ಬೆಂಗಳೂರು : ಬೆಂಗಳೂರು, ಚಿಕ್ಕಮಗಳೂರು, ಬೀದರ್, ಬೆಳಗಾವಿ, ತುಮಕೂರು, ಗದಗ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಒಟ್ಟು8 ಮಂದಿ ಅಧಿಕಾರಿಗಳ ಮೇಲೆ ದಾಳಿ ನಡೆದಿದ್ದು, ಅಪಾರ ಆಸ್ತಿ, ಪಾಸ್ತಿ ಇರುವುದು ಪತ್ತೆಯಾಗಿದೆ

ಎಲ್ಲೆಲ್ಲಿ ದಾಳಿ

ಅಕ್ರಮ ಆಸ್ತಿ ಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿಯ ಬಿಸಿಎಂ ತಾಲೂಕು ಅಧಿಕಾರಿ ಲೋಕೇಶ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.ರಾಮಾಂಜನೇಯ ನಗರದಲ್ಲಿರುವ ನಿವಾಸ, ಸಂಬಂಧಿಕರು ಹಾಗೂ ಸ್ನೇಹಿತರ ನಿವಾಸದ ಮೇಲೂ ಏಕಕಾಲಕ್ಕೆ ದಾಳಿ ಮಾಡಲಾಗಿದ್ದು ಚಿನ್ನಾಭರಣ, ನಗದು ಮತ್ತು ಆಸ್ತಿ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದ ಆರೋಪದ ಹಿನ್ನೆಲೆಯಲ್ಲಿ ಖಾನಾಪುರ ತಹಶೀಲ್ದಾರ್ ಪ್ರಕಾಶ ಗಾಯಕವಾಡ ಅವರ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು.

ಬೆಳಗಾವಿಯ ಗಣೇಶಪುರದ ಮನೆ, ನಿಪ್ಪಾಣಿಯಲ್ಲಿರುವ ಮನೆ ಹಾಗೂ ಖಾನಾಪುರದ ಕಚೇರಿ ಮೇಲೆ ಬೆಳಗಾವಿ ಲೋಕಾಯುಕ್ತ ಎಸ್‌ಪಿ ಹನುಮಂತರಾಯ್ ನೇತೃತ್ವದಲ್ಲಿ ದಾಳಿ ನಡೆಸಿ ದಾಖಲೆ ಪರಿಶೀಲಿಸಿದರು. ಲೋಕಾಯುಕ್ತ ಡಿವೈಎಸ್‌ಪಿ ಪುಷ್ಪಲತಾ, ಪಿಐ ನಿರಂಜನ್ ಪಾಟೀಲ ಈ ದಾಳಿಯಲ್ಲಿ ಭಾಗಿಯಾಗಿದ್ರು.

ಯಾರ ಬಳಿ ಎಷ್ಟು ಅಕ್ರಮ ಆಸ್ತಿ ಪತ್ತೆ

ಬೆಂಗಳೂರು ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಎಂ. ಶೋಭಾ ಅವರ ಹೆಸರಿನಲ್ಲಿ 1 ನಿವೇಶನ, ಮನೆ, 21 ಎಕರೆ ಕೃಷಿ ಜಮೀನು ಸೇರಿ 45,36000 ರೂ. ಮೌಲ್ಯದ ಸ್ಥಿರ ಆಸ್ತಿ ಪತ್ತೆಯಾಗಿದೆ. 60 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 20 ಲಕ್ಷ ರೂ. ಮೌಲ್ಯದ ವಾಹನಗಳು 1 ಕೋಟಿ 60 ಲಕ್ಷ ರೂ. ಮೊತ್ತದ ಬ್ಯಾಂಕ್ ಠೇವಣಿ ಸೇರಿ ಇವರ ಬಳಿ ಒಟ್ಟು 3 ಕೋಟಿ 9 ಲಕ್ಷ ರೂ. ಮೊತ್ತದ ಅಕ್ರಮ ಸಂಪತ್ತು ಪತ್ತೆಯಾಗಿದೆ.
ಕಡೂರು ತಾಲೂಕಿನ ಆರೋಗ್ಯಾಧಿಕಾರಿ ಎಸ್. ಎನ್. ಉಮೇಶ್ ಹೆಸರಿನಲ್ಲಿ 2 ನಿವೇಶನ, ಮನೆ, 8 ಎಕರೆ ಕೃಷಿ ಜಮೀನು, 45 ಲಕ್ಷ ರೂ. ಮೊತ್ತದ ಚಿನ್ನಾಭರಣ ಸೇರಿ ಒಟ್ಟು 1 ಕೋಟಿ 25 ಲಕ್ಷ ರೂ. ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಸಣ್ಣ ನೀರಾವರಿ ಇಲಾಖೆ ಎಇಇ ರವೀಂದ್ರ ಮೆಟ್ರೆ ಬಳಿ 5 ನಿವೇಶನ, 2 ಮನೆ, 7 ಎಕರೆ ಕೃಷಿ ಜಮೀನು, 16ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿ 2 ಕೋಟಿ 25 ಲಕ್ಷ ರೂ. ಮೊತ್ತದ ಒಟ್ಟು ಆಸ್ತಿ ಇರುವುದು ಪತ್ತೆಯಾಗಿದೆ.

ಖಾನಾಪೂರ ತಾಲೂಕು ತಹಸೀಲ್ದಾರ್ ಪ್ರಕಾಶ್ ಶ್ರೀಧರ ಗಾಯಕವಾಡ್ ಬಳಿ 2 ನಿವೇಶನ, 3 ಮನೆ, 28 ಎಕರೆ ಕೃಷಿ ಜಮೀನು, 25 ಲಕ್ಷ ರೂ. ಮೊತ್ತದ ಚಿನ್ನಾಭರಣ 57 ಲಕ್ಷ ರೂ. ಮೌಲ್ಯದ ವಾನಗಳು ಸೇರಿ ಒಟ್ಟು 4 ಕೋಟಿ 41 ಸಾವಿರ ರೂ. ಮೊತ್ತದ ಆಸ್ತಿ ಇರುವುದು ತನಿಖೆಯಿಂದ ತಿಳಿದು ಬಂದಿದೆ.
ಬೆಂಗಳೂರಿನ ಯಲಹಂಕ ಆರ್‌ಟಿಒ ಕಚೇರಿ ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಳಿ 1 ನಿವೇಶನ, 2 ವಾಸದ ಮನೆ, 4 ಎಕರೆ ಕೃಷಿ ಜಮೀನು, 57 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿ ಒಟ್ಟು 5 ಕೋಟಿ 2 ಲಕ್ಷ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಗದಗ ಪುರಸಭೆ ಎಇಇ ಹುಚ್ಚಪ್ಪ ಎ ಬಂಡಿವಡ್ಡರ್ ಬಳಿ 1 ನಿವೇಶನ, 1 ವಾಣಿಜ್ಯ ಸಂಕೀರ್ಣ, 2 ವಾಸದ ಮನೆ, 18 ಲಕ್ಷ ರೂ. ಮೊತ್ತದ ಚಿನ್ನಾಭರಣ,42 ಲಕ್ಷ ರೂ. ಮೌಲ್ಯದ ವಾಹನಗಳು ಸೇರಿ 1 ಕೋಟಿ 58 ಲಕ್ಷದ ಅಕ್ರಮ ಸಂಪತ್ತು ಪತ್ತೆಯಾಗಿದೆ.

ಬಳ್ಳಾರಿ ಜಿಲ್ಲೆ ಹಿಂದುಳಿದ ವರ್ಗಗಳ ಕಲ್ಯಾಣಾದಿಕಾರಿ ಆರ್. ಹೆಚ್. ಲೋಕೇಶ್ ಹೆಸರಿನಲ್ಲಿ 2 ನಿವೇಶನ, 1 ಮನೆ, 6 ಎಕರೆ ಕೃಷಿ ಜಮೀನು, 7 ಲಕ್ಷ ರೂ. ಮೊತ್ತದ ಚಿನ್ನಾಭರಣ, 16 ಲಕ್ಷ ರೂ. ಮೌಲ್ಯದ ವಾಹನ ಸೇರಿ ಒಟ್ಟು 2 ಕೋಟಿ 3 ಲಕ್ಷ ರೂ. ಸಂಪತ್ತು ಪತ್ತೆಯಾಗಿದೆ.

ಜೆಸ್ಕಾಂ ಜೆಇ ಹುಲುಗಪ್ಪ ಬಳಿ 3 ನಿವೇಶನ, 2 ಮನೆ, 24 ಎಕರೆ ಕೃಷಿ ಭೂಮಿ, 12 ಲಕ್ಷ ರೂ. ಮೊತ್ತದ ವಾಹನಗಳು, 4 ಲಕ್ಷ ರೂ. ಮೊತ್ತದ ಗೃಹ ಉಪಯೋಗಿ ವಸ್ತುಗಳು ಸೇರಿ 1 ಕೋಟಿ 38 ಲಕ್ಷ ರೂ. ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾಗಿದೆ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
….

ಲೋಕಾಯುಕ್ತ ದಾಳಿಗೆ ತುತ್ತಾದ ಅಧಿಕಾರಿಗಳು ಯಾರು

ಶೋಭಾ ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಬೆಂಗಳೂರು
ಡಾ.ಎಸ್.ಎನ್. ಉಮೇಶ್‌ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಚಿಕ್ಕಮಗಳೂರು ಜಿಲ್ಲೆ ಕಡೂರು
ರವೀಂದ್ರ ಇನ್ಸ್ಪೆಕ್ಟರ್ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗಬೀದರ್ ಜಿಲ್ಲೆ ಬಸವ ಕಲ್ಯಾಣ
ಪ್ರಕಾಶ್ ಶ್ರೀಧರ್ ಗಾಯಕ್ವಾಡ್ ತಹಶೀಲ್ದಾರ್ ಬೆಳಗಾವಿ ಜಿಲ್ಲೆ ಖಾನಾಪುರ

ಎಸ್.ರಾಜು ಪ್ರಾದೇಶಿಕ ಸಾರಿಗೆ ಅಧಿಕಾರಿ (ನಿವೃತ್ತ), ಪ್ರಾದೇಶಿಕ ಸಾರಿಗೆ ಇಲಾಖೆ ತುಮಕೂರು

ಹುಚ್ಚೇಶ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗದಗ.

ಆರ್.ಎಚ್.ಲೋಕೇಶ್ ಹಿಂದುಳಿದ ವರ್ಗಗಳ ಇಲಾಖೆ ಕಲ್ಯಾಣಾಧಿಕಾರಿಬಳ್ಳಾರಿ

ಹುಲಿರಾಜ ಗಿಲ್ಲೇಸುಗೂರು ಘಟಕದ ಕಿರಿಯ ಇಂಜಿನಿಯರ್‌ರಾಯಚೂರು

ಲೋಕೇಶ್ ಬಳ್ಳಾರಿ ತಾಲೂಕು ಬಿಸಿಎಂ ಅಧಿಕಾರಿಬಳ್ಳಾರಿ

Share.
Leave A Reply

Exit mobile version