ರಾಜ್ಯದ ಜಲಾಶಯಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ನೀರು. ಕಳೆದ ವರ್ಷಕ್ಕಿಂತ 354 ಟಿಎಂಸಿ ಹೆಚ್ಚು ಸಂಗ್ರಹ
ಬೆಂಗಳೂರು.
ಈ ಬಾರಿ ರಾಜ್ಯದಲ್ಲಿ ಮಳೆ ಉತ್ತಮವಾಗಿದ್ದರಿಂದ ಪ್ರಮುಖ ಜಲಾಶಯಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.
ರಾಜ್ಯದ 14 ಜಲಾಶಯಗಳ ಒಟ್ಟು ನೀರಿನ ಸಂಗ್ರಹದ ಸಾಮರ್ಥ್ಯ 895.62 ಟಿಎಂಸಿ. ಹಾಲಿ 750.44 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 397.14 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿತ್ತು.
ವಿದ್ಯುತ್ ಉತ್ಪಾದನೆಯ ಜಲಾಶಯಗಳಲ್ಲಿ 270.72 ಟಿಎಂಸಿ ನೀರು ಸಂಗ್ರಹವಿದೆ. ಕಾವೇರಿ ಕಣಿವೆಯಲ್ಲಿ 94.63 ಟಿಎಂಸಿ ನೀರು ಸಂಗ್ರಹವಿದ್ದು, ಕೃಷ್ಣಾ ಕಣಿವೆಯಲ್ಲಿ 355.34 ಟಿಎಂಸಿ ನೀರು ಸಂಗ್ರಹವಿದೆ ವಾಣಿ ವಿಲಾಸ ಸಾಗರದಲ್ಲಿ 29.76 ಟಿಎಂಸಿ ನೀರು ಸಂಗ್ರಹವಿದೆ.
ಎಲ್ಲ ಜಲಾಶಯಗಳಿಗೆ 9056 ಕ್ಯೂಸೆಕ್ ನೀರಿನ ಒಳಹರಿವು ಇದ್ದು 38,748 ಕ್ಯೂಸೆಕ್ ಹೊರ ಹರಿವು ಇದೆ. ಕೆಲವು ಭಾಗದಲ್ಲಿ ಕುಡಿಯುವ ನೀರಿಗೆ, ವಿದ್ಯುತ್ ಉತ್ಪಾದನೆಗೆ ಹಾಗೂ ಅಲ್ಪ ಪ್ರಮಾಣದಲ್ಲಿ ಕೃಷಿ ಚಟುವಟಿಕೆಗೆ ಸಂಬAಧಿಸಿದAತೆ ಮಾತ್ರ ಈ ಪ್ರಮಾಣದ ನೀರನ್ನು ಬಳಕೆ ಮಾಡಲಾಗುತ್ತಿದೆ.
ಈ ಬಾರಿ ಮುಂಗಾರು ಹಾಗೂ ಹಿಂಗಾರು ಉತ್ತಮವಾಗಿದ್ದ ಕಾರಣ ಎಲ್ಲ ಜಲಾಶಯಗಳಲ್ಲೂ ನೀರಿನ ಸಂಗ್ರಹ ಹೆಚ್ಚಿದೆ. ಎಲ್ಲ ಜಲಾಶಯಗಳೂ ಕೂಡಾ ಭರ್ತಿಯಾಗಿವೆ. ಕ್ರಸ್ಟ್ ಗೇಟ್ ಹಾಳಾದರೂ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಹಲವು ವರ್ಷಗಳ ನಂತರ ಕೆಆರ್ಎಸ್ ಎರಡನೆ ಬಾರಿ ಪೂರ್ಣ ಪ್ರಮಾಣದಲ್ಲಿ ತುಂಬಿದೆ