ವಾಣಿಜ್ಯ ನಗರಿ ದಾವಣಗೆರೆಯಲ್ಲಿ ನಡೆಯುವ ಪ್ರತಿದಿನದ ಕಾರ್ಯಕ್ರಮಗಳ ವಿವರ. ದಾವಣಗೆರೆ ನಗರ ಹಾಗೂ ಹರಿಹರ, ಹೊನ್ನಾಳಿ, ನ್ಯಾಮತಿ, ಜಗಳೂರು, ಚನ್ನಗಿರಿ ತಾಲೂಕುಗಳಲ್ಲಿ ಪ್ರತಿನಿತ್ಯ ನಡೆಯುವ ಪ್ರತಿ ಕಾರ್ಯಕ್ರಮದ ಮಾಹಿತಿಯನ್ನು ದಾವಣಗೆರೆವಿಜಯ.ಕಾಂ ನೀಡಲಿದೆ. ನಿಮ್ಮ ಊರುಗಳಲ್ಲಿ ನಡೆಯುವ ಕಾರ್ಯಕ್ರಮದ ಮಾಹಿತಿಯನ್ನು ಮೂರು ದಿನಗಳ ಮುಂಚಿತವಾಗಿ ನೀಡಿದರೆ ದಾವಣಗೆರೆವಿಜಯ.ಕಾಂ ಉಚಿತವಾಗಿ ಪ್ರಕಟಿಸಲಿದೆ. ನಿಮ್ಮೂರಿನಲ್ಲಿ ನಡೆಯುವ ಕಾರ್ಯಕ್ರಮದ ಮಾಹಿತಿಯನ್ನು ನಮ್ಮ 9113614148 ಈ ನಂಬರ್‌ಗೆ ವಾಟ್ಸ್ಆಪ್ ಮಾಡಿ.

ಕುಲ ಶಾಸ್ತ್ರೀಯ ಅಧ್ಯಯನ ಕುರಿತು ಸಂವಾದ

ಚನ್ನಗಿರಿ : ಅಖಿಲ ಭಾರತ ವಿಶ್ವಕರ್ಮ ಪರಿಷತ್ತು. ಸಮಾಜದ ಮತ್ತು ಸಂಘ ಸಂಸ್ಥೆಗಳು, ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಡಿ.10 ರಂದು ಬೆಳಗ್ಗೆ 11 ಕ್ಕೆ ಚನ್ನಗಿರಿ ತಾಲ್ಲೂಕು ವಡ್ನಾಳು ಗ್ರಾಮದ ಕಾಶಿಮಠದಲ್ಲಿ ಕುಲಶಾಸ್ತ್ರಿಯ ಅಧ್ಯಯನ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀ ಶಂಕರಾತ್ಮನಂದ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಗರದಲ್ಲಿ ಇಂದು ನೂಪುರ ನೃತ್ಯೋತ್ಸವ

ದಾವಣಗೆರೆ: ನಗರದ ನೂಪುರ್ ಕಲಾ ಸಂಸ್ಥೆ, ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಿ.10 ರಂದು ಸಂಜೆ 6 ಕ್ಕೆ ನಗರದ ಸಿದ್ಧಗಂಗಾ ಶಾಲಾ ಆವರಣದಲ್ಲಿ ನೂಪುರ ನೃತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಸಂಸ್ಥಾಪಕ ನಿರ್ದೇಶಕರಾದ ಬೃಂದಾ ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಲೇಬೆನ್ನೂರಿನಲ್ಲಿ ಇಂದು ದೀಪೋತ್ಸವ, ಶಿವಾರಾಧನೆ

ಮಲೆಬೆನ್ನೂರು ; ಪಟ್ಟಣದ ಹೊರವಲಯದಲ್ಲಿರುವ ಶ್ರೀ ಭದ್ರಾಕಾಳಿ ಸಮೇತ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಸಂಜೆ 6-30 ಕ್ಕೆ ಕಡೇ ಕಾರ್ತಿಕೋತ್ಸವದ ಅಂಗವಾಗಿ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಬಿ. ಚಿದಾನಂದಪ್ಪ ತಿಳಿಸಿದ್ದಾರೆ.

ಪೋಲಿಸ್ ಕಾನ್ಸೆಟೇಬಲ್ ಹುದ್ದೆಗಳಿಗೆ  ಲಿಖಿತ ಪರೀಕ್ಷೆ

ದಾವಣಗೆರೆ: ಕಲ್ಯಾಣ ಕರ್ನಾಟಕ ಪ್ರದೇಶದ ಪೋಲಿಸ್ ಕಾನ್ಸ್‌ಟೇಬಲ್ ಹಾಗೂ ಸೇವಾ ನಿರತ ಮತ್ತು ಬ್ಯಾಕ್ ಲಾಗ್ 454 ಹುದ್ದೆಗಳಿಗೆ ಡಿ.10 ರ ಭಾನುವಾರ ಬೆಳಿಗ್ಗೆ 11 ರಿಂದ 12-30 ಗಂಟೆಗೆ ಲಿಖಿತ ಪರೀಕ್ಷೆ ನಡೆಯಲಿದೆ.ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಇಲಾಖಾ ವೆಬ್ಸೈಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಜಿಲ್ಲಾ ಪೋಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ನಗರದಲ್ಲಿ  ನಿವೇಶನ ವಸತಿ ರಹಿತ ಕಾರ್ಯಗಾರಕ್ಕೆ ಸತಿ ಸುಂದರೇಶ್ ಚಾಲನೆ

ದಾವಣಗೆರೆ: ನಿವೇಶನ ಮತ್ತು ವಸತಿ ರಹಿತ ಕಾರ್ಯಗಾರಕ್ಕೆ ಸಿಟಿಐ ರಾಜ್ಯ ಕಾರ್ಯದರ್ಶಿ ಕಾಂ ಸುಂದರೇಶ್ ಡಿ.10 ರಂದು ಬೆಳಿಗ್ಗೆ 11-30 ಕ್ಕೆ ಕಾಂ ಪಂಪಾಪತಿ ಭವನದಲ್ಲಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.

ಹರಿಹರದಲ್ಲಿ  ಆರೋಗ್ಯ ತಪಾಸಣಾ ಶಿಬಿರ

ಹರಿಹರ: ತಾಲ್ಲೂಕಿನ ಅಕ್ಷಯ ಆಸ್ಪತ್ರೆ ಆವರಣದಲ್ಲಿ ಡಿ.10 ರಂದು ಬೆಳಗ್ಗೆ 10 ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಕ್ಷಯ ಆಸ್ಪತ್ರೆ, ಐ- ದೃಷ್ಠಿ ಕಣ್ಣಿನ ಆಸ್ಪತ್ರೆ, ಬೇಬಿ ಸೈನ್ಸ್, ಎಸ್.ಎಸ್ ನಾರಾಯಣ ಹಾರ್ಟ್ ಆಸ್ಪತ್ರೆ ಸಹಯೋಗದಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಡಾ‌. ಬಿ.ಆರ್. ಅಂಬೇಡ್ಕರ್ 67 ನೇಮಹಾಪರಿ ನಿಬ್ಬಾಣ ದಿನದ ನಿಮಿತ್ತ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ವಿಚಾರ ಸಂಕೀರಣ, ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ.

ನಗರದಲ್ಲಿ ನಾಳೆ ಆರೋಗ್ಯ ತಪಾಸಣೆ

ದಾವಣಗೆರೆ: ನಗರದ ಶ್ರೀ ಭಗವಾನ್ ಮಹಾವೀರ್ ಜೈನ್ ಆಸ್ಪಿಟಲ್ ವತಿಯಿಂದ ಡಿ. 10 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಶ್ರೀ ಭಗವಾನ್ ಮಹಾವೀರ ಜೈನ್ ಆಸ್ಪತ್ರೆ ಯಲ್ಲಿ ನಡೆಯಲಿದೆ.ಹೆಚ್ಚಿನ ಮಾಹಿತಿಗೆ: 08192470872 ಗೆ ಸಂಪರ್ಕಿಸಿ.

ಲೇಬರ್ ಕಾಲೋನಿ ಯಲ್ಲಿ ಇಂದು ಅಯ್ಯಪ್ಪ ಸ್ವಾಮಿ ದೀಪೋತ್ಸವ

ದಾವಣಗೆರೆ: ದಾವಣಗೆರೆ ಲೇಬರ್ ಕಾಲೋನಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ದಲ್ಲಿ ಸ್ವಾಮಿ ಶಬರಿಮಲೈ ಸೇವಾ ಸಮಿತಿ ವತಿಯಿಂದ ಇಂದು ಮತ್ತು ನಾಳೆ ಶಬರಿಮಲೈ ಅಯ್ಯಪ್ಪ ಸ್ವಾಮಿಯ ಮಹಾ ರಥೋತ್ಸವ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ಬೆಳಿಗ್ಗೆ 5 ರಿಂದ 6-30 ವರೆಗೆ ಗಣಪತಿ ಹೋಮ, ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ 3 ಕ್ಕೆ ದೀಪೋತ್ಸವವಿದೆ.

24 ನೇ ಮಹಾ ಅಧಿವೇಶನ, ಪ್ರಚಾರಕ್ಕೆ ಚಾಲನೆ

ದಾವಣಗೆರೆ : 24ನೇ ಮಹಾ ಅಧಿವೇಶನ ಪ್ರಯುಕ್ತ ಪ್ರಚಾರಕ್ಕಾಗಿ ಜಿಲ್ಲೆಯಾದ್ಯಂತ ಪ್ರಚಾರ ವಾಹನಗಳಿಗೆ ಚಾಲನೆಯನ್ನು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪರವರು ನೀಡಲಿದ್ದಾರೆ.

ದಿನಾಂಕ : 10/12/2023

ಸ್ಥಳ. : MBA ಕಾಲೇಜ್

ಸಮಯ : ಮಧ್ಯಾಹ್ನ 1.30 ಗಂಟೆಗೆ

Share.
Leave A Reply

Exit mobile version