ಭದ್ರಾವತಿ : ತಾಲ್ಲೂಕಿನ ಯರೇಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಅಮೃತ ಮಹೋತ್ಸವ ಹಾಗೂ ಹಳೆಯ ವಿದ್ಯಾರ್ಥಿಗಳ ಸಮಾವೇಶದ ಯಶಸ್ಸಿನ ಕಾರಣೀಕರ್ತರಿಗೆ ಅಭಿನಂದಿಸಿ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದಶಾಲೆಯನ್ನು ಉನ್ನತ ಮಟ್ಟಕ್ಕೆ ಒಯ್ಯೋಣ ಎಂದು ಕರೆ ಮುಖ್ಯಶಿಕ್ಷಕ ಕೋಗಲೂರ ತಿಪ್ಪೇಸ್ವಾಮಿ ಹೇಳಿದರು.
ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದ ಜೊತೆಗೆ ಫೋಷಕರ ಸಮಾವೇಶ, ಯು ಕೆ ಜಿ ಕೊಠಡಿ ಪ್ರವೇಶೋತ್ಸವ, ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಗಳ ಸಭೆಯಲ್ಲಿ ಮಾತನಾಡಿದರು.
ಸಮನ್ವಯಾಧಿಕಾರಿ ಪಂಚಾಕ್ಷರಿ ಮಾತನಾಡಿ,ಕಲಿಕಾ ಪ್ರಗತಿಗೆ ಒತ್ತು ಕೊಡುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕೆಂದು ಕರೆ ನೀಡಿದರು.
ಮಾಜಿ ತಾ ಪಂ ಸದಸ್ಯ ಪದ್ಮನಾರಾಯಣ್ ಸಾಧನೆಗೆ, ಯಶಸ್ಸಿಗೆ ಅಭಿನಂದಿಸುವ ಸಂಪ್ರದಾಯ ಸಂಸ್ಕೃತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಎಸ್ ಡಿ ಎಂ ಸಿ ಅಧ್ಯಕ್ಷ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಅಮೃತ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ವಿಠಲ್ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಸಿಆರ್ ಪಿ ಲಲಿತಾ ಕುಮಾರಿ ಫೋಷಕರಿಗೆಮಕ್ಕಳ ಪ್ರಗತಿ ಬಗ್ಗೆ ತಿಳಿಸಿದರು.ಬಿ ಆರ್ ಪಿ ರಾಜು, ಹಳೆ ವಿದ್ಯಾರ್ಥಿ ಸಂಘದ ರಮೇಶ್, ಮಂಜುನಾಥ್,ಹುಚ್ಚೇಗೌಡ,ಜಯಕುಮಾರ್, ರಾಮ ಸಂಜೀವಯ್ಯ, ಸಂಘಮ್ಮ, ಪರುಸೋಜಿ ರಾವ್, ಧರ್ಮಾನಾಯ್ಕ್, ಮಲ್ಲಿಕ್ ನಾಯ್ಕ್, ರಾಜು, ವಿರೂಪಾಕ್ಷಪ್ಪ, ವಿಜಯ್, ಬಸವರಾಜ್, ಪ್ರಕಾಶ್ ಮತ್ತಿತರಿದ್ದರು.ವಾಣಿಶ್ರೀ ಸ್ವಾಗತಿಸಿ ಸುಮಾ ವಂದಿಸಿ ತಿಪ್ಪೇಸ್ವಾಮಿ ನಿರೂಪಿಸಿದರು.