![](https://davangerevijaya.com/wp-content/uploads/2024/07/IMG-20240719-WA01231.jpg)
ದಾವಣಗೆರೆ : ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 9ಕ್ಕೆ ಮತದಾನ ಆರಂಭವಾಗಿದ್ದು, 1 ಗಂಟೆಯೋಷ್ಟೊತ್ತಿಗೆ 526 ಮತಕ್ಕೆ 433 ಮತಗಳು ಚಲಾವಣೆಗೊಂಡಿದೆ. ಈ ಮೂಲಕ ಶೇ.82 ರಷ್ಟು ಜನರು ಮತ ಹಾಕಿದ್ದಾರೆ.
ದಾವಣಗೆರೆ ಎ ವರ್ಗದ ಭಾಗ 1 ರಲ್ಲಿ 24 ಮತಗಳಿದ್ದು, 24 ಜನರು ಮತ ಹಾಕಿದ್ದಾರೆ. ದಾವಣಗೆರೆ ಎ ವರ್ಗ ಭಾಗ ಎರಡರಲ್ಲಿ 22 ಮತಗಳಿದ್ದು, 20 ಮತಗಳು ಚಲಾವಣೆಗೊಂಡಿವೆ. ಹರಿಹರ ಎ ವರ್ಗದಲ್ಲಿ 29 ಮತಗಳಿದ್ದು, 29 ಮತಗಳು ಚಲಾವಣೆಗೊಂಡಿವೆ. ಚನ್ನಗಿರಿ ಎ ವರ್ಗದ 22 ಮತಗಳಿದ್ದು, 22 ಮತಗಳು ಚಲಾವಣೆಗೊಂಡಿವೆ. ಚನ್ನಗಿರಿ ಭಾಗ 2 ರಲ್ಲಿ 19 ಮತಗಳಿದ್ದು, 1 6 ಮತಗಳು ಚಲಾವಣೆಗೊಂಡಿದೆ. ಹೊನ್ನಾಳಿಯಲ್ಲಿ 22 ಮತಗಳಿದ್ದು, 21 ಮತಗಳು ಚಲಾವಣೆಗೊಂಡಿದೆ. ನ್ಯಾಮತಿ ಎ ವರ್ಗದಲ್ಲಿ 13 ಮತಗಳಿದ್ದು, 12 ಮತಗಳು ಚಲಾವಣೆಗೊಂಡಿವೆ. ದಾವಣಗೆರೆ ಸಿ ವರ್ಗದಲ್ಲಿ 43 ಮತಗಳಿದ್ದು, 36 ಮತಗಳು ಚಲಾವಣೆಗೊಂಡಿವೆ. ದಾವಣಗೆರೆ ಹಾಲು ಭಾಗ 1 ರಲ್ಲಿ 123 ಮತಗಳಿದ್ದು, 100 ಮತಗಳು ಚಲಾವಣೆಗೊಂಡಿವೆ. ದಾವಣಗೆರೆ ಭಾಗ 2 ರಲ್ಲಿ 110 ಮತಗಳಿದ್ದು, 90ಮತಗಳು ಚಲಾವಣೆಗೊಂಡಿವೆ. ದಾವಣಗೆರೆ ಇ ವರ್ಗದಲ್ಲಿ 109 ಮತಗಳಿದ್ದು 63 ಮತಗಳು ಚಲಾವಣೆಗೊಂಡಿವೆ. ಈ ಮೂಲಕ ಮತದಾನ ಚುರುಕುಗೊಂಡಿದೆ. ಕೆಲ ಕ್ಷೇತ್ರಗಳಲ್ಲಿ ಶೇ 100 ರಷ್ಟು ಮತದಾನವಾಗಿದೆ.
![](https://davangerevijaya.com/wp-content/uploads/2024/07/IMG-20240715-WA0352.jpg)
![](https://davangerevijaya.com/wp-content/uploads/2024/07/IMG-20240716-WA0138.jpg)