
ಭದ್ರಾವತಿ : ಭದ್ರಾವತಿ ಒಂದಾನೊಂದು ಕಾಲದಲ್ಲಿ ಕೈಗಾರಿಕೆಯಲ್ಲಿ ತನ್ನದೇ ಆದ ಹೆಸರು ಪಡೆದಿತ್ತು. ವಿಐಎಸ್ಎಲ್ ಸೈರನ್ ನಂತರ ಸಾವಿರಾರು ಜನ್ರು, ಸೈಕಲ್ ಸ್ಕೂಟರ್ ನಲ್ಲಿ ಬರುತ್ತಿದ್ದರು..ಬರಬರುತ್ತಾ ಈ ಊರು ಕ್ರೈಂ ಲೋಕದತ್ತ ವಾಲಿತು..ಪಾತಕಿ ಕೊತ್ವಾಲ ರಾಮಚಂದ್ರ ಕೂಡ ಈ ಊರಿನವನಾಗಿದ್ದು, ಕಾಲಾಂತರದಲ್ಲಿ ಕ್ರೈಂ ಏರಿಯಾ ವಿಸ್ತಾರಗೊಂಡಿತು. ಈ ನಡುವೆ ರಾಜಕಾರಣ ಕೂಡ ಎಂಟ್ರಿ ಆಯಿತು…ಇದಾದ ನಂತರ ಓಸಿ, ಇಸ್ಪೀಟ್, ಗಾಂಜಾ, ಬೆಟ್ಡಿಂಗ್, ರೌಡಿಗಳ ಅಟ್ಟಹಾಸ, ಕೊಲೆ ಮುಂದುವರಿದಿತ್ತು..ಪೊಲೀಸ್ ಇಲಾಖೆ ಎಷ್ಟೇ ಸುಪರ್ದಿಗೆ ತಂದರೂ ರಾಜಕಾರಣಿಗಳ ಕೃಪಾಕಟಕ್ಷದಿಂದ ಪೊಲೀಸರು ಕೂಡ ಏನೂ ಮಾಡಲು ಸಾಧ್ಯವಾಗಲಿಲ್ಲ..ಹೀಗಾಗಿ ರೌಡಿಗಳ ಅಟ್ಟಹಾಸ ಮುಂದುವರದೇ ಇತ್ತು..ಇವರ ಹಾವಳಿಗೆ ಜನರೂ ಕೂಡ ಬೇಸತ್ತಿದ್ದು, ಸೂಪರ್ ಕಾಪ್ ಐಜಿಪಿ ರವಿಕಾಂತೇಗೌಡ ಕಿವಿಗೆ ಬಿತ್ತು..
ಅಲ್ಲದೇ ಇತ್ತೀಚೆಗೆ ಗಣಿ ಅಧಿಕಾರಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪ್ರಕರಣ ಸಂಬಂಧ ಭದ್ರಾವತಿ ಕ್ರೈಂ ಲೋಕದಲ್ಲಿ ಮತ್ತೆ ಸುದ್ದಿಯಾಗಿತ್ತು. ತದ ನಂತರ ಐಜಿಪಿ ರವಿಕಾಂತೇಗೌಡ ಭದ್ರಾವತಿಗೆ ಎಂಟ್ರಿ ಕೊಟ್ಟು ಡಿಎಸ್ಪಿ ನೇತೃತ್ವದಲ್ಲಿ ಸಭೆ ನಡೆಸಿದರು. ರೌಡಿಗಳ ಹಾವಳಿ ತಡೆಗಟ್ಟಲು ಖಾಕಿ ಪಡೆಗೆ ಗರಂ ಆಗಿ ಸೂಚನೆ ನೀಡಿದರು..ಈ ಸಂಬಂಧ ಮೊದಲನೆಯದಾಗಿ ಹೊಸಮನೆ ಪೊಲೀಸರು ರೌಡಿಗಳ ಎಡೆಮುರಿ ಕಟ್ಟಲು ಮುಂದಾದರು.
ರೌಡಿ ಗುಂಡ ಆಲಿಯಾಸ್ ರವಿ ಕಾಲಿಗೆ ಗುಂಡೇಟು
ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿ ರವಿ ಆಲಿಯಾಸ್ ಗುಂಡನ
ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಗಾಯಗೊಂಡ ಆರೋಪಿ ಗುಂಡ @ ರವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಠಾಣೆಯ ಪಿಎಸ್‌ಐ ಕೃಷ್ಣ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.
ಠಾಣೆಯ ಸಿಬ್ಬಂದಿ ಆದರ್ಶನ ಮೇಲೆ ಆರೋಪಿ ಗುಂಡ @ ರವಿ ಹಲ್ಲೆ ಮಾಡಲು ಯತ್ನಿಸಿದ. ಆಗ ಆದರ್ಶನನ್ನು ರಕ್ಷಿಸಲು ಆರೋಪಿ ರವಿಗೆ ಪದೇ ಪದೇ ಎಚ್ಚರಿಕೆ ನೀಡಿದರೂ ಶರಣಾಗಲಿಲ್ಲ. ಕಾಲಿಗೆ ಗುಂಡು ಹಾರಿಸುವುದು ಅನಿವಾರ್ಯವಾಯಿತು ಎಂದು ಎಸ್ ಪಿ ಮಿಥುನ್ ಹೇಳಿದ್ದಾರೆ. ಗಾಯಗೊಂಡ ಸಿಬ್ಬಂದಿಯನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೌಡಿಗಳ ಎಡೆಮುರಿ ಕಟ್ಟುತ್ತಿರುವ ಎಸ್ಪಿ ಮಿಥುನ್ ಕುಮಾರ್
ರಾಜಕಾರಣಿಗಳ ಒತ್ತಡದ ನಡುವೆಯೂ ಎಸ್ಪಿ ಮಿಥುನ್ ಕುಮಾರ್ ರೌಡಿಗಳ ಎಡೆಮುರಿಕಟ್ಟುತ್ತಿದ್ದಾರೆ. ಎಸ್ಪಿಗೆ ಶಿವಮೊಗ್ಗ ಭದ್ರಾವತಿ ಅವಳಿ ನಗರಗಳಾಗಿದ್ದು, ಅಕ್ರಮ ದಂಧೆಗಳಿಗೆ ಆದಷ್ಟು ಕಡಿವಾಣ ಹಾಕುತ್ತಿದ್ದಾರೆ. ಅಂತೆಯೇ ರೌಡಿಗಳಿಗೂ ಎಡೆಮುರಿ ಕಟ್ಟುತ್ರಿದ್ದಾರೆ..ಅಲ್ಲದೆ ಕೋಮುಗಲಭೆಗೆ ಪ್ರಚೋದನೆ ಮಾಡುವವರನ್ನು ಕೂಡ ಎಸ್ಪಿ ಮಟ್ಟಹಾಕುತ್ತಿದ್ದಾರೆ.
ಇದುವರೆಗೂ ಅಂದಾಜು 15 ರೌಡಿಗಳ ಕಾಲಿಗೆ ಗುಂಡೇಟು
ಐಪಿಎಸ್ ಅಧಿಕಾರಿ ಮಿಥುನ್ ಕುಮಾರ್ ಸಮಾಜದಲ್ಲಿ ಶಾಂತಿ ಕಾಪಾಡಲು, ರೌಡಿಗಳಿಗೆ ಪೊಲೀಸ್ ಭಯ ಹುಟ್ಟು ಹಾಕಲು ಎಸ್ಪಿ ಇಡೀ ಜಿಲ್ಲೆಯಲ್ಲಿ ಅಂದಾಜು 15 ರೌಡಿಗಳ ಕಾಲಿಗೆ ಗುಂಡು ಹೊಡೆಯಲು ಆದೇಶಿಸಿದ್ದಾರೆ..ಈ ಮೂಲಕ ರೌಡಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.
ಪೊಲೀಸರು ಅಲರ್ಟ್
ಇತ್ತೀಚೆಗೆ ಮಹಿಳಾ ಅಧಿಕಾರಿಗೆ ಅಕ್ರಮ ಮರಳು ದಂಧೆಕೋರರಿಂದ ಬೆದರಿಕೆ ಹಾಕಿದ ಪ್ರಕರಣ ಬೆಳಕಿಗೆ ಬಂದ ನಂತರ, ಭದ್ರಾವತಿ ನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಗೂಂಡಾಗಿರಿ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಪೊಲೀಸರು ವಿಫಲರಾಗಿರುವ ಟೀಕೆಗಳು ವ್ಯಕ್ತವಾಗಿದ್ದವು.
ಯಾರು ಈ ರೌಡಿ ರವಿ
ಭದ್ರಾವತಿಯಲ್ಲಿ ಹೊಸಮನೆ, ಚಾಮೇಗೌಡ ಏರಿಯಾ ಕಾಗದನಗರ, ಬೋವಿಕಾಲೋನಿ, ಜಿಂಕಲೈನ್, ಹುತ್ತಾಕಾಲೊನಿ, ಜನ್ನಾಪುರ, ಹುಡ್ಕೊ ಹೀಗೆ ಸಾಕಷ್ಟು ಏರಿಯಾಗಳಲ್ಲಿ ರೌಡಿಗಳ ಹಾವಳಿ ಇದೆ. ಹೀಗೆ ಹೊಸ ಮನೆಯಲ್ಲಿ ಗುಂಡ ಯಾನೆ ರವಿ ಎಂಬಾತ ತನ್ನ ಆರ್ಭಟ ಮುಂದುವರಿಸಿದ್ದ. ಈತನ ಮೇಲೆ ನಾಲ್ಕು ಕೊಲೆಯತ್ನ ಆರೋಪಗಳಿದ್ದವು. ಆತನನ್ನ ಹಿಡಿದು ಕರೆ ತರುವಾಗ ಆರೋಪಿ ರವಿ ಪಿಸಿ ಆದರ್ಶನ ಮೇಲೆ ಆಯುಧಗಳಿಂದ ದಾಳಿ ನಡೆಸಿದ್ದ. ಈ ವೇಳೆ ಆದರ್ಶನನ್ನ ರಕ್ಷಿಸಲು ಪಿಎಸ್ಐ ಕೃಷ್ಣ ಕುಮಾರ್ ಮಾನೆ ಆರೋಪಿ ಕಾಲಿಗೆ ಗುಂಡು ಹಾರಿಸಿ ರಕ್ಷಣೆ ಮಾಡಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನ ಭದ್ರಾವತಿಯಲ್ಲಿ ಹೆಸರಿಗೆ ಮಾತ್ರ ಇದ್ದ ಪೊಲೀಸರು ಐಜಿಪಿ ರವಿಕಾಂತೇಗೌಡ ಬಂದ ನಂತರ ಕರ್ತವ್ಯಕ್ಕೆ ಒಂದಿಷ್ಟು ಕೆಲಸ ಕೊಟ್ಟಿದ್ದು, ಮುಂದೆಯೂ ಇದೇ ಮುಂದುವರಿಯುತ್ತಾ ಎಂದು ಕಾದು ನೋಡಬೇಕಿದೆ.