ್ಲಿ ಮಕ್ಕಳ ಜನನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ರಾಜ್ಯದಲ್ಲಿ ಫಲವತ್ತತೆ ಪ್ರಮಾಣ 1.6ರಷ್ಟಿದೆ. ಅಂದರೆ, ಒಬ್ಬ ಮಹಿಳೆ ಎರಡು ಮಗುವಿಗೂ ಜನ್ಮ ನೀಡುತ್ತಿಲ್ಲ. ಜನನ ಪ್ರಮಾಣದಲ್ಲಿ ಇಳಿಕೆಯಾಗಿರುವುದು
ಚಿಂತೆ ಹೆಚ್ಚಿಸಿದೆ ಲಿಂಗ ಪತ್ತೆ
ಮಂಡ್ಯ ಸೇರಿದಂತೆ ಇತರೆಡೆ ಕಂಡು, ಕಾಣದಂತೆ ಲಿಂಗಪತ್ತೆ ಕಾರ್ಯ ನಡೆಯುತ್ತಿರುವ ಅನುಮಾವಿದ್ದು, ಇದು ಕೂಡ ಲಿಂಗಾನುಪತ ಕುಸಿತಕ್ಕೆ ಕಾರಣವಾಗಿದೆ. ಪ್ರಸ್ತುತ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ಬೆಂಗಳೂರು ನಗರ, ಗ್ರಾಮಾಂತರ ಹಾಗೂ 900ರ ಆಸುಪಾಸು ಅನುಪಾತ ಹೊಂದಿರುವ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ನಿವೃತ್ತ ವೈದ್ಯಾಧಿಕಾರಿ ಸಿ.ಕೆ. ಬಾಷಾ ತಿಳಿಸಿದ್ದಾರೆ. ‘
ಲಿಂಗಾನುಪಾತ ಕುಸಿಯಲು ಹೆಣ್ಣುಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಮುಖ ಕಾರಣವಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಾನೂನುಗಳು ಇನ್ನಷ್ಟು ಕಠಿಣಗೊಳ್ಳಬೇಕು. ಪ್ರಮುಖವಾಗಿ ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳು ಜತೆಗೂಡಿ ಬದ್ಧತೆಯಿಂದ ಕಾರ್ಯಾಚರಣೆ ನಡೆಸಿದರೆ ಲಿಂಗ ಪತ್ತೆ ಮತ್ತು ಹತ್ಯೆ ಎರಡನ್ನೂ ತಡೆಯಬಹುದು ಎಂದಿದ್ದಾರೆ.
ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರ ಹಂತದಿAದ ವೈದ್ಯರವರೆಗೆ ನಿರಂತರವಾಗಿ ತರಬೇತಿ, ಮಾಹಿತಿ ಕಾರ್ಯಾಗಾರ ನಡೆಸಲಾಗಿದೆ. ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಾಗಿದೆ. ಹೆಣ್ಣು ಭ್ರೂಣ ಹತ್ಯೆ ತಡೆ ಕುರಿತು ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮ ನಡೆಸಿದ್ದೇವೆ. ಇವೆಲ್ಲದರ ಪರಿಣಾಮ ಜಿಲ್ಲೆಯಲ್ಲಿ ಲಿಂಗಾನುಪಾತ ವೃದ್ಧಿಸಿದೆ.
–ಡಾ.ಎಂ.ಕೆ. ರುದ್ರಸ್ವಾಮಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ.
ನಮ್ಮಲ್ಲಿ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಸಕ್ರಿಯವಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲೆಯ ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಯ ಪ್ರಕರಣಗಳು ಕಂಡುಬAದಿಲ್ಲ,
– ಡಾ.ಎಸ್.ಷಣ್ಮುಖಪ್ಪ ಜಿಲ್ಲಾ ಆರೋಗ್ಯಾಧಿಕಾರಿ
1000 ಪುರುಷರಿಗೆ 914 ಮಹಿಳೆ
ಡಿ.3ರವರೆಗಿನ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 1000 ಪುರುಷರಿಗೆ 914 ಮಹಿಳೆಯರಿದ್ದಾರೆ. ಕಳೆದ ವರ್ಷ 1000 ಪುರುಷರಿಗೆ 905 ಮಹಿಳೆಯರಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಟ್ಟಾರೆ ಲಿಂಗಾನುಪಾತದಲ್ಲಿ ಏರಿಕೆ ಕಂಡುಬAದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇನ್ನೂ ಮೂರು ತಿಂಗಳು ಬಾಕಿ ಇರುವುದರಿಂದ ಲಿಂಗಾನುಪಾತದಲ್ಲಿ ಗಮನಾರ್ಹ ಸುಧಾರಣೆ ಆಗಲಿದೆ ಎಂಬುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರೀಕ್ಷೆ.
ಜಿಲ್ಲಾವರು ಲಿಂಗಾನುಪಾತ (ಸಾವಿರ ಗಂಡಿಗೆ)
ಶಿವಮೊಗ್ಗ-972
ದಾವಣಗೆರೆ-966
ಉಡುಪಿ-964
ರಾಮನಗರ-957
ಕೋಲಾರ-955