
ನ್ಯಾಮತಿ: ತಾಲೂಕಿನ ಕೆಂಚಿಕೊಪ್ಪ ಗ್ರಾಮದ ಶ್ರೀರಾಮ ದೇವರ ಹಾಗೂ ಶ್ರೀಆಂಜನೇಯ ದೇವರ ರಥೋತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.
ಭಾನುವಾರ ಸಂಜೆ ಧ್ವಜಾರೋಹಣ, ಕಂಕಣ ಧಾರಣೆ ಕಾರ್ಯಕ್ರಮ, ಏ. ೨೨ ರಂದು ಬೆಳಗಿನ ಜಾವ ೫ ಗಂಟೆಗೆ ಗ್ರಾಮದ ದೇವರುಗಳಿಗೆ ಮಹಾ ರುದ್ರಾಭಿಷೇಕ ಮತ್ತು ಆಂಜನೇಯ ಸ್ವಾಮಿ ಬಾಸಿಂಗ ಧಾರಣೆ ಹಾಗೂ ಮದ್ಯಾಹ್ನ ರಥಗಳಿಗೆ ಕಳಸೋರಹಣ ನೆರವೇರಿಸಿ ತೇರಿಗೆ ಹೂವಿನ ಅಲಂಕಾರ ನಡೆಸಲಾಯಿತು.
ಮಂಗಳವಾರ ರಥದಲ್ಲಿ ಉತ್ಸವ ಮೂರ್ತಿಗಳನ್ನ ಪ್ರತಿಷ್ಠಾಪಿಸಿ ನಂದಿಗುಡಿ ಬೃಹನ್ಮಠದ ಶ್ರೀಮದ್ ವೃಷಭಾಪುರಿ ಸೂರ್ಯ ಸಿಂಹಾಸನಾಧೀಶ್ವರ ೧೧೦೮ ಜಗದ್ಗುರು ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳ ಹಾಗೂ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಶ್ರೀರಾಮ ದೇವರ ಹಾಗೂ ಶ್ರೀಆಂಜನೇಯ ಸ್ವಾಮಿ ಮಹಾರಥೋತ್ಸವ ಗ್ರಾಮ ದೇವರುಗಳ, ಗ್ರಾಮಸ್ಥರ ಸಮ್ಮುಖದಲ್ಲಿ ಡೋಳ್ಳು, ಹಲಗೆ, ಭಜನೆ ಮಂಗಳ ವಾದ್ಯಗಳೊಂದಿಗೆ ರಾಮ ದೇವಸ್ಥಾನದವರೆಗೂ ರಥೋತ್ಸವ ನಡೆಸಲಾಯಿತು.


ರಥೋತ್ಸವದಲ್ಲಿ ಗ್ರಾಮದ ದೇವರುಗಲು ಸೇರಿದಂತೆ ಗ್ರಾಮಸ್ಥರು ಸುತ್ತಮುತ್ತಲಿನ ವಿವಿಧ ಗ್ರಾಮದ ಗ್ರಾಮಸ್ಥರು ಭಾಗವಹಿಸಿ ಯಶಸ್ವಿಗೊಳಿಸಿದರು.

