ಶಿವಮೊಗ್ಗ : ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ ಇದರಲ್ಲಿ ಎಲ್ಲಾ ತರದ ವಿಟಮಿನ್ ಗಳೊಂದಿಗೆ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಎಲ್ಲಾ ಶಕ್ತಿ ಸಿಗುತ್ತದೆ ಎಂದು ಆನ್ಸ್ ಕ್ಲಬ್ ನ ಅಧ್ಯಕ್ಷರಾದ ಗೀತಾ ಜಗದೀಶ್ ಹೇಳಿದರು.
ರಾಗಿಗುಡ್ಡದ ಸರ್ಕಾರಿ ಶಾಲೆಯಲ್ಲಿ ವಿಶ್ವ ಸ್ತನ್ಯಪಾನ ದಿನವನ್ನು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಆನ್ಸ್ ಕ್ಲಬ್ ಮತ್ತು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಬಂದಂತಹ ಮಹಿಳೆಯರಿಗೆ ಪರ್ಸ್ ಗಳನ್ನು ನೀಡಿ ಮಾತನಾಡಿಡ ಅವರು, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಸರ್ಜಿ ಆಸ್ಪತ್ರೆಯಲ್ಲಿ ಸ್ಥಾಪಿತವಾಗಿರುವ ಹ್ಯೂಮನ್ ಮಿಲ್ಕ್ ಬ್ಯಾಂಕ್ ನಿಂದ ತಾಯಂದಿರ ಎದೆಯ ಹಾಲು ಸರ್ಜಿ ಆಸ್ಪತ್ರೆ ಹಾಗೂ ಮೆಗನ್ ಆಸ್ಪತ್ರೆಯಲ್ಲಿ ಮಕ್ಕಳಿಗೆ ಉಪಯೋಗವಾಗುತ್ತಿದೆ ಎಂದು ತಿಳಿಸಿದರು.
ಜೆ ಸಿ ಇಂಟರ್ ನ್ಯಾಷನಲ್ ವೈಸ್ ಪ್ರೆಸಿಡೆಂಟ್ ಪುಷ್ಪ ಶೆಟ್ಟಿ ಕಾರ್ಯಕ್ರಮದಲ್ಲಿ ಬಂದಂತಹ ಮಹಿಳೆಯರನ್ನು ಉದ್ದೇಶಿಸಿ ಒಂದು ಹೆಣ್ಣು ಋತುಮತಿಯಾದಗಿನಿಂದ ಹಂತ ಹಂತವಾಗಿ ಅವಳ ದೇಹದಲ್ಲಿ ಆಗುವ ಬದಲಾವಣೆ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಿದರು.ಸಿಸ್ಟರ್ ನಂದಿನಿ ಮಗುವಿಗೆ ಹಾಕುವ ಲಸಿಕೆಗಳ ವಿವರಗಳನ್ನು ನೀಡಿದರು.
ರೊಟರಿಯನ್ ದೀಪಾ ಶೆಟ್ಟಿ, ರೊಟರಿಯನ್ ರಾಜಶ್ರೀ, ರೋಟೇರಿಯನ್ ಜ್ಯೋತಿ ಶ್ರೀರಾಮ್ ಹಾಗೂ ಎಫ್‌ಪಿಎಐ ನ ಸಿಬ್ಬಂದಿ ವರ್ಗದವರು ಮತ್ತು ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
===========