ದಾವಣಗೆರೆ : 14 ಸೈಟ್ ಗಳ ಬಗ್ಗೆ ಮಾತನಾಡುತ್ತಾರೆ, ಆದರೆ 111 ಸೈಟ್ ಗಳ ಬಗ್ಗೆ ಯಾಕೆ ಮಾತನಾಡೋಲ್ಲ ಎಂದು ಸಚಿವ ಲಾಡ್ ಪ್ರಶ್ನಿಸಿದ್ದಾರೆ.

CM ಸಿದ್ದರಾಮಯ್ಯಗೆ ಮುಡಾ ಕೇಸ್ ನಲ್ಲಿ ಲೋಕಾಯುಕ್ತ ಕ್ಲೀನ್ ಚೀಟ್ ಹಿನ್ನೆಲೆಯಲ್ಲಿ ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.
ನ್ಯಾಯಾಂಗದ ಮೇಲೆ ನಂಬಿಕೆ ಇತ್ತು ಕ್ಲೀನ್ ಚೀಟ್ ಸಿಕ್ಕಿದ್ದು ಸಂತೋಷ ಆಗಿದೆ.ಇದ್ರ ಮೇಲೆ ತಿಳಿಯುತ್ತೆ ಬಿಜೆಪಿ ಯಾವ ರೀತಿ ಸಂಚು ಮಾಡಿತ್ತು ಅಂತ.

ಹಿಂದುಳಿದ ಒಬ್ಬ ಪ್ರಾಮಾಣಿಕ ನಾಯಕನಿಗೆ ಕಪ್ಪು ಚುಕ್ಕೆ ತರಲು ಪ್ರಯತ್ನಿಸಿದರು. ಅಲ್ಲಿರೋದು 125 ಅಧಿಕ ಸೈಟ್ ಗಳು ಕೇವಲ 14 ಸೈಟ್ ಗಳ ಬಗ್ಗೆ ಮಾತ್ನಾಡ್ತರೆ ಉಳಿದ 111 ಸೈಟ್ ಗಳ ಬಗ್ಗೆ ಯಾಕೆ ಮತ್ನಾಡಲ್ಲ. ಉಳಿದ ಸೈಟ್ ಗ ಬಗ್ಗೆ ಯಾಕೆ ತನಿಖೆ ಆಗಿಲ್ಲ..? ಅಂತ ಲಾಡ್ ಪ್ರಶ್ನಿಸಿದರು.

ನಿತಿನ್ ಗಡ್ಕರಿ ಈ ದೇಶದ ಪ್ರಧಾನಿ ಆದ್ರೆ ಒಳ್ಳೆಯದು ಆಗುತ್ತೆ. ಬಿಜೆಪಿ ಪಕ್ಷನೇ ಈ ದೇಶದಲ್ಲಿ ಇರಬಾರದ್ದು ಅಂತ ನನ್ನ ಅಭಿಪ್ರಾಯ ಇದೆ. ದೇಶ ಇನ್ನೂ ಬೆಳೆಯಬೇಕಾದ್ರೆ ಉಳಿದ 4 ವರ್ಷ ಅವಕಾಶ ಇದೆ

ನಿತಿನ್ ಗಡ್ಕರಿ ಗೆ ಕೊಟ್ರೆ ದೇಶ ಅಭಿವೃದ್ಧಿ ಕಡೆ ಹೋಗಬಹುದು ಎಂದರು. ಇನ್ನು ವಿಶ್ವವಿದ್ಯಾಲಯ ಬಂದ್ ಮಾಡುವ ವಿಚಾರ ಕೇಳಿದ ಪ್ರಶ್ನೆಗೆ ಉತ್ತರಿಸಿ,ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅದಕ್ಕೆ ಎಷ್ಟು ಹಣ ಇಟ್ಟಿದ್ರು. ಇರುವ ವಿಶ್ವವಿದ್ಯಾಲಯಕ್ಕೆ ಯಾವುದೇ ಸರ್ಕಾರ ಎಲ್ಲಾ ದೃಷ್ಟಿಯಿಂದ ಯೋಚನೆ ಮಾಡಿ ಯುನಿವರ್ಸಿಟಿ ಮಾಡಬೇಕಾಗಿತ್ತು ಎಂದರು.

ಗೃಹ ಲಕ್ಷ್ಮಿ ಹಣ ಮೂರು ತಿಂಗಳು ಬಾಕಿ ಇದೆ ಕೊಡ್ತಾರೆ ಅಂತ CM ಹೇಳಿದ್ದಾರೆ. ಕೆಂದ್ರ ಸರ್ಕಾರ 11 ಲಕ್ಷ, 10 ಲಕ್ಷ ಕೊಡ್ತಿವಿ ಅಂತ ಹೇಳಿ 11 ವರ್ಷ ಆಯು ಹೇಳಿ ಯಾರು ಕೇಳ್ತಿಲ್ಲ.3 ತಿಂಗಳು ಕೊಟ್ಟಿಲ್ಲ ಅಂತ ಹೇಳ್ತಿರಾ. ಮೇಕಿನ್ ಇಂಡಿಯಾ ಅಂತ ಹೇಳ್ತಾರೆ. ಏನ್ ಆಗಿದೆ ಮೇಕ್ಇನ್ ಇಂಡಿಯಾ ದಲ್ಲಿ. ಚರ್ಚೆ ಗೆ ಬರಲಿ ಏನ್ ಆಗಿದೆ ಅಂತ ಸಂತೋಷ್ ಲಾಡ್ ಪ್ರಶ್ನಿಸಿದರು.

ಪ್ರಹ್ಲಾದ್ ಜೋಷಿ ಗೆ ತಿರುಗೇಟು ನೀಡಿದ ಲಾಡ್, ನನ್ನ ಹಣೆ ಬರಹ ಯಾರು ಚೇಂಜ್ ಮಾಡೋಕೆ ಆಗಲ್ಲ. ಕೇಂದ್ರದಲ್ಲಿ ಪ್ರಧಾನಿ ಬಿಟ್ರೆ ಯಾರು ಮಾತ್ನಾಡಲ್ಲ. ಕೆಂದ್ರ ಸಚಿವರ ಸುದ್ದಿನೆ ಇಲ್ಲ. ಹಾಗಾದ್ರೆ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತ್ ಯಾಕೆ ಬೇಕು ಎಂದು ಸಚಿವರು ಕೇಳಿದರು.

Share.
Leave A Reply

Exit mobile version