ದಾವಣಗೆರೆ : ಮತದಾರರ ಪಟ್ಟಿ ತಯಾರಿಕೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಂಜುನಾಥ್ ಗುಂಡಾಳ್ ಕಚೇರಿಗೆ ಜಿಲ್ಲಾಧಿಕಾರಿ ಡಿ.ಸಿ.ವೆಂಕಟೇಶ್ ಭೇಟಿ ನೀಡಿ ಮತದಾರರ ಪಟ್ಟಿ ಗುಣಮಟ್ಟದ ಪರಿಶೀಲನೆ ನಡೆಸಿದರು.

ದಾವಣಗೆರೆ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಗುಂಡಾಳ್ ಏಜೆನ್ಸಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದರು‌. ಈ ಸಂದರ್ಭದಲ್ಲಿ ಎಫಿಕ್ ಕಾರ್ಡ್, ಮತದಾರನ ಎಫಿಕ್ ಕಾರ್ಡ್ ಬಗ್ಗೆ ಇರುವ ಭದ್ರತೆ, ಗುಣಮಟ್ಟ, ತಂತ್ರಜ್ಞಾನ ಅಳವಡಿಕೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಅಲ್ಲದೇ ಇದರ ಸಂಪೂರ್ಣ ವಿವರವನ್ನು ಜಿಲ್ಲಾಧಿಕಾರಿ ತಿಳಿದುಕೊಂಡರು.

ಗುಂಡಾಳ್ ಏಜೆನ್ಸಿ ಮಂಜುನಾಥ್ ಮಾತನಾಡಿ, ಜಿಲ್ಲಾಧಿಕಾರಿ ಭೇಟಿ ನೀಡಿ ಮತದಾರರ ಪಟ್ಟಿ ವೀಕ್ಷಣೆ ಮಾಡಿದ್ದಾರೆ. ಗುಣಮಟ್ಟ ವೀಕ್ಷಿಸಿದ್ದಾರೆ. ಮೊದಲಿನಿಂದಲೂ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಎಫಿಕ್ ಕಾರ್ಡ್ ಭದ್ರತೆ ಬಗ್ಗೆಯೂ ಹೆಚ್ಚು ಒತ್ತು ನೀಡಲಾಗಿದೆ. ಜಿಲ್ಲಾಧಿಕಾರಿಗಳು ಕೆಲ ಮಾರ್ಗದರ್ಶನ ಮಾಡಿದ್ದಾರೆ. ಆ ಸಲಹೆಯನ್ನು ಅಳವಡಿಸಿಕೊಳ್ಳುತ್ತೇವೆ ಅಂದ್ರು. ಒಟ್ಡಾರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಣಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಮತದಾರರ ಪಟ್ಟಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಡಿಸಿ ವೆಂಕಟೇಶ್ ರನ್ನು ಸನ್ಮಾನಿಸಲಾಯಿತು.

Share.
Leave A Reply

Exit mobile version