
ದಾವಣಗೆರೆ ; ವರ್ಷ ಪೂರ್ತಿ ಸದಾ ಒತ್ತಡದಿಂದಲೇ ಕೆಲಸ ಮಾಡುವ ಖಾಕಿ ಪಡೆ ಒಂದಿಷ್ಟು ಕಾಲ ಬಣ್ಣದಿಂದ ಮಿಂದೆದ್ದಿತ್ತು…ಇವರ ಜತೆ ಎಸ್ಪಿ ಉಮಾಪ್ರಶಾಂತ್ ಕೂಡ ತನ್ನ ಸಿಬ್ಬಂದಿ ಜತೆ ಹೆಜ್ಜೆ ಹಾಕಿ ತನ್ನ ಸಿಬ್ಬಂದಿಗಳನ್ನು ಖುಷಿಪಡಿಸಿದರು.
ಹೌದು..ದಾವಣಗೆರೆಯ ಸಶಸ್ತ್ರ ಮೀಸಲು ಪಡೆ ಮೈದಾನ ಕಲರ್ ಪುಲ್ ಆಗಿತ್ತು…ಪೊಲೀಸರು ತಮ್ಮ ಕುಟುಂಬ ಸ್ನೇಹಿತರೊಂದಿಗೆ ಬಣ್ಣದಾಟವಾಡಿ ಸಂತಸ ಹಂಚಿಕೊಂಡರು. ಅದರಲ್ಲೂ ಮಹಿಳಾ ಪೊಲೀಸರು ಬಣ್ಣದ ಹಾಡಿಗೆ ಸಖತ್ ಸ್ಟೇಪ್ ಹಾಕಿದರು
ಹೋಳಿ ಹುಣ್ಣಿಮೆ ರಂಗಿನಾಟದಲ್ಲಿ ಖಾಕಿ ತನ್ನದೇ ಆದ ಲೋಕವನ್ನು ಕೆಲ ಕಾಲ ಸೃಷ್ಟಿಸಿಕೊಂಡಿತ್ತು. ಮುಂಜಾನೆಯಿಂದ ಮಧ್ಯಾಹ್ನದವರೆಗೆ ಬಣ್ಣದ ಲೋಕದಲ್ಲಿ ಎಲ್ಲರೂ ಮಿಂದೆದ್ದರು.


ರಂಗು-ರಂಗಿನಾಟದಲ್ಲಿ ಯುವಕ-ಯುವತಿಯರು ಪರಸ್ಪರ ಬಣ್ಣ ಹಚ್ಚಿ ಶುಭಾಶಯಗಳನ್ನು ಕೋರುವುದರ ಮೂಲಕ ಅದ್ಧೂರಿಯಾಗಿ ಆಚರಿಸಿದರು. ಅಲ್ಲದೇ ಬಣ್ಣ ಹಚ್ಚಿ ‘ಹ್ಯಾಪಿ ಹೋಳಿ’ ಎನ್ನುತ್ತಾ ಶುಭಾಶಯಗಳನ್ನು ಹಂಚಿದರು. ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ಸೇರಿ ಓಕುಳಿಯಾಟದಲ್ಲಿ ಪಾಲ್ಗೊಂಡಿದ್ದು ಕಂಡು ಬಂತು.
ಯಾಕಾಗಿ ಹೋಳಿ ಹಬ್ಬ
ಹೋಳಿ ಹಬ್ಬ ಆಚರಣೆ ದಿವಸ ಇಡೀ ನಗರವನ್ನು ಪೊಲೀಸರು ಕಾದಿದ್ದರು. ಈ ಸಮಯದಲ್ಲಿ ಖಾಕಿ ಪಡೆ ಸೇರಿದಂತೆ ಕುಟುಂಬ ಹೋಳಿ ಹಬ್ಬದಿಂದ ದೂರ ಉಳಿದಿದ್ದರು. ಇದನ್ನ ಅರಿತ ಎಸ್ಪಿ ಉಮಾ ಪ್ರಶಾಂತ್ ಐಜಿಪಿ ರವಿಕಾಂತೇಗೌಡ ಸಲಹೆ ಪಡೆದು ಸಿಬ್ಬಂದಿಗಳಿಗೋಸ್ಕರ ಹೋಳಿ ಹಬ್ಬ ಆಚರಣೆಗೆ ಅನುಮತಿ ನೀಡಿದರು. ಈ ಸಮಯದಲ್ಲಿ ಸ್ವತಃ ಎಸ್ಪಿ ಉಮಾ ಪ್ರಶಾಂತ್ ಓಕುಳಿ ಆಟದಲ್ಲಿ ಭಾಗವಹಿಸಿ ಸಿಬ್ಬಂದಿಗೆ ಪ್ರೋತ್ಸಾಹ ನೀಡಿದರು. ಒಟ್ಟಿನಲ್ಲಿ ಸದಾ ಟೆನಿಷನ್ ನಲ್ಲಿದ್ದ ಖಾಕಿ ಒಂದಿಷ್ಟು ಎಂಜಾಯ್ ಮಾಡಿದ್ದು ವಿಶೇಷ.
.