ದಾವಣಗೆರೆ : ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲೆಸೆತ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಡಿಎಸ್ಪಿ ಪ್ರಶಾಂತ್ ಮುನೋಳಿ ಹಾಗೂ ಸಿಪಿಐ ನಿರಂಜನ್ ಅಮಾನತು ಮಾಡಿರುವ ಆದೇಶಕ್ಕೆ ನಿವೃತ್ತ ಪೊಲೀಸರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.

ದಾವಣಗೆರೆ ನಿವೃತ್ತ ಪೊಲೀಸ್ ದಾವಣಗೆರೆ ವಿಜಯೊಂದಿಗೆ ಮಾತನಾಡಿ, ನಾವು ಆರಕ್ಷಕರು ಜನರ ಸೇವೆಗೆ ಬಂದವರು, ಸರಕಾರ, ಗಣ್ಯ ವ್ಯಕ್ತಿಗಳು ಬಂದಾಗ, ಕಳ್ಳರನ್ನು ಹಿಡಿಯಲು ಹೋದಾಗ, ಗಲಭೆಗಳು ನಡೆದಾಗ ನಮ್ಮ ಪ್ರಾಣವನ್ನು ಮುಂದಿಟ್ಟು ಕಿಡಿಗೇಡಿಗಳನ್ನು ಮಟ್ಟಹಾಕುತ್ತೇವೆ. ನಮಗೂ ಕುಟುಂಬವಿದೆ, ನಮಗೋಸ್ಕರ ನಮ್ಮ ಮಕ್ಕಳು ಸಹ ಮನೆಯಲ್ಲಿ ಕಾಯುತ್ತಿರುತ್ತಾರೆ. ಸರಿಯಾಗಿ ಊಟ ಮಾಡೋದಕ್ಕೆ ಆಗೋದಿಲ್ಲ, ನೆಮ್ಮದಿಯಿಂದ ನಿದ್ದೆ ಮಾಡೋದಕ್ಕೆ ಆಗೋದಿಲ್ಲ. ಹೊರಗೆ ಹೋದಾಗ ಮನೆಗೆ ವಾಪಸ್ ಬರುತ್ತೇವೆ ಎಂಬ ನಂಬಿಕೆಯೇ ಇಲ್ಲ. ಹೀಗಿರುವಾಗ ಕೆಲಸ ಮಾಡಿದ ಪೊಲೀಸರನ್ನು ಅಮಾನತು ಮಾಡಿರುವುದು ಎಷ್ಟು ಸರಿ. ಇದಕ್ಕೆ ನಮ್ಮ ವಿರೋಧವಿದೆ. ಹೀಗಾದ್ರೆ ಪೊಲೀಸರು ಯಾರು ಕೆಲಸ ಮಾಡೋದಿಲ್ಲ. ಅವರಿಗೆ ಗೊತ್ತಿದ್ದರೂ ನಮಗ್ಯಾಕೆ ಎಂದು ಸುಮ್ಮನೆ ಆಗುತ್ತಾರೆ ಎಂದು ಅವರು ಹೇಳಿದ್ದಾರೆ.

ಚನ್ನಗಿರಿ ಪ್ರಕರಣದಲ್ಲಿ 11 ಪೊಲೀಸರಿಗೆ ಗಾಯವಾಗಿದೆ. ಅವರ ಬಗ್ಗೆ ಸಿಎಂ ಒಂದು ಮಾತು ಕೂಡ ಆಡಿಲ್ಲ. ಅವರ ಆರೋಗ್ಯದ ಬಗ್ಗೆ ವಿಚಾರಿಸಿಲ್ಲ. ಪೊಲೀಸ್ ವಾಹನಗಳ ಮೇಲೆ ಸೈಜ್ ಗಲ್ಲು ಎತ್ತಿ ಹಾಕಿದ್ದಾರೆ. ಕಡಿಮೆ ಸಂಬಳಕ್ಕೆ ದುಡಿಯುವ ನಮಗೆ ಸರಕಾರದಿಂದ ಏನು ಅಪೇಕ್ಷಿಸುವುದಿಲ್ಲ. ಆದರೆ ಕೆಲಸ ಮಾಡೋರಿಗೆ ಸಪೋರ್ಟ್ ಮಾಡಿ. ಜನರ ನೆಮ್ಮದಿ ಕಾಪಾಡಲು ನಿಮ್ಮ ಸರಕಾರ ಪ್ರೋತ್ಸಾಹ ನೀಡಲಿ. ಕಿಡಿಗೇಡಿಗಳನ್ನು ಹಿಡಿಯಲು ಪೊಲೀಸರಿಗೆ ಸಹಕಾರ ನೀಡಿ ಎಂದು ಅವರು ತಿಳಿಸಿದ್ದಾರೆ.

Share.
Leave A Reply

Exit mobile version