ದಾವಣಗೆರೆ: ಕೆಲ ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಹತ್ತಿಯನ್ನು ಹೆಚ್ಚಿಗೆ ಬೆಳೆಯಲಾಗುತ್ತಿದ್ದು, ಕಾಟನ್ ಸಿಟಿ ಎಂದು ಹೆಸರು ಪಡೆದಿತ್ತು. ಅದಾದ ನಂತರ ಭದ್ರೆ ಆಗಮನವಾಯಿತು. ಅಲ್ಲಿಂದ ಜನ ಪುಟ್ಟದಾಗಿ ಅಡಕೆ ಬೆಳೆದರು..ಈ ಸಮಯದಲ್ಲಿ ಆರಂಭವಾದದ್ದೇ ದಾಮ್ಕೋಸ್..
1992 ಕಾಲಘಟ್ಟದಲ್ಲಿ ಅಡಕೆಯನ್ನು ದಾವಣಗೆರೆಯಲ್ಲಿ ಸಣ್ಣ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಆದ್ದರಿಂದ ಅಡಕೆ ಬೆಳೆಗಾರರನ್ನು ಒಟ್ಟುಗೂಡಿಸಲು ಎಚ್.ಜಯಣ್ಣ, ಎಂ.ಎಸ್ ಬಸವರಾಜಪ್ಪ ಸಹಕಾರಿಗಳು ದಾವಣಗೆರೆ ಅಡಕೆ ಅಭಿವೃದ್ಧಿ ಪರಿಷ್ಕರಣಾ ಮಾರಾಟ ಸಂಘವನ್ನು ಆರಂಭಿಸಿದರು. ಇದಾದ ನಂತರ ದಾವಣಗೆರೆ ಒಂದೊಂದು ತಾಲೂಕಿಗೆ ಒಬ್ಬೊಬ್ಬ ನಿರ್ದೇಶಕರನ್ನು ಆಯ್ಕೆ ಮಾಡಲು ಒಂದು ಟಾಸ್ಕ್ ನೀಡಲಾಯಿತು. ಒಬ್ಬರು ನೂರು ಷೇರುದಾರರನ್ನು ಮಾಡಬೇಕಿತ್ತು..ಈ ಸಮಯದಲ್ಲಿ ದಾವಣಗೆರೆ ತಾಲೂಕಿನಿಂದ ಶಿವಕುಮಾರ್ ಐವತ್ತು ಷೇರುಗಳನ್ನು ಮಾಡಿ ನಿರ್ದೇಶಕರಾದರು. ಅಲ್ಲಿಂದ ಈಗಿನ ಅಧ್ಯಕ್ಷ ಶಿವಕುಮಾರ್ ಜರ್ನಿ ಆರಂಭವಾಗಿ ಮೂರು ಬಾರಿ ನಿರ್ದೇಶಕರಾದರು. ಕೆಲ ದಿವಸ ಕಡಿಮೆ ಅವಧಿಯಲ್ಲಿ ಅಧ್ಯಕ್ಷರಾದರು.
ಸ್ವಂತ ಕಟ್ಟಡಕ್ಕೆ ಗುದ್ದಲಿ ಪೂಜೆ :
ದಾವಣಗೆರೆ ಹಳೆ ಬಾತಿ ಗ್ರಾಮದ ಶಿವಕುಮಾರ್ ಓದಿದ್ದು 12 ನೇ ತರಗತಿ. ಅಧ್ಯಕ್ಷರಾದರೂ ಶ್ರೀ ಸಾಮಾನ್ಯನಂತೆ ಇರುವ ಶಿವಕುಮಾರ್ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಇವರು ಅಧಿಕಾರವಧಿಯಲ್ಲಿ ಎಪಿಎಂಸಿಯಲ್ಲಿ ಆರಂಭವಾಗಿರುವ ದಾಮ್ಕೋಸ್ ಕಟ್ಟಡ ಕೈ ಬಿಟ್ಟು ಹೋಗುವ ಸಂದರ್ಭದಲ್ಲಿ ಕಾರ್ಯದರ್ಶಿ, ನಿರ್ದೇಶಕ, ಮಾಜಿ ಶಾಸಕ ಎಸ್.ಎ.ರವೀಂದ್ರನಾಥ್ ನೇತೃತ್ವದಲ್ಲಿ ದಾಮ್ಕೋಸ್ ಕಟ್ಟಡವನ್ನು ತಮ್ಮ ಸುಪರ್ದಿಗೆ ತಂದರು. ಬಳಿಕ
ಸ್ವಂತ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಅಲ್ಲಿಂದ ಬೇರೆ ಅಧ್ಯಕ್ಷರು ದೊಡ್ಡ ಕಟ್ಟಡ ನಿರ್ಮಾಣ ಮಾಡಿದರು.
30 ಲಕ್ಷ ಲಾಭ
ಸದ್ಯ ದಾಮ್ಕೋಸ್ ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಸಂಸ್ಥೆ ಲಾಭದಲ್ಲಿ ನಡೆಯುತ್ತಿದ್ದು, 15 ಲಕ್ಷ ಲಾಭದಿಂದ 30 ಲಕ್ಷಕ್ಕೆ ಬಂದಿದೆ. ಅಡಕೆ ಬೆಳೆಗಾರರ ಸಂಖ್ಯೆ 1350ಕ್ಕೆ ಏರಿದೆ
ಷೇರುದಾರರಿಗೆ ವಾರ್ಷಿಕ ಶೇ 12ರಿಂದ 16ರಷ್ಟು ಡಿವಿಡೆಂಟ್ ನೀಡಲಾಗುತ್ತಿದೆ. ಸದ್ಯ ₹ 30 ಲಕ್ಷ ಲಾಭದಲ್ಲಿದೆ’ ಎಂದು ಶಿವಕುಮಾರ್ ಹೇಳಿದ್ದಾರೆ.
ಕೃಷಿ ಯಂತ್ರ ಮೇಳ
‘ಸೆ.18ರಂದು ಕೃಷಿ ಯಂತ್ರ ಮೇಳವನ್ನು ಆಯೋಜಿಸಲಾಗಿದೆ. ಬೆಳಗ್ಗೆ 10.30ಕ್ಕೆ ದಾಮ್ಕೋಸ್ ನಿರ್ದೇಶಕ ಎಚ್.ಜಿ.ಮರುಳಸಿದ್ಧಪ್ಪ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಅಡಕೆ ಸುಲಿಯುವ, ಸ್ವಚ್ಛಗೊಳಿಸುವ ಹಾಗೂ ಒಣಗಿಸುವ ಯಂತ್ರಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ’
ಸಿರಿಗೆರೆ ಶ್ರೀಗಳು ಉದ್ಘಾಟನೆ
‘ಸಿರಿಗೆರೆಯ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸೆ.19ರಂದು ಬೆಳಿಗ್ಗೆ 11ಕ್ಕೆ ರಜತ ಮಹೋತ್ಸವ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಶಾಮನೂರು ಶಿವಶಂಕರಪ್ಪ, ಕೆ.ಎಸ್.ಬಸವಂತಪ್ಪ, ಆರಗ ಜ್ಞಾನೇಂದ್ರ , ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಪಾಲ್ಗೊಳ್ಳಲಿದ್ದಾರೆ. ಸೆ.20ರಂದು ಅಡಿಕೆ ಕೃಷಿ ಹಾಗೂ ಉದ್ಯಮದ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ’.
ಸೆ.18 ರಿಂದ ಸೆ.20 ಕ್ಕೆ ರಜತ ಮಹೋತ್ಸವ
ದಾವಣಗೆರೆ ಅಡಿಕೆ ಅಭಿವೃದ್ಧಿ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘದ (ದಾಮ್ಕೋಸ್) ರಜತ ಮಹೋತ್ಸವವನ್ನು ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಸೆ.18ರಿಂದ 20 ರವರೆಗೆ ಹಮ್ಮಿಕೊಳ್ಳಲಾಗಿದೆ.
ದಾಮ್ಕೋಸ್ ಗೆ ಅಡಕೆ ನೀಡಿ ಬೆಳೆಸಲು ಶಿವಕುಮಾರ್ ಮನವಿ
ಕ್ಯಾಂಪ್ಕೊ ಸಹಭಾಗಿತ್ವದಲ್ಲಿರೈತರಿಂದ ನೇರವಾಗಿ ಅಡಿಕೆ ಖರೀದಿಗೆ 2006ರಲ್ಲಿ ಕೇಂದ್ರ ಆರಂಭಿಸಲಾಯಿತು. 9,000 ಕ್ವಿಂಟಲ್ ಅಡಿಕೆಯನ್ನು ಖರೀದಿ ಮಾಡಲಾಗುತ್ತಿದೆ. ಸಂಘದ ಎಲ್ಲ ಸದಸ್ಯರು ಅಡಿಕೆ ನೀಡುವ ಮೂಲಕ ಸಹಕಾರ ನೀಡಿದರೆ ಬಂಡವಾಳ ಇನ್ನಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ಶಿವಕುಮಾರ್.
ಸಂಸ್ಥೆಗೆ ಶ್ರಮಿಸುತ್ತಿರುವರು
ದಾಮ್ಕೋಸ್’ ಉಪಾಧ್ಯಕ್ಷ ಎಚ್.ಜಿ.ಮಲ್ಲಿಕಾರ್ಜುನ್, ನಿರ್ದೇಶಕರಾದ ಬಿ. ಬಸವರಾಜಯ್ಯ, ಎಚ್. ಜಿ.ಮರುಳಸಿದ್ದಪ್ಪ, ಎಂ.ಆರ್. ಮಂಜುನಾಥಯ್ಯ, ಕೆ.ಜಿ. ಉಮೇಶ್, ಜಿ.ಸಿ. ವಾಮದೇವಪ್ಪ ಸಂಸ್ಥೆ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದಾರೆ.
ವಾರ್ಷಿಕ 30 ಕೋಟಿ ರೂ. ಅಡಕೆ ವಹಿವಾಟು
ವಾರ್ಷಿಕ 30 ಕೋಟಿ ರೂ. ಅಡಕೆ ವಹಿವಾಟು ಇರುವ ದಾಮ್ಕೋಸ್ನಲ್ಲಿ 9 ಸಾವಿರ ಕ್ವಿಂ. ವರೆಗೆ ಅಡಕೆ ಖರೀದಿ ಆಗುತ್ತಿದೆ. ಎಲ್ಲ ಸದಸ್ಯರು ನಿಯಮಿತವಾಗಿ ಸಂಸ್ಥೆಗೆ ಅಡಕೆ ಮಾರುತ್ತಿಲ್ಲ. ಹೀಗಾಗಿ ಸಂಸ್ಥೆ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಮುಂದಿನ ದಿನದಲ್ಲಿ ಸಂಘದ ಬೆಳವಣಿಗೆಗೆ ಸದಸ್ಯರು ಸಹಕರಿಸಬೇಕೆಂದು ಶಿವಕುಮಾರ್ ಮನವಿ ಮಾಡಿದ್ದಾರೆ.
ಶೇ.60ರಷ್ಟು ಸಾಲ ಸೌಲಭ್ಯ
ಷೇರು ಮೊತ್ತವನ್ನು 5 ಸಾವಿರ ರೂ.ಗೆ ವಿಸ್ತರಣೆ ಮಾಡಲಾಗಿದೆ. ಷೇರುದಾರರಿಗೆ ವಾರ್ಷಿಕ ಕನಿಷ್ಠ 12ರಿಂದ 16ರಷ್ಟು ಡೆವಿಡೆಂಡ್ ನೀಡಲಾಗುತ್ತಿದೆ. ಶೇ.12ರ ಬಡ್ಡಿದರದಲ್ಲಿ ಶೇ.60ರಷ್ಟು ಸಾಲ ಸೌಲಭ್ಯ ನೀಡಲಾಗುತ್ತಿದೆ. ಸಂಘವು ಸದ್ಯಕ್ಕೆ 30 ಲಕ್ಷ ರೂ. ಲಾಭದಲ್ಲಿದೆ.
ಸ್ವಂತ ಕಟ್ಟಡ
ದಾಮ್ಕೋಸ್ ಸಂಘವು ಸ್ವಂತ ಕಟ್ಟಡ ಹೊಂದಿದೆ. 2006ರಲ್ಲಿ ಕ್ಯಾಂಪ್ರೊ ಸಹಭಾಗಿತ್ವದಲ್ಲಿ ರೈತರಿಂದ ನೇರ ಅಡಕೆ ಖರೀದಿಗೆ ಕೇಂದ್ರ ಆರಂಭಿಸಲಾಗಿದೆ. ಈಗಿರುವ ತಾಲೂಕು ಕಚೇರಿ ಬಳಿ 6200 ಚದರಡಿ ವಿಸ್ತೀರ್ಣದ ಜಾಗದಲ್ಲಿ ಅಡಕೆ ಬೆಳೆಗಾರರಿಗೆ ಸಕಲ ಮಾಹಿತಿ ನೀಡುವ ಕೇಂದ್ರ ಆರಂಭಿಸುವ ಚಿಂತನೆ ಇದೆ.
2000 ಇಸವಿಯಲ್ಲಿ ಸಂಘ ಚಾಲನೆ
ದಾವಣಗೆರೆ ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ 2000ರ
ಜ. 10ರಂದು ಸಂಘ ಚಾಲನೆಗೊಂಡಿತ್ತು. ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಂದಿನ ಶಾಸಕ ಎಸ್.ಎ.ರವೀಂದ್ರನಾಥ್ ಅಧ್ಯಕ್ಷತೆಯಲ್ಲಿ, ಆಗಿನ ಯುವಜನ ಮತ್ತು ಕ್ರೀಡಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಉದ್ಘಾಟಿಸಿದ್ದರು.
ಸದ್ಯ ಸಂಘವು ರಜತ ವರ್ಷಗಳನ್ನು ಪೂರೈಸಿದೆ
ಮುಂದಿನ ಗುರಿ ಏನು
ದಾವಣಗೆರೆ ತಾಲೂಕಿನಲ್ಲಿರುವ ಎಲ್ಲ 15 ಸಾವಿರ ಅಡಕೆ ಬೆಳೆಗಾರರನ್ನೂ ನೋಂದಣಿ ಮಾಡಿಸುವುದು ಹಾಗೂ ಈಗಿರುವ 45 ಲಕ್ಷ ರೂ.ಗಳ ಷೇರು ಬಂಡವಾಳ ಮೊತ್ತವನ್ನು 10 ಕೋಟಿ ರೂ.ಗೆ ಏರಿಸುವ ಗುರಿಯೊಂದಿಗೆ ಭವಿಷ್ಯದಲ್ಲಿ ತುಮ್ಕೋಸ್ ಮಟ್ಟಕ್ಕೆ ಬೆಳೆಸುವ ಇರಾದೆ ಇದೆ.
9 ಸಾವಿರ ಅಡಕೆ ಖರೀದಿ
ವಾರ್ಷಿಕ 30 ಕೋಟಿ ರೂ. ಅಡಕೆ ವಹಿವಾಟಿರುವ ದಾಮ್ಕೋಸ್ನಲ್ಲಿ 9 ಸಾವಿರ ಕ್ವಿಂ. ವರೆಗೆ ಅಡಕೆ ಖರೀದಿ ಆಗುತ್ತಿದೆ. ಎಲ್ಲ ಸದಸ್ಯರು ನಿಯಮಿತವಾಗಿ ಸಂಸ್ಥೆಗೆ ಅಡಕೆ ಮಾರಿದರೆ ಈ ವಹಿವಾಟು ಇನ್ನಷ್ಟು ಹೆಚ್ಚುತ್ತದೆ.