ದಾವಣಗೆರೆ ,:  ಕರ್ನಾಟಕ ಸ್ಟೇಟ್ ಪೊಲೀಸ್ ವೆಲ್ಫೇರ್ ಅಂಡ್ ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಪಬ್ಲಿಕ್ ಶಾಲೆಯ 2025-26 ರ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ‌

ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತಿದ್ದು, ಅತಿ ಕಡಿಮೆ ದರದಲ್ಲಿ ಮಕ್ಕಳಿಗೆ ಶಿಕ್ಷಣ ಸಿಗಲಿದೆ. ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ನೇತೃತ್ವದಲ್ಲಿ ಎಸ್ಪಿ ಉಮಾಪ್ರಶಾಂತ್ ಮಾರ್ಗದರ್ಶನದಲ್ಲಿ ಶಾಲೆ ಅದ್ಬೂತವಾಗಿ ನಡೆಯುತ್ತಿದೆ ಉತ್ತಮ ಶಿಕ್ಷಕರು ಕೂಡ ಇದ್ದು, ಅನುಭವಿಗಳಾಗಿದ್ದಾರೆ. ಕೇಂದ್ರಿಯ ವಿದ್ಯಾಲಯಗಿಂತ ಹೆಚ್ಚಿನ ಶಿಕ್ಷಣ ಇಲ್ಲಿ ದೊರೆಯುತ್ತಿದೆ.

*ಶಾಲೆಯ ಮುಖ್ಯ ಉದ್ದೇಶಗಳು*

1. ಕಡಿಮೆ ವೆಚ್ಚದಲ್ಲಿ ಉತ್ಕೃಷ್ಟ ಶಿಕ್ಷಣ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ತನ್ನನ್ನು ತಾನು ತೊಡಗಿಸಿಕೊಂಡಿದೆ.

2. 10 ಎಕರೆ ವಿಸ್ತೀರ್ಣದಲ್ಲಿರುವ ಶಾಲೆ ಸುಸಜ್ಜಿತ ಕಟ್ಟಡ, ಆಟದ ಮೈದಾನ, ಅತ್ಯಧುನಿಕ ಕಂಪ್ಯೂಟರ್, ವಿಜ್ಞಾನ ಮತ್ತು ಗಣಿತದ ಪ್ರಯೋಗಾಲಯಗಳು ಹಾಗೂ ವಿಶಾಲ ಗ್ರಂಥಾಲಯವನ್ನು ಒಳಗೊಂಡಿದೆ.

3. ಶಾಲೆಯು ಸಿಬಿಎಸ್ಇ (ಕೇಂದ್ರೀಯ) ಪಠ್ಯಕ್ರಮಕ್ಕೆ ಹೊಂದಿಕೊಂಡಂತೆ ಸಿಬಿಎಸ್ಸಿ ಮಾನ್ಯತೆಯನ್ನು ಪಡೆದಿದೆ.

4. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಪಠ್ಯಕ್ರಮದೊಂದಿಗೆ ಚಟುವಟಿಕೆಯಾಧಾರಿತ ಶಿಕ್ಷಣವನ್ನು ನೀಡುತ್ತಿದೆ.

5. ಶಾಲೆಯು 21ನೇ ಶತಮಾನದ ಕೌಶಲ್ಯಗಳ ಬೆಳವಣಿಗೆಗೆ ಸಹಕಾರಿಯಾಗುವಂತೆ ಅನ್ವಯಿಕ ತಂತ್ರಜ್ಞಾನಾಧಾರಿತ ತರಗತಿಗಳನ್ನು(Smart board’s and e-classes) ಒಳಗೊಂಡಿದೆ.

6. ಮುಂದಿನ ಸಾಲಿನ (2025-26)ನೇ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು ಆಸಕ್ತಿಯುಳ್ಳ ಪೋಷಕರು ಶಾಲೆಯ ವೆಬ್ ಸೈಟಲ್ಲಿ ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಲು ಶಾಲೆಯ ಸೆಕ್ರೆಟರಿಯಾದ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

7. ಶಾಲೆಯ ಪ್ರವೇಶ ಪರೀಕ್ಷೆ ಯನ್ನು 23ನೇ ಫೆಬ್ರವರಿಯಲ್ಲಿ ನಡೆಸಲಾಗುವುದು.

8. ಹೆಚ್ಚಿನ ಮಾಹಿತಿಗಾಗಿ ppsdavanagere.karnataka.gov.in ವೆಬ್ ಸೈಟನ್ನು ಸಂಪರ್ಕಿಸಿ.
….

*_ ಸಿಬಿಎಸ್‍ಇ (ಕೇಂದ್ರೀಯ) ಪಠ್ಯಕ್ರಮಕ್ಕೆ ಹೊಂದಿಕೊಂಡಂತೆ ಸಿಬಿಎಸ್‍ಸಿ ಮಾನ್ಯತೆಯನ್ನು ಪಡೆದಿದೆ.

*ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಪಠ್ಯಕ್ರಮದೊಂದಿಗೆ ಚಟುವಟಿಕೆಯಾಧಾರಿತ ಶಿಕ್ಷಣವನ್ನು ನೀಡುತ್ತಿದೆ.

ಶಾಲೆಯ ಪ್ರವೇಶ ಪರೀಕ್ಷೆ ಫೆ.22 ಕ್ಕೆ

ಶಾಲೆಯ ಪ್ರವೇಶಕ್ಕೆ ಪರೀಕ್ಷೆಯನ್ನು ಫೆಬ್ರವರಿ 22 ಮತ್ತು 23 ರಂದು ನಡೆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ppsdavanagere.karnataka.gov.in ವೆಬ್‍ಸೈಟ್ ಹಾಗೂ ದೂ.ಸಂ: 9164633833, 8277981961 ಸಂಪರ್ಕಿಸಲು ಶಾಲೆಯ ಕಾರ್ಯದರ್ಶಿ ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

 

Share.
Leave A Reply

Exit mobile version