ಚಿತ್ರದುರ್ಗ : ಹೆಣ್ಣು ಸಮಾಜದ ಕಣ್ಣು, ಬದುಕಿನ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವ ಗಟ್ಟಿಗಿತ್ತಿ ಆಕೆ. ಅದಕ್ಕೇ ಹೇಳುವುದು “ನಿನಗೆ ಬೇರೆ ಹೆಸರು ಬೇಕೇ ಸ್ತ್ರೀ ಅಂದರೆ ಅಷ್ಟೇ ಸಾಕೇ”…. ಎಂದು. ಇಂದು ಎಲ್ಲಾ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿರುವ ಆಕೆಯ ಸ್ಥೈರ್ಯದ ವಿವರಣೆಗೆ ಬೇರೆ ಪದಗಳು ಬೇಕಿಲ್ಲ. ಅದರಲ್ಲಿಯೂ ಪೋಲಿಸ್ ಇಲಾಖೆಯಲ್ಲಿ ಒಬ್ಬ ಮಹಿಳಾ ಎಸ್ಪಿಯಾಗಿ ಇಡೀ ಜಿಲ್ಲೆಯನ್ನು ಕಂಟ್ರೋಲ್ ತರುವುದು ಅಷ್ಟೂ ಸುಲಭವಲ್ಲ.

ಹೌದು…ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಎಸ್ಪಿ ರಾಧಿಕಾ ತನ್ನದೇ ಆದ ವರ್ಚಸ್ಸು ಹೊಂದಿದ್ದಾರೆ..ಅವರು ಕೆಲಸ ಮಾಡಿದ ಕಡೆಯೆಲ್ಲ ಉತ್ತಮ ಹೆಸರುಗಳಿಸಿದ್ದಾರೆ.

ಸೆ.9,2012 ಕ್ಕೆ ಭಾರತೀಯ ಪೊಲೀಸ್ ಸೇವೆಗೆ ಸೇರ್ಪಡೆ

ಸೆ.9,2012 ಕ್ಕೆ ಭಾರತೀಯ ಪೊಲೀಸ್ ಸೇವೆಗೆ ಸೇರ್ಪಡೆಯಾದ ಎಸ್ಪಿ ರಾಧಿಕಾ  ಹೈದರಾಬಾದ್ ಎಸ್‌ವಿಪಿಎನ್‌ಪಿಎನಲ್ಲಿ ತಮ್ಮ ತರಬೇತಿಯನ್ನು ಮುಗಿಸಿ,  ಚಿಕ್ಕಬಳ್ಳಾಪುರ ಉಪ-ವಿಭಾಗದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಕೆಲಸ ನಿರ್ವಹಿಸಿದರು. ನಂತರ ರಾಜ್ಯ ಗುಪ್ತವಾರ್ತೆಯಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ನಂತರ ಸದರಿ ರಾಜ್ಯ ಗುಪ್ತವಾರ್ತೆಯಲ್ಲಿ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದರು.

ಎಲ್ಲೇಲ್ಲಿ ಸೇವೆ

ಬೆಳಗಾವಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ, ಸುಮಾರು 9 ತಿಂಗಳು ಕಾಲ, ಮಂಡ್ಯ ಜಿಲ್ಲೆಯ ಪೊಲೀಸ್ ಅಧೀಕ್ಷಕರಾಗಿ, ಸುಮಾರು 1  ವರ್ಷ ಮೂರು ತಿಂಗಳು ಕಾಲ, ಪೊಲೀಸ್ ಪ್ರಧಾನ ಕಚೇರಿಯಲ್ಲಿ ಎಐಜಿಪಿ ಸಾಮಾನ್ಯ ವಿಭಾಗದಲ್ಲಿ ಹಾಗೂ 02 ವರ್ಷಗಳ ಕಾಲ ಚಿತ್ರದುರ್ಗ ಜಿಲ್ಲೆಯ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ, ನಂತರ ಬೆಂಗಳೂರು ಬಿಎಂಟಿಸಿ ನಿರ್ದೇಶಕರಾಗಿ ಹಾಗೂ  ಕರ್ನಾಟಕ ವಿಧಾನ ಸಭಾ ಚುನಾವಣೆ ಸಮಯದಲ್ಲಿ ಪೊಲೀಸ್ ಪ್ರಧಾನ ಕಚೇರಿಯಲ್ಲಿನ ಚುನಾವಣಾ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಸದ್ಯ
ಹೈದರಾಬಾದ್ ಎಸ್‌ವಿಪಿಎನ್‌ಪಿಎ ನಲ್ಲಿ ಸಹಾಯಕ ನಿರ್ದೇಶಕರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

  ಸೆಕ್ಸ್ ಪುಸ್ತಕ ಓದು ಅಂದ ಶಿಕ್ಷಕನಿಗೆ ಶಿಕ್ಷೆ ಕೊಡಿಸಿದ್ದ ಎಸ್ಪಿ ರಾಧಿಕಾ

ಚಿಕ್ಕಬಳ್ಳಾಪುರ ಉಪ-ವಿಭಾಗದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಕೆಲಸ ನಿರ್ವಹಿಸಿದ ಸಂದರ್ಭದಲ್ಲಿ ತಮ್ಮ ಅಸಾಧಾರಣ ತನಿಖಾ ಕೌಶಲ್ಯಗಳನ್ನು ಉಪಯೋಗಿಸಿ ತಂತ್ರಜ್ಞಾನದ ಸದುಪಯೋಗಪಡಿಸಿಕೊಂಡು ಸಾಕಷ್ಟು  ತನಿಖೆಯನ್ನು ನಿರ್ವಹಿಸಿದ್ದಾರೆ. ಅದರಲ್ಲೂ ಬಾಗೇಪಲ್ಲಿ ಮೊ.ನಂ:17/2015 ಪ್ರಕರಣದಲ್ಲಿ ಆರೋಪಿತರಿಗೆ ಶಿಕ್ಷೆಯನ್ನು ಕೊಡಿಸಿ, ನೊಂದವರಿಗೆ ನ್ಯಾಯವನ್ನು ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ನೊಂದ ಬಾಲಕಿ  ಆಚೆಪಲ್ಲಿ ಕ್ರಾಸ್ ಸರ್ಕಾರಿಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ, ಅದೇ ಶಾಲೆಯ ವಿಜ್ಞಾನ ಶಿಕ್ಷಕರಾದ ಎ1 ಕೃಷ್ಣಮೂರ್ತಿ ರವರು ಪಾಠ ಹೇಳಿಕೊಡುತ್ತೇನೆ ಅಂತ ಹೇಳಿ ಸೆಕ್ಸ್ ಪುಸ್ತಕಗಳನ್ನು ನೀಡಿ, ಓದುವಂತೆ ಬಲವಂತ ಮಾಡಿದ್ದು, ಬಾಲಕಿ ಓದದೆ ಇದ್ದಾಗ ಆಕೆಯನ್ನು ತನ್ನ ವಿಷಯದಲ್ಲಿ ಅನುತ್ತೀರ್ಣ ಮಾಡುವಂತೆ ಹೆದರಿಕೆ ಹಾಕಿದ್ದ. ಈ  ವಿಚಾರವುನ್ಯಾಯಾಲಯದ ಮುಂದೆ ಸಾಭೀತಾಗಿದ್ದರಿಂದ ಆಗಸ್ಟ್ 30,2023ಕ್ಕೆ

ಆರೋಪಿಗೆ ಹಾಗು ಎ2 ಆದಿಲಕ್ಷ್ಮೀ ಬಿಇಓ ಮತ್ತು ಎ3 ನಾಜಿಮಾ ಸುಲ್ತಾನ, ಶಿಕ್ಷಕರು ಇವರಿಗೆ ತಲಾ 03 ತಿಂಗಳು ಸಾದಾಶಿಕ್ಷೆಯನ್ನು ಘನ ನ್ಯಾಯಾಲಯವು ವಿಧಿಸಿತ್ತು.

ಮಾತುಬಾರದವಳನ್ನು ಅತ್ಯಾಚಾರ ಮಾಡಿದವನಿಗೆ ಶಿಕ್ಷೆ ಕೊಡಿಸಿದ ಎಸ್ಪಿ ರಾಧಿಕಾ

ಚಿತ್ರದರ್ಗು ಜಿಲ್ಲೆಯಲ್ಲಿ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ಅವಧಿಯಲ್ಲಿ ಒಂದು ಮುಖ್ಯವಾದ ಪ್ರಕರಣಗಳಲ್ಲಿ ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.16 ರಂದು 09.30 ಪಿ.ಎಂ ಗಂಟೆ ಸಮಯದಲ್ಲಿ. ಯಾರೋ ಒಬ್ಬ ಆಸಾಮಿ ಮೂಕ ಮತ್ತು ಕಿವುಡಳಾದ ಹೀರಿಬಾಯಿ ಗಂಡ ಲೇಟ್ ಗಿರೀಶ್ ಈಕೆಯನ್ನು ಅತ್ಯಾಚಾರ ಮಾಡಿದ್ದು, ಸದರಿ ಪ್ರಕರಣದಲ್ಲಿ ಕೆಲವೇ ಕೆಲವು ಗಂಟೆಗಳಲ್ಲಿ ಡ್ರೈವರ್ ಆಗಿದ್ದ ಆರೋಪಿ ನಾಗೇಶ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಆರೋಪಿಗೆ ಘನ ನ್ಯಾಯಾಲಯವು 12 ವರ್ಷ ಶಿಕ್ಷೆ, 01 ಲಕ್ಷ ದಂಡ ವಿಧಿಸಿತ್ತು.

ಅಪರಾಧ ಪತ್ತೆ ಕಾರ್ಯದಲ್ಲಿಯೂ ಪಂಟರ್

ಎಸ್ಪಿ ರಾಧಿಕಾ  ತಮ್ಮ ದೈನಂದಿನ ಕಾರ್ಯಗಳು ಮತ್ತು ಬಿಗಿ ಬಂದೋಬಸ್ತ್ ಕರ್ತವ್ಯಗಳ ನಡುವೆಯೂ ಅಪರಾಧ ಪತ್ತೆ ಕಾರ್ಯದಲ್ಲಿಯೂ ತಮ್ಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿ, ತಮ್ಮ ಅಧೀನ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದವರು. ಅದರಲ್ಲಿಯೂ ಸುಮಾರು 2.12 ಕೋಟಿ ಬೆಲೆ ಬಾಳುವ ವಿವಿಧ ಮಾಲುಗಳನ್ನು ಕೋವಿಡ್ ಸಂದರ್ಭದಲ್ಲಿ  ಪತ್ತೆ ಹಚ್ಚಿದ್ದರು‌ . ಪ್ರಾಪರ್ಟಿ ಪರೇಡ್ ಮುಖಾಂತರ ಅವುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಇಲಾಖೆಯ ಮೇಲೆ ಸಾರ್ವಜನಿಕರಿಗೆ ವಿಶ್ವಾಸ ಮೂಡುವಂತೆ ಮಾಡಿದ್ದರು.

ಚುನಾವಣೆ ಕರ್ತವ್ಯದಲ್ಲಿಯೂ ಕಾರ್ಯ ನಿರ್ವಹಣೆ

2023ನೇ ಸಾಲಿನ ಏಪ್ರಿಲ್-ಮೇ ಮಾಹೆಯಲ್ಲಿ ನಡೆದ ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣಾ ಸಮಯದಲ್ಲಿ ಪೊಲೀಸ್ ಪ್ರಧಾನ ಕಛೇರಿಯಲ್ಲಿ ತೆರೆಯಲಾಗಿದ್ದ ಚುನಾವಣಾ ಶಾಖೆಯಲ್ಲಿ ನೋಡಲ್ ಅಧಿಕಾರಿಯಾಗಿ ಎಸ್ಪಿ ರಾಧಿಕಾ ಕರ್ತವ್ಯ ನಿರ್ವಹಿಸಿದ್ದರು.

ಚುನಾವಣಾ ಸಮಯದಲ್ಲಿ ಎಲ್ಲಾ ಘಟಕಾಧಿಕಾರಿಗಳವರಿಂದ ಅಂಕಿ ಅಂಶಗಳ ಸಂಗ್ರಹಣೆಯನ್ನು ಮಾಡಿ ದೈನಂದಿನ ವರದಿಗಳು/ಸಾಪ್ತಾಹಿಕ ವರದಿಗಳನ್ನು ಹಾಗೂ ಚುನಾವಣೆ ಸಂದರ್ಭದಲ್ಲಿ ಘಟಕಗಳು ಜಪ್ತಿ ಮಾಡುತ್ತಿದ್ದ ವಿವರಗಳನ್ನು ಹಾಗೂ ದಾಖಲಾಗುತ್ತಿದ್ದ ಪ್ರಕರಣಗಳ ವಿವರಗಳನ್ನು ಯಾವುದೇ ತಪ್ಪು ಇಲ್ಲದಾಗೆ ಸಿದ್ದಪಡಿಸುವ ಮತ್ತು ಅವುಗಳನ್ನು ರಾಜ್ಯ ಚುನಾವಣಾ ಆಯುಕ್ತರ ರವರ ಕಛೇರಿಗೆ  ವಿಳಂಭವಿಲ್ಲದೆ ಕಳುಹಿಸುವ ಕೆಲಸವನ್ನು ತುಂಬಾ ಸಮರ್ಪಕವಾಗಿ ನಿಭಾಯಿಸಿದ್ದರು‌

ರಾಜ್ಯ ಚುನಾವಣಾ ಆಯುಕ್ತರವರ ಕಛೇರಿಯಿಂದ ಮತ್ತು ರಾಜ್ಯ ಸರ್ಕಾರವು ಕೇಳಲಾಗುತ್ತಿದ್ದ ಎಲ್ಲಾ ಮಾಹಿತಿಯನ್ನು ರಾಜ್ಯದ ಸಂಬಂದಪಟ್ಟ ಪೊಲೀಸ್ ಘಟಕಗಳಿಂದ ಪಡೆದುಕೊಂಡು ನೀಡಲಾಗಿದ್ದ ಮಾಹಿತಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ಮಾಹಿತಿಯನ್ನು ಕ್ರೋಢೀಕರಿಸಿ ಮೇಲಾಧಿಕಾರಿಗಳ ಅನುಮತಿ ಪಡೆದು ರಾಜ್ಯ ಚುನಾವಣಾ ಆಯುಕ್ತರಿಗೆ ಮತ್ತು ಸರ್ಕಾರಕ್ಕೆ ಯಾವುದೇ ವಿಳಂಭವಿಲ್ಲದೆ ಸರಿಯಾದ ಮಾಹಿತಿಯನ್ನು ನೀಡಿದ್ದರು‌

ರಾಜ್ಯದ ವಿವಿಧ ಘಟಕಗಳಿಂದ ಚುನಾವಣಾ ಕರ್ತವ್ಯಕ್ಕೆ ಅಗತ್ಯವಿರುವ ಅಧಿಕಾರಿ ಮತ್ತು ಸಿಬ್ಬಂದಿಯವರ ವಿವರನ್ನು ಪಡೆದುಕೊಂಡು, ಒಂದು ಘಟಕದಿಂದ ಮತ್ತೊಂದು ಘಟಕಕ್ಕೆ ಅಂದರೆ ಹೆಚ್ಚಿನ ಅಧಿಕಾರಿ/ ಸಿಬ್ಬಂದಿ ಇರುವ ಘಟಕದಿಂದ ಕಡಿಮೆ ಇರುವ ಅಧಿಕಾರಿ/ಸಿಬ್ಬಂದಿ ಘಟಕಗಳಿಗೆ ಅದರಲ್ಲೂ ಅಧಿಕಾರಿ/ಸಿಬ್ಬಂದಿರವರು ಹೆಚ್ಚು ಪ್ರಯಾಣಸದೆ ಇರುವ ರೀತಿಯಲ್ಲಿ ಆದಷ್ಟು ಹತ್ತಿರದ ಜಿಲ್ಲೆಗಳಿಗೆ ನಿಯೋಜಿಸಲು ಮತ್ತು ಇದಕ್ಕೆ ಅವಶ್ಯಕವಿರುವ ಅಗತ್ಯ ಆದೇಶಗಳನ್ನು ನೀಡುವ ಮೂಲಕ ಅಧಿಕಾರಿ/ಸಿಬ್ಬಂದಿಯವರ ನಿಯೋಜನೆಯನ್ನು ಯಶಸ್ವಿಯಾಗುವಂತೆ ಮಾಡಿದ್ದರು.

ರಾಜ್ಯದ ವಿವಿಧ ಗೃಹ ರಕ್ಷಕದಳದ ಘಟಕಗಳಿಂದ ಗೃಹ ರಕ್ಷಕ ಸಿಬ್ಬಂಧಿಯವರ ವಿವರಗಳನ್ನು ಪಡೆದುಕೊಂಡು, 25000ಕ್ಕೂ ಹೆಚ್ಚು ಗೃಹ ರಕ್ಷಕ ಸಿಬ್ಬಂದಿಯವರನ್ನು ರಾಜ್ಯದ ವಿವಿಧ ಘಟಕಗಳಿಗೆ ಹಂಚಿಕೆ ಮಾಡುವ ಕಾರ್ಯವನ್ನು ತುಂಬಾ ಅಚ್ಚುಕಟ್ಟಾಗಿ ಯಾವುದೇ ಗೊಂದಲಗಳಾಗದಂತೆ ನಿಯೋಜನೆ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ.

ಅಕ್ಕಪಕ್ಕದ ರಾಜ್ಯಗಳಿಂದ 8000 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಯವರನ್ನು ಚುನಾವಣಾ ಬಂದೋಬಸ್ತ್ ಕರ್ತವ್ಯಕ್ಕೆ ಕರೆಯಿಸಿಕೊಂಡು, ರಾಜ್ಯದ ವಿವಿಧ ಜಿಲ್ಲೆಗಳ ಚುನಾವಣಾ ಕರ್ತವ್ಯಕ್ಕೆ ವಸ್ತುನಿಷ್ಠವಾಗಿ ಯೋಜನೆಯನ್ನು ತಯಾರಿಸಿ, ನಿಯೋಜಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ‌ ಸದರಿ 8000 ಪೊಲೀಸ್ ಅಧಿಕಾರಿ/ಸಿಬ್ಬಂದಿರವರನ್ನು ವಿವಿಧ ರಾಜ್ಯಗಳಾದ ಮಹಾರಾಷ್ಟ  ಗೋವಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಿಂದ ನಿಯೋಜಿಸಿದ  ಅಧಿಕಾರಿ/ಸಿಬ್ಬಂದಿರವರನ್ನು ಅವರವರ ರಾಜ್ಯಗಳಿಂದ ಕರೆದುಕೊಂಡು ಬರುವಲ್ಲಿ ಹಾಗೂ ಚುನಾವಣಾ ಬಂದೋಬಸ್ತ್ ಕರ್ತವ್ಯ ಮುಗಿದ ನಂತರ ಅವರುಗಳನ್ನು ವಾಪಾಸ್ಸು ಅವರ ರಾಜ್ಯಕ್ಕೆ ಬಿಡುವ ಕೆಲಸವನ್ನು ವ್ಯವಸ್ಥತವಾಗಿ ಮಾಡಿದ್ದರು.

ಎಂ.ಹೆಚ್.ಎ ಹಂಚಿಕೆಯ ಅನುಸಾರ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯನ್ನು ಹಂತ ಹಂತವಾಗಿ ಘಟಕಗಳಿಗೆ ಚಾಲ್ತಿಯಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಮತ್ತು ಸ್ಥಳದ ಹಿಂದಿನ ಇತಿಹಾಸವನ್ನು ಹಾಗೂ ಘಟಕಾಧಿಕಾರಿಗಳ ಮನವಿಯ ಅನುಸಾರ ನಿಯೋಜನೆಯನ್ನು ಮಾಡಿದ್ದರು.

ಕೇಂದ್ರ ಸಶಸ್ತ ಪೊಲೀಸ್ ಪಡೆಯ ಚಲನೆಯ ಸಮಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ಅವರಿಗೆ ನಿಗದಿಪಡಿಸಿದ ಜಿಲ್ಲಾ ಘಟಕಗಳಿಗೆ ಸುಗಮವಾಗಿ ತಲುಪಲು ನಿಕಟವಾಗಿ ಮೇಲ್ವಿಚಾರಣೆ ಮಾಡಿದ್ದರು‌. ಅಲ್ಲದೇ ಅವರು ತಮ್ಮ ಜಿಲ್ಲೆಗೆ ಬಂದಿಳಿದಂತೆಯೇ ಅವರ ಗೌರವಧನವನ್ನು ಪಾವತಿಸಿದ್ದರು‌.

ಚುನಾವಣಾ ಸಂದರ್ಭದಲ್ಲಿ ಪ್ರಚಾರಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಆಗಮಿಸಿದ ವಿಐಪಿ/ವಿವಿಐಪಿಗಳ ಪ್ರವಾಸ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ಪಡೆದುಕೊಂಡು ಬಂದೋಬಸ್ತ್ ಯೋಜನೆಯ ಬಗ್ಗೆ ಎಲ್ಲಾ ಘಟಕಾಧಿಕಾರಿಗಳವರಿಗೆ ತಿಳಿಸುತ್ತಾ ಬಂದಿದ್ದರು. ಈ ಸಂದರ್ಭದಲ್ಲಿ ಘಟಕಗಳು ಕೇಳುವ ಹೆಚ್ಚಿನ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಹಾಗೂ ಎಎನ್‌ಎಫ್/ ಇತರೆ ವಿಶೇಷ ತುಕಡಿಗಳನ್ನು ಬೇರೆ ಘಟಕಗಳಿಂದ ಪಡೆದು ಮೇಲಾಧಿಕಾರಿಗಳ ಅನುಮತಿ ಪಡೆದು ನಿಯೋಜನೆ ಮಾಡುವಲ್ಲಿ ಯಾವುದೇ ವಿಳಂಬವಿಲ್ಲದೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಚುನಾವಣಾ ಪುಸ್ತಕ ಬರೆದ ಎಸ್ಪಿ

ವಿಸ್ತೃತ ಚುನಾವಣಾ ಬಂದೋಬಸ್ತ್ ಯೋಜನೆಯನ್ನು (ರಾಜ್ಯ ಚುನಾವಣಾ ಪುಸ್ತಕ) ಎಸ್ಪಿ ರಾಧಿಕಾ ತಯಾರಿಸಿರುತ್ತಾರೆ. ಈ ಮೂಲಕ ಚುನಾವಣಾ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚುನಾವಣೆಯು ಶಾಂತರೀತಿಯಿಂದ ಮುಕ್ತಾಯವಾಗಲು ಕಾರಣರಾಗಿರುತ್ತಾರೆ.

ಒಟ್ಟಾರೆಯಾಗಿ ಚುನಾವಣೆ ಶಾಖೆಯಲ್ಲಿ ಅತ್ಯಂತ ಜವಾಬ್ದಾರಿಯಿಂದ ಹಗಲು ರಾತ್ರಿ ತಾಳ್ಮೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಮೇಲಾಧಿಕಾರಿಗಳವರಿಗೆ ಯಾವುದೇ ರೀತಿಯ ತೊಡಕುಗಳು ಉಂಟಾಗದಂತೆ ಚುನಾವಣೆ ಕೆಲಸ ಕಾರ್ಯಗಳನ್ನು ನಿರ್ವಹಿಸಿರುತ್ತಾರೆ. ಒಟ್ಟಾರೆಯಾಗಿ ತಮಗೆ ವಹಿಸಿದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಚುನಾವಣೆ ಕೆಲಸ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದಂತೆ ನೆರವೇರಲು ಕಾರಣಕರ್ತರಾಗಿದ್ದರು. ಈ ಕಾರಣದಿಂದ  ಎಡಿಜಿಪಿ ಕಾ&ಸು ರವರು ಚುನಾವಣಾ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಪ್ರಶಂಸನಾ ಪತ್ರವನ್ನು ನೀಡಿದ್ದರು.

ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಸ್ಥಾಪನೆ

ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಮಾನ್ಯ ಡಿಜಿ & ಐಜಿಪಿ ರವರ ಸೂಚನೆಯ ಮೇರೆಗೆ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ನ್ನು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸ್ಥಾಪಿಸಲಾಗಿರುತ್ತದೆ. ಸಾಮಾಜಿಕ ಜಾಲ ತಾಣಗಳಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಟ್ವಿಟರ್ ಅಕೌಂಟ್, ಫೇಸ್ ಬುಕ್, ಇನ್ಸ್ಸ್ಟಾಗ್ರಾಂ ಖಾತೆಗಳನ್ನು ಹಾಗೂ ಯೂಟೂಬ್ ಚಾನಲ್‌ಗಳನ್ನು ಪ್ರಾರಂಭಿಸಿದ್ದು ಇವರ ವಿಶೇಷ

ಪರಿಸ್ಥಿತಿ ಕೈ ಮೀರದಂತೆ ಕೆಲಸ

ಸಾಮಾಜಿಕ ಜಾಲ ತಾಣಗಳಲ್ಲಿನ ಎಲ್ಲಾ ಚಟುವಟಿಕೆಗಳನ್ನು ಮತ್ತು ಪ್ರಮುಖ ಸಂಗತಿಗಳನ್ನು ಮೇಲ್ವಿಚಾರಣೆಗೆ ಒಳಪಡಿಸಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ವಿಷಯವೇನಾದರೂ ಇದ್ದಲ್ಲಿ ಸದರಿ ಸಂಗತಿಗಳ ಬಗ್ಗೆ ಸಂಬಂಧಪಟ್ಟ ಘಟಕಗಳಿಗೆ ಮತ್ತು ಹಿರಿಯ  ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ತಕ್ಷಣವೇ ತಿಳಿಸಿ, ಈ ಮೂಲಕ ಯಾವುದೇ ಘಟನೆಗಳು ಪೊಲೀಸ್ ಇಲಾಖೆಯ ಕೈ ಮೀರಿ ಹೋಗದಂತೆ ನಿಯಂತ್ರಣವನ್ನು ಸಾಧಿಸುವಲ್ಲಿ ಈ ಅಧಿಕಾರಿ ಯಶಸ್ವಿಯಾಗಿದ್ದಾರೆ.

ಜನರೊಂದಿಗೆ ವಿಶ್ವಾಸ

ಸಾರ್ವಜನಿಕರಲ್ಲಿ ಜಾಗೃತಿ ಮೂಢಿಸುವ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ, ವಿಡಿಯೋ ಹಾಗೂ ಪೋಸ್ರ‍್ಸ್ ಗಳನ್ನು ತಯಾರಿಸಿ ಮೇಲಿನ ಸಾಮಾಜಿಕ ಜಾಲತಾಣ ಅಕೌಂಟ್ ಗಳಲ್ಲಿ ಹರಿಬಿಟ್ಟು ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ವೃದ್ದಿಸಲು ಕಾರಣರಾಗಿದ್ದಾರೆ.

ಕಾನೂನು ಕೆಲಸಗಳಿಗೆ ಪ್ರಥಮ ಆದ್ಯತೆ

ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ದೈನಂದಿನ ಚಟುವಟಿಕೆ ಹಾಗೂ ಕಾನೂನು
ಮತ್ತು ಸು ವಿಭಾಗದಲ್ಲಿನ ಕೆಲಸ ಕಾರ್ಯಗಳನ್ನು ಪ್ರಥಮ ಆಧ್ಯತೆಯ ಮೇರೆಗೆ ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ. ಇನ್ನು ಘನ ಸರ್ವೋಚ್ಚ ಮತ್ತು  ಘನ ಉಚ್ಚ ನ್ಯಾಯಾಲಯಗಳಿಂದ ಬರುವ ರಿಟ್ ಅರ್ಜಿಗಳಿಗೆ(ರಿಟ್ ಪಿಟಿಷನ್) ಮಾಹಿತಿಯನ್ನು ತಯಾರಿಸಿ, ಮೇಲಾಧಿಕಾರಿಗಳವರ ಅನುಮೋಧನೆಯನ್ನು ಪಡೆದುಕೊಂಡು ಸಂಬಂಧಪಟ್ಟ ನ್ಯಾಯಾಲಯಗಳಿಗೆ ಸದರಿ ಮಾಹಿತಿಯನ್ನು ಸಲ್ಲಿಸುತ್ತಿದ್ದರು.

ಅಲರ್ಟ್ ಸಂದೇಶ

ಪ್ರಮುಖ ಬಂದೋಬಸ್ತ್ ಗಳಾದ  ಗೌರಿ ಗಣೇಶ ಹಬ್ಬ, ಮೊಹರಂ, ದಸರಾ ಹಾಗೂ ಇತರೆ ಬಂದೋಬಸ್ತ್ಗಳಿಗೆ ಸಂಬಂಧಿಸಿದಂತೆ ಎಚ್ಚರಿಕೆ(ಅಲರ್ಟ್) ಸಂದೇಶಗಳನ್ನು ತಯಾರಿಸಿ ಘಟಕಗಳಿಗೆ ಸೂಕ್ತ ಕ್ರಮವಹಿಸಲು ಕಳುಹಿಸಿಕೊಟ್ಟಿದ್ದರು. ಯಾವುದಾದರೂ ಬಂದೋಬಸ್ತ್ ಕರ್ತವ್ಯಗಳಿಗೆ ಹೆಚ್ಚುವರಿಯಾಗಿ ಅಧಿಕಾರಿ ಮತ್ತು ಸಿಬ್ಬಂಧಿಯವರ ಅವಶ್ಯಕತೆ ಕಂಡುಬಂದಲ್ಲಿ ಅಧಿಕಾರಿ ಮತ್ತು ಸಿಬ್ಬಂಧಿಯವರನ್ನು ಬೇರೆ ಘಟಕಗಳಿಂದ ಯಾವುದೇ ವಿಳಂಭವಿಲ್ಲದೆ ಕರ್ತವ್ಯಕ್ಕೆ ನಿಯೋಜಿಸಿ ಕಳುಹಿಸಿಕೊಡುವ ಮೇಲ್ವಿಚಾರಣೆ ಕೈಗೊಂಡಿರುವುದು ಇವರ ವಿಶೇಷ.

ನಡುವಳಿ ತಯಾರಿಸಿ ಮೇಲಧಿಕಾರಿಗಳ ಅನುಮೋದನೆ

ಎಸ್ಪಿ ರಾಧಿಕಾ ಡಿಜಿ & ಐಜಿಪಿ ಮತ್ತು ಎಡಿಜಿಪಿ ಕಾ & ಸು ರವರು ಆಯೋಜಿಸುವ ಎಲ್ಲಾ ಸಭೆಗಳಲ್ಲಿ ಹಾಜರಿದ್ದು ಮಾನ್ಯರು ನೀಡಿದ ಸೂಚನೆಗಳನ್ನು ಒಳಗೊಂಡ ನಡಾವಳಿಯನ್ನು ತಯಾರಿಸಿ ಮೇಲಧಿಕಾರಿಗಳ ಅನುಮೋಧನೆ  ಪಡೆದುಕೊಂಡು ಘಟಕಗಳಿಗೆ ಕಳುಹಿಸಿಕೊಟ್ಟು, ಪಾಲನಾ ವರದಿಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೇಕಾನೂನು ಮತ್ತು ಸುವ್ಯವಸ್ಥೆ ಶಾಖೆಯಿಂದ ಹೊರಡಿಸುವ ಸುತ್ತೋಲೆಗಳನ್ನು ತಯಾರಿಸಲು ಸಹಕಾರಿಯಾಗಿರುತ್ತಾರೆ,

ವಿಧಾನ ಮಂಡಲ ಅಧಿವೇಶನ

ಅಧಿವೇಶನದ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲಾಗಿರುವ ಹಾಗೂ ಚಾಲ್ತಿಯಲ್ಲಿರುವ ವಿವಾದಗಳ ಬಗ್ಗೆ ಘಟಕಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಕ್ರೂಢಿಕರಿಸಿ ಮುಂದಿನ ಕ್ರಮಕ್ಕಾಗಿ   ಡಿಜಿ & ಐಜಿಪಿ ಮತ್ತು ಎಡಿಜಿಪಿ ಕಾ & ಸು ರವರಿಗೆ ಸಲ್ಲಿಸಿಕೊಂಡು ಅಧಿವೇಶನಕ್ಕೆ ಬೇಕಾಗುವ ಎಲ್ಲಾ ಮಾಹಿತಿಯನ್ನು ಮುಂಚಿತವಾಗಿಯೇ ತಯಾರಿಸಿ ಇಟ್ಟುಕೊಳ್ಳುವಂತಹ ಕೆಲಸವನ್ನು ಅವರು ನಿರ್ವಹಿಸಿದ್ದರು.

ಅಧಿವೇಶನದ ಪ್ರಶ್ನೆಗೆ ಮಾಹಿತಿ ನೀಡುತ್ತಿದ್ದ ಎಸ್ಪಿ

ವಿಧಾನ ಮಂಡಲ ಅಧಿವೇಶನದ ಸಮಯದಲ್ಲಿ ಸರ್ಕಾರದಿಂದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕೇಳಲಾಗುವ ಮಾಹಿತಿಯನ್ನು ಘಟಕಗಳಿಂದ ಪಡೆದುಕೊಂಡು, ಮಾಹಿತಿಯನ್ನು ಕೂಲಂಕುಶವಾಗಿ ಪರಿಶೀಲಿಸಿ ನಂತರ ಹಿರಿಯ ಅಧಿಕಾರಿಗಳವರ ಅನುಮೋಧನೆಯನ್ನು ಪಡೆದುಕೊಂಡು ಯಾವುದೇ ವಿಳಂಭವಿಲ್ಲದೆ ಸರ್ಕಾರಕ್ಕೆ ಎಸ್ಪಿ ರಾಧಿಕಾ ಸಲ್ಲಿಸುತ್ತಿದ್ದರು.

ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ 2023 ಜುಲೈ ಮತ್ತು 2023 ಡಿಸೆಂಬರ್ ಮಾಹೆಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನಗಳ ಸಮಯದಲ್ಲಿ ಮಾಹಿತಿಯನ್ನು ಒದಗಿಸುವ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಬರ್ಲಿನ್ ಸಿಟಿಯಲ್ಲಿನ ಮ್ಯಾರಾಥಾನ್ ನಲ್ಲಿ ಭಾಗಿ

ಪೊಲೀಸ್ ಇಲಾಖೆಯು ತುಂಬಾ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಘಟಕವಾಗಿದ್ದು, ಕೆಲವೊಮ್ಮೆ ದಿನದ ಹೆಚ್ಚಿನ ಸಮಯ ಕೆಲಸ ಮಾಡುವಂತಹ ಸಂದಿಗ್ಧ ಪರಿಸ್ಥಿತಿಗಳು ಒದಗಿಬರುತ್ತವೆ.  ಇಂತಹ ಇಲಾಖೆಯಲ್ಲಿ ಇದ್ದುಕೊಂಡು ತಮ್ಮ ಒತ್ತಡದ ಕೆಲಸದ ನಡುವೆಯೂ ಸಹ ಎಸ್ಪಿ ರಾಧಿಕಾ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು  ಗಮನಹರಿಸಿ, 2023ನೇ ಆಗಸ್ಟ್ ಮಾಹೆಯಲ್ಲಿ ಜರ್ಮನಿ ದೇಶದ ರಾಜಧಾನಿಯಾದ ಬರ್ಲಿನ್ ಸಿಟಿಯಲ್ಲಿ ನಡೆದ 42 ಕೀ.ಮೀ ಮ್ಯಾರಾಥಾನ್‌ನಲ್ಲಿ ಭಾಗವಹಿಸಿ, ಪೊಲೀಸ್ ಇಲಾಖೆಯ ಪ್ರತಿಷ್ಠೆಯನ್ನು ಅಂತರಾಷ್ಟಿಯ ಮಟ್ಟದಲ್ಲಿ ಬೆಳಗಿಸಿದ್ದಾರೆ. ಈ ಹಿಂದೆಯೂ ಸಹ ಹೈದರಾಬಾದ್ ಎಸ್‌ವಿಪಿಎನ್‌ಪಿಎನಲ್ಲಿ ತರಬೇತಿಯಲ್ಲಿ ಇದ್ದಾಗ 42 ಕೀ.ಮೀಗಳ ಮ್ಯಾರಾಥಾನ್‌ನನ್ನು ಪೂರ್ಣಗೊಳಿಸಿದ ಮೊದಲ ಮಹಿಳಾ ಪ್ರೊಬೇಷನರಿ ಐಪಿಎಸ್ ಅಧಿಕಾರಿಯಾಗಿದ್ದಾರೆ‌

ಕಾನೂನು ಕಾಪಾಡವೊದರೊಂದಿಗೆ ಅಪರಾಧ ತಡೆಗಟ್ಟುವಿಕೆ

ಸದರಿಯವರು ತಮ್ಮ ಕರ್ತವ್ಯದ ಅವಧಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದರೊಂದಿಗೆ ಅಪರಾಧಗಳ ಪ್ರಕರಣಗಳ ತಡೆಗಟ್ಟುವಿಕೆ, ರೌಡಿ ಹಾಗೂ ಎಂ.ಓ. ಆಸಾಮಿಗಳ ವಿರುದ್ದ ಕ್ರಮ ಕೈಗೊಳ್ಳುವಿಕೆ, ಸ್ವತ್ತು ಕಳವು ಪ್ರಕರಣಗಳ ನಿಯಂತ್ರಣ ಮತ್ತು ಪತ್ತೆ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಮತ್ತು ಕ್ರಮ ಕೈಗೊಳ್ಳುವುದು, ಅಧೀನ ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ ಶಿಸ್ತು ಮೂಡಿಸುವಲ್ಲಿ ಹಾಗೂ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸುವಲ್ಲಿ ಹಾಗೂ ಹಿರಿಯ ಅಧಿಕಾರಿಗಳು ವಹಿಸುವ ಕೆಲಸ-ಕಾರ್ಯಗಳನ್ನು ಆಸಕ್ತಿಯಿಂದ ಯಾವುದೇ ಲೋಪ ದೋಷಗಳಾಗದಂತೆ ನಿರ್ವಹಿಸಿದ್ದು, ಶ್ಲಾಘನೀಯ.‌

12 ವರ್ಷಗಳ ಅತ್ಯುತ್ತಮ ಮತ್ತು ನಿಷ್ಕಳಂಕ ಸೇವೆ

ಎಸ್ಪಿ ರಾಧಿಕಾ ಸಮರ್ಪಿತ ಮತ್ತು ಅತ್ಯುತ್ತಮ ಅಧಿಕಾರಿಯಾಗಿದ್ದು, ಅವರು ತಮ್ಮ ಕರ್ತವ್ಯಗಳನ್ನು ಅತ್ಯಂತ ಸಮರ್ಪಣೆ ಮತ್ತು ಬದ್ದತೆಯಿಂದ ನಿರ್ವಹಿಸಿದ್ದಾರೆ. ಇವರು ತಮ್ಮ 12 ವರ್ಷಗಳ ಅತ್ಯುತ್ತಮ ಮತ್ತು ನಿಷ್ಕಳಂಕ ಸೇವೆಯನ್ನು ಪೂರ್ಣಗೊಳಿಸಿದ್ದಾರೆ. ಈ ಅಧಿಕಾರಿ ಒಬ್ಬ ಪ್ರಾಮಾಣಿಕ, ದಕ್ಷ, ಪರಿಶ್ರಮದ ವೃತ್ತಿಪರ ಮನೋಭಾವದ ಅಧಿಕಾರಿಯಾಗಿದ್ದು ಇವರು ಅತ್ಯುತ್ತಮ ಪ್ರಾಮಾಣಿಕತೆಯನ್ನು ಒಳಗೊಂಡಿದ್ದು ಹಾಗೂ ಶಿಸ್ತಿನ ಅಧಿಕಾರಿಯಾಗಿದ್ದಾರೆ. ಇನ್ನು   ತನಗೆ ಹಸ್ತಾಂತರಿಸಿದ ಎಲ್ಲಾ ಕಾರ್ಯ ಯೋಜನೆಗಳಲ್ಲಿ ಉತ್ತಮ ಸಾಧನೆ ತೋರಿಸಿದ್ದಾರೆ. ಈ ಕಾರಣದಿಂದ  ದಕ್ಷ ಮತ್ತು ಪರಿಣಾಮಕಾರಿ ಆಡಳಿತ ಕೌಶಲ್ಯಕ್ಕೆ ತಮ್ಮ ಅಧೀನ ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರು ಮತ್ತು ಉನ್ನತ ಅಧಿಕಾರಿಗಳು ಅನೇಕ ಸಂದರ್ಭಗಳಲ್ಲಿ ಮೆಚ್ಚುಗೆ ಮತ್ತು ಪ್ರಶಂಸನೆ ವ್ಯಕ್ತಪಡಿಸಿರುತ್ತಾರೆ. ಒಟ್ಟಾರೆ ದೇಶ ಆಳುವುದರಿಂದ ಹಿಡಿದು ಕುಟುಂಬದ ಪ್ರತೀ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲ ಶಕ್ತಿ, ತಾಳ್ಮೆ, ಉತ್ಸಾಹ, ಧೈರ್ಯ ಮಹಿಳೆಗಿದ್ದು, ಎಸ್ಪಿ ರಾಧಿಕಾ ಈ ಮಾತಿಗೆ ಬದ್ದರಾಗಿದ್ದಾರೆ.

Share.
Leave A Reply

Exit mobile version