ದಾವಣಗೆರೆ : ಡೆಲ್ಲಿ ಬಾಯ್ಸ್ ವಿರುದ್ದ ಬಿಜೆಪಿ ನಾಯಕ ಜಗದೀಶ್ ಸಖತ್ ರಾಂಗ್ ಆಗಿ ಮಾತನಾಡಿದ್ದಾರೆ.
ಶನಿವಾರ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ನಿವಾಸದಲ್ಲಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಗೆಲ್ಲಬೇಕೆಂದು ರಾತ್ರಿ ಹಗಲು ಹೋರಾಡಿದ್ದಾರೆ. ಆದರೆ ಡೆಲ್ಲಿ ಬಾಯ್ಸ್ ಎಂದು ನಾಮಾಂಕಿತವಾದ ನಿಮ್ಮ ತಂಡ ಬೆನ್ನಿಗೆ ಚೂರಿ ಹಾಕಿದೆ.
ನಾವು ಇಷ್ಟು ದಿನ ಸುಮ್ಮನೆ ಇದ್ದೀವಿ, ಅದಕ್ಕೂ ಕಾರಣವಿದೆ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ, ಇನ್ನೂ ನಾವು ಸುಮ್ಮನೇ ಇರೋದಿಲ್ಲ. ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡೆಲ್ಲಿ ಬಾಯ್ಸ್ ನಾಯಕರಾದ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಸನ್ಮಾನ್ಯ ಎಸ್.ಎ.ರವೀಂದ್ರನಾಥ್ ನೇತೃತ್ವದಲ್ಲಿ ಕೆಲಸ ಮಾಡಿದ್ದೇವೆ ಅಂತಾರೆ. ಆದರೆ ರಾತ್ರೋ ರಾತ್ರಿ ನೀವು ಮತ್ತು ನಿಮ್ಮ ತಂಡ ಯಾರನ್ನು ಭೇಟಿ ಮಾಡಿದ್ದೀರಿ, ಯಾಕೆ ಎಂಬುದು ಎಲ್ಲ ಗೊತ್ತಿದೆ. ನೀವು ಪ್ರಾಮಾಣಿಕರಾದರೆ ಕಾಲ್ ಡೀಟೆಲ್ಸ್ ತೆಗೆಯಿರಿ, ಲೋಕೇಶನ್ ತೆಗೆಯಿರಿ, ನಮ್ಮ ತಂಡದ ಕಾಲ್ ಡೀಟೆಲ್ಸ್ ತೆಗೆಯಿರಿ ಗೊತ್ತಾಗುತ್ತದೆ ಅಂದ್ರು. ಈಗೇನಾದರೂ ಸತ್ಯಹರಿಶ್ಚಂದ್ರ ಇದ್ದಿದ್ದರೆ ಮೂರ್ಛೆ ಹೋಗುತ್ತಿದ್ದ ಎಂದರು.
ಸಿದ್ದೇಶ್ವರರ ತಪ್ಪಿನಿಂದ ಸೋತರು ಎಂದು ಹೇಳುವುದು ಶುದ್ಧ ಸುಳ್ಳು. ಅವರು ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿರುವ ಕಾರಣದಿಂದಲೇ ಉತ್ತರದಲ್ಲಿ 26 ಸಾವಿರ ಲೀಡ್ ಕೊಟ್ಟಿದ್ದೇವೇ. ಇದು ನಮ್ಮ ಕಾರ್ಯಕರ್ತರಿಂದ ಆಗಿರುವುದು ಎಂದರು.
ಈಗ ಬಿಜೆಪಿ ಕಾರ್ಯಕರ್ತರು ಜಾಗೃತರಾಗಿದ್ದಾರೆ. ತಾಂತ್ರಿಕ ವ್ಯವಸ್ಥೆಯಿಮನದ ಎಲ್ಲ ಗೊತ್ತಾಗುತ್ತದೆ. ಯಾರು ಏನು ಮಾಡುತ್ತಾರೆ, ಸುಳ್ಳು, ಕೆಟ್ಟದ್ದು, ಪಕ್ಷ ದ್ರೋಹ ಮಾಡುವವರು ಎಂಬುದು ಸುಲಭವಾಗಿ ಗೊತ್ತಾಗುತ್ತದೆ. ತಪ್ಪಿಗೆ ಸೂಕ್ತ ಬೆಲೆ ತೆರಬೇಕಾಗುತ್ತದೆ. ಸೋಲಿಗೆ ಕಾರ್ಯಕರ್ತರು ಹೊಣೆಗಾರರಲ್ಲ. ಮುಖಂಡರು ಪ್ರಾಮಾಣಿಕರವಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಚಿಹ್ನೆಯಡಿ ಗೆದ್ದು ಉನ್ನತ ಸ್ಥಾನ ಪಡೆದು ಮೋಸ ಮಾಡಿದವರೇ ಗಾಯಿತ್ರಿ ಸಿದ್ದೇಶ್ವರರ ಪರಾಜಯಕ್ಕೆ ಕಾರಣ ಎಂದು ಹೇಳಿದರು.
ಉತ್ತರದಲ್ಲಿ ಲೀಡ್ ಕೊಡೋದಕ್ಕೆ ಎಸ್ ಎಆರ್ ಕಾರಣ ಎಂಬುದಕ್ಕೆ ಜಗದೀಶ್ ಕೊಟ್ಟ ಉತ್ತರವೇನು?
ಮಾಜಿ ಶಾಸಕ ರೇಣುಕಾಚಾರ್ಯ ಉತ್ತರದಲ್ಲಿ ಲೀಡ್ ಕೊಡೋದಕ್ಕೆ ಎಸ್ ಎಆರ್, ಮುಖ್ಯಸಚೇತಕ ಕಾರಣ ಎಂಬುದು ಸುಳ್ಳು. ಇಲ್ಲಿ ಹೆಚ್ಚು ಮತಗಳನ್ನು ತಗೋಳೋದಕ್ಕೆ ಇಲ್ಲಿನ ಮತದಾರರು, ಪಕ್ಷದ ಜಿಲ್ಲಾ ಘಟಕ, ಮಹಾನಗರ ಪಾಲಿಕೆ ಸದಸ್ಯರು, ಮಾಜಿ ಸದಸ್ಯರು, ಮುಖಂಡರು ಕಾರಣ. ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ, ಬೂತ್ ಸಮಿತಿ, ಬೂತ್ ಅಧ್ಯಕ್ಷ, ಪೇಜ್ ಸಮಿತಿ ಇದೆ. ಪಕ್ಷದ ಚೌಕಟ್ಟಿನಲ್ಲಿ ಇವರೆಲ್ಲರ ಪರಿಶ್ರಮದಿಂದ ಮುನ್ನಡೆ ಆಗಿದೆ.
ರೇಣುಕಾಚಾರ್ಯ ಸಮೀಕ್ಷೆ ನಡೆಸಲಿ. ವಾರ್ಡ್, ಗ್ರಾಮೀಣ ಪ್ರದೇಶದಲ್ಲಿ ಹೋಗಿ ಸರ್ವೆ ಮಾಡಲಿ. ಯಾರು ಬಂದಿದ್ದರು, ಎಷ್ಟು ಬಾರಿ ಪ್ರಚಾರ ನಡೆಸಿದ್ದರು, ಯಾರಿಗೆ ಫೋನ್ ಮಾಡಿ ಹೇಳಿದರು. ಸಭೆ ನಡೆಸಿದರು. ಮತದಾನದ ಸಂದರ್ಭದಲ್ಲಿ ಯಾರ್ಯಾರು ಎಲ್ಲಿಗೆ ಹೋದರು ಎಂಬ ಮಾಹಿತಿ ಸಂಗ್ರಹಿಸಲಿ. ಆಮೇಲೆ ಮಾತನಾಡಲಿ ಎಂದು ಸವಾಲು ಹಾಕಿದರು.
ವಾಸ್ತವವನ್ನು ಜನರಿಗೆ ತಿಳಿಸಲಿ. ಪತ್ರಿಕಾಗೋಷ್ಠಿಯಲ್ಲಿ ಏನಾದರೂ ಹೇಳಿದರೆ ಕೇಳುತ್ತಾರೆ ಎಂಬ ಭ್ರಮೆಯಲ್ಲಿ ರೇಣುಕಾಚಾರ್ಯ ಇದ್ದಾರೆ. ನಾನು ತಾಳ್ಮೆಯಿಂದ ಇದ್ದೆವು. ಈಗ ಅದು ಮುಗಿದಿದೆ. ಸತ್ಯ ಜನರಿಗೆ ಗೊತ್ತಾಗಬೇಕು. ಕಾರ್ಯಕರ್ತರು ತಿಂಗಳುಗಟ್ಟಲೇ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿಯೂ, ಉತ್ತರ ಕ್ಷೇತ್ರದಲ್ಲಿ ನಾವೇ ಅಭ್ಯರ್ಥಿಗಳು ಎಂದುಕೊಂಡು ದುಡಿದಿದ್ದಾರೆ.ಗಾಯಿತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸಬೇಕು ಎಂಬ ಕಾರಣಕ್ಕೆ ಹಗಲಿರುಳು ದುಡಿದಿದ್ದಾರೆ.ದೆಹಲಿ ಬಾಯ್ಸ್, ಎಂದುಕೊಂಡವರು ಸೂಟ್ ಕೇಸ್ ತೆಗೆದುಕೊಂಡು ಹೋಗುವುದು, ಬರುವುದನ್ನು ನೋಡಿದರೆ ನಮಗೆ ನಾಚಿಕೆಯಾಗುತ್ತದೆ ಎಂದು ಕಿಡಿಕಾರಿದರು.
ನಾವೇ ಡೆಲ್ಲಿ ಬಾಯ್ಸ್ ಎಂದು ಅವರೇ ಬರೆದುಕೊಂಡಿದ್ದು. ನಾವು ಇಟ್ಟ ಹೆಸರಲ್ಲ. ಉತ್ತರ ವಿಧಾನಸಭಾ ಕ್ಷೇತ್ರ ಸಂಘಟಿತವಾಗಿದೆ. ಎಲ್ಲರ ಪರಿಶ್ರಮದಿಂದ ಮುನ್ನಡೆ ಬಂದಿದೆ. ಎಸ್. ಎ. ರವೀಂದ್ರನಾಥ್, ಶಿವಯೋಗಿ ಸ್ವಾಮಿ ಕಾರ್ಯವೈಖರಿ ಸರಿಯಿರಲಿಲ್ಲ. ಮೌಲ್ಯಾಧಾರಿತ, ಜನಸ್ನೇಹಿ ರಾಜಕಾರಣ, ಸಾರ್ವಜನಿಕ ಹಿತಾಸಕ್ತಿ ರಾಜಕಾರಣ ಕೇವಲ ಕಾರ್ಯಕರ್ತರಿಗಷ್ಟೇ ಎಂಬಂತಾಗಿದೆ.
ನಾಲ್ಕು ವರ್ಷ 11 ತಿಂಗಳು ಮಾತ್ರ ಕಾರ್ಯಕರ್ತರಿಗೆ ಬೋಧನೆ ಮಾಡುತ್ತಾರೆ. ಇನ್ನೊಂದು ತಿಂಗಳು ಅವರಿಗೆ ಬೇಕಾದ ಕ್ಯಾಂಡಿಡೇಟ್ ಹುಡುಕುತ್ತಾರೆ. ಆಮೇಲೆ ಇನ್ನೊಂದು ಮುಖ ತೋರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇನ್ನಾದರೂ ಪಕ್ಷದ ಏಳ್ಗೆಗಾಗಿ ದುಡಿಯಿರಿ ಎಂದು ಹೇಳಿದರು.