ದಾವಣಗೆರೆ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ವತಿಯಿಂದ 2024-29 ಸಭೆಯನ್ನು ಜನವರಿ 11 ರಂದು ಬೆಳಗ್ಗೆ 10 ಕ್ಕೆ ಶಿರಮಗೊಂಡನಹಳ್ಳಿಯ ಸುಧಾ ವೀರೇಂದ್ರ ಪಾಟೀಲ್ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ಬಿಪಾಲಾಕ್ಷಿ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ರಾಜ್ಯದ 28 ಜಿಲ್ಲೆ ಹಾಗೂ 3 ಶೈಕ್ಷಣಿಕ ಜಿಲ್ಲೆಗಳಿಂದ ಜಿಲ್ಲಾಧ್ಯಕ್ಷರು, ರಾಜ್ಯ ಸಂಘದ ರಾಜ್ಯ ಪರಿಷತ್ ಸದಸ್ಯರು ಮತ್ತು ರಾಜ್ಯದ ಎಲ್ಲಾ ತಾಲ್ಲೂಕಿನ ಸಂಘದ ಹಾಗೂ ತಾಲೂಕು ಸಂಘದ ಎಲ್ಲಾ ಪದಾಧಿಕಾರಿಗಳು ಸುಮಾರು ತಾಲೂಕು ಅಧ್ಯಕ್ಷರುಗಳು ಸೇರಿದಂತೆ ಒಂದು ಸಾವಿರದ ಐದುನೂರಕ್ಕೂ ಹೆಚ್ಚಿನ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದಕ್ಕೂ ಮುಂಚೆ ಹೆದ್ದಾರಿ ರಾಷ್ಟ್ರೀಯ 48ರಲ್ಲಿನ ಅಂಡರ್ ಪಾಸ್ ರಸ್ತೆಯಿಂದ ಕಾರ್ಯಕ್ರಮ ನಡೆಯಲಿರುವ ಸ್ಥಳವಾದ ಸುಧಾ ವೀರೇಂದ್ರ ಪಾಟೀಲ್ ಸಮುದಾಯ ಭವನದ ತನಕ ಸಂಘದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಮಧ್ಯಾಹ್ನ 3 ಗಂಟೆಯಿಂದ 2024- 2029 ನೇ ಸಾಲಿಗೆ ಚುನಾಯಿತರಾದ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಬೀಳ್ಕೋಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಪದಗ್ರಹಣ ಸಂಘದಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ನೆರವೇರಿಸುವರು.ದಾವಣಗೆರೆ ಸಂಘದಜಿಲ್ಲಾಧ್ಯಕ್ಷ ವೀರೇಶ್ ಎಸ್.ಒಡೇನಪುರ ಅಧ್ಯಕ್ಷತೆವಹಿಸುವರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಗಿರಿಗೌಡ, ರಾಜ್ಯ ಖಜಾಂಚಿ ವಿ.ವಿ.ಶಿವರುದ್ರಯ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ.ಬಳ್ಳಾರಿ, ಗೌರವಾಧ್ಯಕ್ಷ ಎಸ್. ಬಸವರಾಜ್ ಆಗಮಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕ.ರಾ.ಸರಕಾರಿ ನೌಕರರಾಧ್ಯಕ್ಷರಾದ ಎಚ್.ಎಂ.ರೇವಣ್ಣಸಿದ್ದಪ್ಪ, ಜಿ.ಬಸವರಾಜಪ್ಪ, ಕೆ.ಶಿವಶಂಕರ್, ಎಂ.ಡಿ.ನೀಲಗಿರಿಯಪ್ಪ, ಹಾಲೇಶಪ್ಪ ಸಿ.ಪರಶುರಾಮಪ್ಪ, ಬಿ. ಪಾಲಾಕ್ಷಿ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾಖಜಾಂಜಿ ಬಿ.ಆರ್.ತಿಪ್ಪೇಸ್ವಾಮಿ, ರಾಜ್ಯ ಪರಿಷತ್ ಸದಸ್ಯ ಜಿ.ಓಬಳಪ್ಪ, ಕಾರ್ಯಾಧ್ಯಕ್ಷ ಸಿ.ಪರಶುರಾಮಪ್ಪ ಆಂಜಿನಪ್ಪ, ಮಂಜುನಾಥ್ ಹಿತ್ತಲಮನಿ ಇದ್ದರು.

Share.
Leave A Reply

Exit mobile version