ದಾವಣಗೆರೆ: ನಾಟಿ‌ ಮಾಡಿದ್ದೇವೆ, ನೀರು ಕೊಡಿ ಎಂದು ಸರಕಾರಕ್ಕೆ ಒತ್ತಾಯ ಮಾಡಿದ್ದ ಭಾರತೀಯ ರೈತ ಒಕ್ಕೂಟಕ್ಕೆ ಸರಕಾರ ಮೋಸ ಮಾಡಿದೆ.

ಹೌದು…ತರೀಕೆರೆ ಏತ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶಕ್ಕೆ ಪ್ರತಿದಿನ 700 ಕ್ಯೂಸೆಕ್ ನೀರು ಹರಿಸಲು ಸರಕಾರ ಆದೇಶಿಸಿರುವುದು ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನ್ಯಾಯ ಮಾಡಿದಂತಾಗಿದ್ದು, ಈ ಸಂಬಂಧ ಭಾರತೀಯ ರೈತ ಒಕ್ಕೂಟ ಹದಡಿ ರಸ್ತೆಯಲ್ಲಿರುವ ನೀರಾವರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ‘ನಮ್ಮ ನೀರು ನಮ್ಮ ಹಕ್ಕು’, ‘ಭದ್ರಾ ನಮ್ಮದು’, ‘ಬೇರೆ ಕಡೆಗೆ ನೀರು ಕೊಡುವುದಿಲ್ಲ’ ಎಂದು ಪ್ರತಿಭಟನಕಾರರು ಘೋಷಣೆ ಕೂಗಿದರು.

ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ಜಾನುವಾರು ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ 4 ದಿನಗಳವರೆಗೆ ಕಾಲು ಟಿಎಂಸಿ ಅಡಿ ನೀರು ಬಿಡಲು ಆದೇಶಿಸಲಾಗಿದೆ.

ಜಲಾಶಯದಿಂದ ನೀರು ಬಿಡಬೇಕಾದರೆ ನೀರಾವರಿ ಸಲಹಾ ಸಮಿತಿಯ ಅನುಮತಿ ಪಡೆಯಬೇಕು. ಆದರೆ ಬೆಂಗಳೂರಿನಿಂದ ಆದೇಶ ಮಾಡಿರುವುದು ಖಂಡನೀಯ’ ಎಂದು ‘ಜಲಾಶಯದಲ್ಲಿನ ನೀರಿನ ಲಭ್ಯತೆ, ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಯನ್ನು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳ ಬೇಕು. ಆದರೆ ರಾಜಕೀಯ ಬಲಾಬಲದ ಮೇಲೆ ತೀರ್ಮಾನ ಮಾಡಲಾಗಿದೆ’ ಎಂದು ಆರೋಪಿಸಿದರು.

ಜಲಾಶಯವನ್ನು ರೈತರ ವಶಕ್ಕೆ ಒಪ್ಪಿಸಿ

ಮುಖಂಡ ಬೆಳವನೂರು ನಾಗೇಶ್ವರರಾವ್ ಮಾತನಾಡಿ,ವ
ನೀರಾವರಿ ಸಲಹಾ ಸಮಿತಿಯ ಸಲಹೆ ಪಡೆಯದೇ ನೀರು ಬಿಟ್ಟಿರುವುದು ಅಕ್ಷಮ್ಯ. ಜಲಾಶಯವನ್ನು ರೈತರ ವಶಕ್ಕೆ ಒಪ್ಪಿಸಿ. ನಾವೇ ನಿರ್ವಹಣೆ ಮಾಡುತ್ತೇವೆ’

‘ತುಂಗಾ ಜಲಾಶಯದಿಂದ 27 ಟಿಎಂಸಿ ಅಡಿ ನೀರನ್ನು ಭದ್ರಾ ಜಲಾಶಯಕ್ಕೆ ಲಿಫ್ಟ್ ಮಾಡಿದ ಬಳಿಕವಷ್ಟೇ ತರೀಕೆರೆ ಭಾಗಗಳಿಗೆ ನೀರು ಹರಿಸಬೇಕು ಎಂದರು.

ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ,
ಬಸವಾಪಟ್ಟಣದಲ್ಲಿ ಕಾಡಾ ಆಡಳಿತ ಕಚೇರಿ ನಿರ್ಮಿಸಬೇಕು. ಕುಡಿಯುವ ನೀರನ್ನೇ ನೆಪ ಮಾಡಿಕೊಂಡು ಬೆಳೆಗಳಿಗೆ ನೀರು ಹರಿಸಬಾರದು.

ಒಂದು ಟಿಎಂಸಿ ಅಡಿ ನೀರಿನಲ್ಲಿ ಇಡೀ ಬೆಂಗಳೂರಿಗೆ ನೀರು ಕೊಡಬಹುದು. ಆದರೆ ಎರಡು ತಾಲ್ಲೂಕುಗಳಿಗೆ ಕಾಲು ಟಿಎಂಸಿ ನೀರು ಬೇಕಾಗಿಲ್ಲ. ಕೂಡಲೇ ಆದೇಶ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.‌ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ರೈತ ಒಕ್ಕೂಟದ ಮುಖಂಡದ ಕೊಳೆನಹಳ್ಳಿ ಸತೀಶ್ ಮಾತನಾಡಿ, ನಾಳೆಯಿಂದ ತರೀಕೆರೆ ಮತ್ತು ಕಡೂರಿಗೆ ನೀರು ಹರಿಸುವ ಆದೇಶ ರದ್ದು ಮಾಡಬೇಕು.ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸದೇ ನೀರು ಬಿಡುವ ತೀರ್ಮಾನ ಕೈಗೊಳ್ಳಬಾರದು. ತಕ್ಷಣ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಬೇಸಿಗೆ ಹಂಗಾಮಿಗೆ ನೀರು ಹರಿಸುವ ಕುರಿತ ವೇಳಾಪಟ್ಟಿ ಬಿಡುಗಡೆ ಮಾಡಬೇಕು. ತುಂಗಾದಿಂದ ಭದ್ರಾಕ್ಕೆ ಹರಿಸಬೇಕಾದ ನೀರನ್ನು ಲಿಫ್ಟ್ ಮಾಡುವ ತೀರ್ಮಾನ ಕೈಗೊಳ್ಳಬೇಕು.ಭದ್ರಾ ಮೇಲ್ದಂಡೆ ಯೋಜನೆಯ ಷರತ್ತಿನಂತೆ ತುಂಗಾದಿಂದ ಭದ್ರಾಕ್ಕೆ ನೀರು ಲಿಫ್ಟ್ ಮಾಡುವವರೆಗೆ ಭದ್ರಾ ಮೇಲ್ದಂಡೆ ಭಾಗಕ್ಕೆ ನೀರು ಹರಿಸಬಾರದು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಕೊಳೇನಹಳ್ಳಿ ಬಿ.ಎಂ. ಸತೀಶ್, ಲೋಕಿಕೆರೆ ನಾಗರಾಜ್, ಬಲ್ಲೂರು ಬಸವರಾಜ, ಕುಂದುವಾಡದ ಗಣೇಶಪ್ಪ, ಗುರುನಾಥ್, ಜಿಮ್ಮಿ ಹನುಮಂತಪ್ಪ, ಮಹೇಶಪ್ಪ, ಆರನೇಕಲ್ಲು ವಿಜಯಕುಮಾರ, ಕಲ್ಪನಹಳ್ಳಿ ಸತೀಶ್, ಉಜ್ಜಪ್ಪ, ಚಿಕ್ಕಬೂದಿಹಾಳು ಭಗತ್ ಸಿಂಗ್, ಕಲ್ಲುಬಂಡೆ ಪ್ರಸಾದ ಉಪಸ್ಥಿತರಿದ್ದರು.

Share.
Leave A Reply

Exit mobile version