ದಾವಣಗೆರೆ : ಖಾಯಂತಿಗಾಗಿ ಒತ್ತಾಯಿಸಿ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಪ್ರತಿಭಟನೆ 35 ನೇ ದಿನಕ್ಕೆ ಮುಂದುವರಿದಿದೆ.
ದಾವಣಗೆರೆ ಜಿಲ್ಲೆಯ ಡಿಸಿ ಕಚೇರಿ ಬಳಿ ಅತಿಥಿ ಉಪನ್ಯಾಸಕರ ಮುಷ್ಕರ ಮುಂದುವರೆದಿದ್ದು, ಒಬ್ಬರಿಗೊಬ್ಬರು ಕೈ ಕಟ್ಟಿಕೊಂಡು ವಿನೂತನ ಪ್ರತಿಭಟನೆ ನಡೆಸಿದರು.
ಸರ್ಕಾರ ನಮ್ಮ ಭವಿಷ್ಯವನ್ನು ಅತಂತ್ರ ಸ್ಥಿತಿಯಲ್ಲಿ ಬಿಟ್ಟು ಕೈ ಕಟ್ಟಾಕಿದೆ. ಹಾಗೆ ಸರ್ಕಾರ ಹಸಿ ಸುಳ್ಳು ಹೇಳುತ್ತಾ ಕಿವಿಗೆ ಹೂವು ಇಟ್ಟಿದೆ. ಈಗಲಾದರೂ ನಮ್ಮಗಳ ಕೈ ಕಟ್ಟಾಕಿರುವ ಕಗ್ಗಂಟನ್ನು ಬಿಡಿಸಿ ಸರ್ಕಾರ ನಮ್ಮ ಭವಿಷ್ಯ ರೂಪಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಎಲ್ಲಾ ಅತಿಥಿ ಉಪನ್ಯಾಸಕರ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರತಿಭಟನಕಾರರು ಹೇಳಿದರು.
ಮಾನವ ಬಂಧುತ್ವ ವೇದಿಕೆ ಹಾಗೂ ಅಖಿಲ ಭಾರತೀಯ ಯುವ ಫೆಡರೇಷನ್ ಸಂಘಟನೆಗಳ ಮುಖಂಡರು ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿನೂತನ ಪ್ರತಿಭಟನೆ ನಡೆಸುತ್ತೇವೆ ಎಂದು ಅತಿಥಿ ಉಪನ್ಯಾಸಕರು – ಶ್ಯಾಮ್ ಪ್ರಸಾದ್, ಸಿದ್ದೇಶ್, ಕಳಕಪ್ಪ ಚೌರಿ, ಮೋಹನ್, ಜಗದೀಶ್, ಹನುಮಂತಪ್ಪ, ಪ್ರವೀಣ್ ಕುಮಾರ್, ಸಂತೋಷ್ ಕುಮಾರ್, ವೀರೇಶ್, ಡಾ. ಗೋವಿಂದಪ್ಪ, ದೇವೇಂದ್ರಪ್ಪ, ಶುಭ, ರೇಖಾ, ಲಕ್ಷ್ಮಿ, ಚಂದ್ರಿಕಾ, ಪ್ರತಿಭಾ, ವೀಣಾ, ಹಸೀನಾ ಬೇಗಮ್ ತಿಳಿಸಿದ್ದಾರೆ.