Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ

29 June 2025

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»ಪ್ರಮುಖ ಸುದ್ದಿ»ಸಾಮಾಜಿಕ ಕಳಕಳಿಯ ಧಾರ್ಮಿಕ ನಾಯಕ- ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು .
ಪ್ರಮುಖ ಸುದ್ದಿ

ಸಾಮಾಜಿಕ ಕಳಕಳಿಯ ಧಾರ್ಮಿಕ ನಾಯಕ- ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು .

davangerevijaya.comBy davangerevijaya.com24 September 2024No Comments2 Mins Read
Facebook WhatsApp Twitter
Share
WhatsApp Facebook Twitter Telegram

ಎಸ್.ಎಂ.ಸುನೀಲ್‌ಕುಮಾರ್ ಸಿರಿಗೆರೆ.

ಗಂಭೀರವಾಗಿ ಗಮನಿಸುವಂತೆ ಬೆಳೆಯುತ್ತಿರುವ ಕೆಲವೇ ಧಾರ್ಮಿಕ ಸಂಸ್ಥೆಗಳಲ್ಲಿ ಒಂದು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ. ತರಳಬಾಳು ಗುರುಗಳು ತಮ್ಮ ಹೆಸರಿಗೆ ತಕ್ಕ ಹಾಗೆ ತರಳರ-ವಿಶಾಲಾರ್ಥದಲ್ಲಿ ಎಲ್ಲ ಜನರ -ಬಾಳು ಬೆಳಗಿಸಲು ಶಿಕ್ಷಣ, ಕಲೆ, ಸಾಹಿತ್ಯ, ಧರ್ಮಗಳನ್ನು ಬಳಸಿಕೊಳ್ಳುತ್ತಿರುವ ಪರಿ ಸೋಜಿಗವುಂಟುಮಾಡುತ್ತದೆ.

ಮಠದ ಈ ಜನಪರ ಮಣಿಹಕ್ಕೆ ಭದ್ರ ಬುನಾದಿ ಹಾಕಿದ ಕೀರ್ತಿ ಈ ಶ್ರೀಮಠದ 20ನೆಯ ಗುರುಗಳಾಗಿದ್ದ ಲಿಂ|| ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ (1914-1992)ಸಲ್ಲಬೇಕು.
ತರಳಬಾಳು ಜಗದ್ಗುರು ಬೃಹನಠದ ಮೂಲ ಪುರುಷ 12ನೆಯ ಶತಮಾನದಲ್ಲಿದ್ದ ಮರುಳಸಿದ್ಧ ಅಸ್ಪ*ಶ್ಯ ಕುಲದವನು. ಬೃಹನ್ಮಠವು ಪ್ರಾರಂಭದಿಂದಲೇ ಅಸ್ಪಶ್ಯತೆಯ ವಿರುದ್ಧ ಬಂಡಾಯದ ಬಾವುಟ ಹಾರಿಸಲು, ಪ್ರಾಯಶಃ ಇದು ಕಾರಣವಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆಯಲ್ಲಿ ಪ್ರಾರಂಭಿಸಿದ ಶಾಲೆ ಮತ್ತು ಉಚಿತ ವಿದ್ಯಾರ್ಥಿನಿಲಯಗಳು ಸಹಪಂಕ್ತಿ ಭೋಜನವನ್ನು ರೂಢಿಗೊಳಿಸಿ ಜಾತ್ಯತೀತತೆಯ ಪಾಠ ಕಲಿಸಿದವು

ಶ್ರೀಮಠದ ಬಾಗಿಲು ಅಸ್ಪಶ್ಯರಿಗೂ ಮುಕ್ತವಾಯಿತು. ಶಿಷ್ಯರ ಬಹಿಷ್ಕಾರದ ಬೆದರಿಕೆಗೂ ಬಗ್ಗದೆ ಅವರು, ಖ್ಯಾತ ಅರ್ಥಶಾಸ್ತ್ರಜ್ಞ-ಶಿಕ್ಷಣಶಾಸ್ತ್ರಜ್ಞ ಡಿ.ಎಂ.ನಂಜುಂಡಪ್ಪ ಅವರ ಊರು, ಚಿತ್ರದುರ್ಗ ಜಿಲ್ಲೆಯ ದೊಗ್ಗನಾಳಿನಲ್ಲಿ ಹರಿಜನರ ಮದುವೆಯಲ್ಲಿ ಭಾಗವಹಿಸಿದ್ದರು.ಭರಮಸಾಗರದಲ್ಲಿ ಮಸೀದಿಯನ್ನು ಉದ್ಘಾಟಿಸಿದರು. ತಮ್ಮ ಮಠದಲ್ಲಿ ಬ್ರಾಹ್ಮಣ ವರ್ಗದ ಕೂಡಲಿ ಶೃಂಗೇರಿ ಸ್ವಾಮಿಗಳ ಉತ್ಸವ ಮಾಡಿಸಿದ್ದರು. ಅವರ ಮುಂದಾಳ್ತನದಲ್ಲಿ ನಡೆದ ಅಂತರಜಾತೀಯ, ಅಂತರಧರ್ಮೀಯ, ವಿಧವಾ ವಿವಾಹಗಳು ಅನೇಕ.
ಗ್ರಾಮೀಣ ಜನರ ಅಭ್ಯುದಯವು ಶಿಕ್ಷಣದಿಂದ ಮಾತ್ರ ಸಾಧ್ಯವೆಂಬುದನ್ನು ಮನಗಂಡಿದ್ದ ಸ್ವಾಮೀಜಿಯವರು ಸ್ವಾತಂತ್ರ್ಯಪೂರ್ವದಲ್ಲೇ, 1946ರಲ್ಲಿ ಸಿರಿಗೆರೆಯಲ್ಲಿ ಮೊದಲ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿದರಲ್ಲದೆ 1962 ರಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯನ್ನು ಹುಟ್ಟು ಹಾಕಿದರು.

ಇಂದು ಈ ಸಂಸ್ಥೆಯು ಮಧ್ಯ ಕರ್ನಾಟಕದ ಹದಿನಾಲ್ಕು ಜಿಲ್ಲೆಗಳಲ್ಲಿ, ಶಿಶುವಿಹಾರದಿಂದ ಮೊದಲ್ಗೊಂಡು ಇಂಜನಿಯರಿಂಗ್ ಕಾಲೇಜಿನವರಿಗೆ, ಒಟ್ಟು 232 ಶಾಲಾ-ಕಾಲೇಜು-ಹಾಸ್ಟೆಲ್‌ಗಳನ್ನು ನಡೆಸುತ್ತಿದೆ. ಗ್ರಾಮೀಣ ಭಾಗದ ಹೆಣ್ಣುಮಕ್ಕಳ ದೃಷ್ಠಿಯಿಂದ, ಸಂಸ್ಥೆಯ ಈ ಶಾಲಾಕಾಲೇಜುಗಳಲ್ಲಿ ಶೇ.90ರಷ್ಟು ಹಳ್ಳಿಗಾಡಿನಲ್ಲಿ ಸ್ಥಾಪನೆಯಾಗಿವೆ.

ಪೇಟೆ ಪಟ್ಟಣಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಲಾಗದ ಗ್ರಾಮೀಣ ಬಡಮಕ್ಕಳ ಆಶಾಕಿರಣವಾಗಿ ಹೊರಹೊಮ್ಮಿದ ಈ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಇಂದು ಸು.50 ಸಾವಿರ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ.

ಶಿಕ್ಷಣದಲ್ಲಿ ಪರಿವರ್ತನೆಯಾಗದೆ ಜಗತ್ತಿಗೆ ಸುಖವಿಲ್ಲ. ವಿದ್ಯಾರ್ಥಿಗಳಿಗೆ ಔದ್ಯೋಗಿಕ, ವ್ಯವಹಾರಿಕ, ಆಧ್ಯಾತ್ಮಿಕ-ಈ ಮೂರು ಶಿಕ್ಷಣಗಳನ್ನು ಕೊಡಬೇಕು ಎಂಬುದು ಶಿಕ್ಷಣದ ಬಗ್ಗೆ ಸ್ವಾಮೀಜಿಯ ಅವರಿಗಿದ್ದ ದೃಢ ನಿಲುವು. ಹೊಟ್ಟೆ ಇದ್ದವನು ಉಣ್ಣಬೇಕು, ರಟ್ಟೆ ಇದ್ದವನು ದುಡಿಯಬೇಕು, ನೆತ್ತಿ ಇದ್ದವನು ಓದಬೇಕು -ಇದು ಅವರ ಘೋಷವಾಕ್ಯವಾಗಿತ್ತು.

ಶ್ರೀಗಳವರು ವಚನ ಸಾಹಿತ್ಯದ ಪ್ರಕಟಣೆ-ಪ್ರಸಾರದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರವಚನ, ಸಂಗೀತ, ನಾಟಕ, ಸಾಹಿತ್ಯ ಪ್ರಕಟಣೆಗಳ ಮುಖಾಂತರ ಶರಣರ ಜೀವನಾದರ್ಶಗಳು ಜನಮನದಲ್ಲಿ ಮೂಡುವಂತೆ ಅವರು ಮಾಡಿದ ವೈಚಾರಿಕ ಕ್ರಾಂತಿ ಮಹತ್ತರವಾದುದು.

ಈ ಉದ್ದೇಶಕ್ಕಾಗಿ ಅವರು ಅಕ್ಕನ ಬಳಗ, ಅಣ್ಣನ ಬಳಗ, ತರಳಬಾಳು ಕಲಾಸಂಘ, ತರಳಬಾಳು ಪ್ರಕಾಶನ, ಶರಣ ಸಮ್ಮೇಳನಗಳನ್ನು ಹುಟ್ಟು ಹಾಕಿದರು. ಅವರ ಆಶಯದಂತೆ ಬೇರೆ ಬೇರೆ ಕಡೆ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವದ ಆಚರಣೆಯು ಇಂದಿಗೂ ಶರಣತತ್ವ ಪ್ರಚಾರದ ಬಹುದೊಡ್ಡ ಪ್ರಭಾವೀ ಮಾಧ್ಯಮವಾಗಿದೆ. ಕಾಲ, ಕಾಯಕ ಹಾಗೂ ಕಾಸುಗಳ ಮಹತ್ವವನ್ನು ತಮ್ಮ ಜೀವನುದ್ದಕ್ಕೂ ಅರಿತು. ಆಚರಿಸಿದವರು ಅವರು.

ಶ್ರೀ ತರಳಬಾಳು ಜಗದ್ಗರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಈ ದಿನಚರಿಗಳನ್ನು ಅತ್ಯಂತ ಕಷ್ಟಪಟ್ಟು, ಅಚ್ಚುಕಟ್ಟಾಗಿ ಸಂಪಾದಿಸಿ *ಆತ್ಮ ನಿವೇದನೆ* ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ.

ಲಿಂಗೈಕ್ಯ ಶ್ರೀಗಳ ಮುಖ್ಯ ಕೃತಿಗಳು -ಶತಮಾನೋತ್ಸವ ಸಂದೇಶ, ಅಣ್ಣ ಬಸವಣ್ಣ ಹಾಗೂ ಮರಣವೇ ಮಹಾನವಮಿ, ಶರಣಸತಿ-ಲಿಂಗಪತಿ ಮತ್ತು ವಿಶ್ವಬಂಧು ಮರುಳಸಿದ್ಧ(ನಾಟಕಗಳು). ಸಾಯುವವರೆಗೆ ಅಕಾರ ಅನುಭವಿಸಬೇಕೆನ್ನುವ ಲೋಕರೂಢಿಗೆ ಅಪವಾದವೆಂಬಂತೆ ಶ್ರೀ ಸ್ವಾಮೀಜಿಯವರು ಇನ್ನೂ ಸದೃಢರಾಗಿದ್ದಾಗಲೇ ಸ್ವಯಂ ನಿವೃತ್ತಿ ಘೋಷಿಸಿ ಘನ ವಿದ್ವಾಂಸರಾದ ವೈಜ್ಞಾನಿಕ ಮನೋಭಾವದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳಿಗೆ ದಿನಾಂಕ : 11-2-1979 ರಂದು ಅಕಾರವನ್ನು ವಹಿಸಿಕೊಟ್ಟರು.

ತಮ್ಮ ಜೀವಿತದ ಅಂತಿಮ ದಿನಗಳನ್ನು ಹಳ್ಳಿಗಾಡಿನ ಹಳ್ಳಿಯೊಂದರ ತಡಿಯ ಆಶ್ರಮದಲ್ಲಿ  ಶಾಂತವಾಗಿ  ಕಳೆದು  ದಿನಾಂಕ : 24-9-1992 ರಂದು ಇಹಲೋಕ ತ್ಯಜಿಸಿದರು. ಅವರ ಜೀವನಾದರ್ಶ ಇಂದು ಎಲ್ಲರ ಜೀವನದ ಬೆಳಕಾಗಿದೆ.
…..

Featured Religious leader of social concern- Lim. Shri Sivakumar Shivacharya topnews ಇಂದು ಸಿರಿಗೆರೆಯಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು 32ನೇಯ ಶ್ರದ್ಧಾಂಜಲಿ
Share. WhatsApp Facebook Twitter Telegram
davangerevijaya.com
  • Website

Related Posts

ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ

29 June 2025

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,655 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,328 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,084 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,590 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
Blog

ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ

By davangerevijaya.com29 June 20250

ನಂದೀಶ್ , ಭದ್ರಾವತಿ ಉಕ್ಕಿನ ನಗರಿ ಭದ್ರಾವತಿಯಲ್ಲಿ ಒಂದೊಂದೇ ಸಂತಸದ ಕ್ಷಣಗಳು ಕಾಣುತ್ತಿವೆ..ಅತ್ತ ವಿಎಸ್ಐಎಲ್ ಕಾರ್ಖಾನೆ ಓಪನ್ ಆಗಲಿದೆ ಎಂಬ…

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ

29 June 2025

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,655 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,328 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,084 Views

Subscribe to Updates

Get the latest creative news from SmartMag about art & design.

Recent Posts
  • ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ
  • ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.
  • ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ
  • ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?
  • ನೊಂದವರ ಕಷ್ಟಕ್ಕೆ ಸ್ಪಂದಿಸಲು‌ ಅಧಿಕಾರಿಗಳಿಗೆ ಸಲಹೆ: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.