
ಚಿತ್ರದುರ್ಗ: ದೇಸಿ ಗೋವಿನ ಮಹತ್ವ ಸಾರುವುದು, ಗೋ ಆಧಾರಿತ ಕೃಷಿ, ಪರಿಸರ ಸಂರಕ್ಷಣೆ ಹಾಗೂ ಲೋಕ ಕಲ್ಯಾಣದ ಉದ್ದೇಶದಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ‘ನಂದಿ ರಥಯಾತ್ರೆ’ಚಿತ್ರದುರ್ಗ ನಗರಕ್ಕೆ ಆಗಮಿಸಿತು.
ಈ ಸಂದರ್ಭದಲ್ಲಿ ಬಿಜೆಪಿ ಯುವ ನಾಯಕ ಜಿ.ಎಸ್.ಅನಿತ್ ಕುಮಾರ್ ನಂದಿ ರಥಯಾತ್ರೆಯನ್ನು ಸ್ವಾಗತಿಸಿದರು.ಗೋ ಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಸಹಯೋಗದಲ್ಲಿ 2024 ಡಿಸೆಂಬರ್ 31 ರಿಂದ ಪ್ರಾರಂಭವಾಗಿರುವ ‘ನಂದಿ ರಥಯಾತ್ರೆ’ 2025 ಮಾರ್ಚ್ 29 ರವರೆಗೆ ರಾಜ್ಯಾದ್ಯಂತ ಸಂಚರಿಸಲಿದೆ.
ಚಿತ್ರದುರ್ಗ ನಗರ ಪ್ರವೇಶಿಸಿದ ‘ನಂದಿ ರಥಯಾತ್ರೆ’ ಚಳ್ಳಕೆರೆ ಗೇಟ್‍ನಿಂದ ಬಿ.ಡಿ.ರಸ್ತೆ ಮೂಲಕ ಶ್ರೀ ಕಬೀರಾನಂದ ಮಠದವರೆಗೆ ಸಾಗಿತು. ಗೋ ಪ್ರೇಮಿಗಳು ಭಾಗವಹಿಸಿದ್ದರು.ನಂತರ ‘ನಂದಿ ರಥಯಾತ್ರೆ’ ಚಳ್ಳಕೆರೆ ಗೇಟ್‍ನಿಂದ ಬಿ.ಡಿ.ರಸ್ತೆ ಮೂಲಕ ಶ್ರೀ ಕಬೀರಾನಂದ ಮಠದವರೆಗೆ ಸಾಗಿತು.