ಬೆಂಗಳೂರು:  ಪ್ರದೇಶ ಕಾಂಗ್ರೆಸ್ ಸೇವಾದಳ ರಾಷ್ಟೀಯ ಕಾಂಗ್ರೆಸ್ ನ ಒಂದು ಭಾಗವಾಗಿ ಮಾತ್ರವಲ್ಲದೆ, ಗಾಂಧೀಜಿ ತತ್ವಗಳು ಶಾಂತಿಯ ಸಂದೇಶಗಳು ಹಾಗೂ ಸೈದ್ಧಾಂತಿಕ ಚಿಂತನೆಗಳನ್ನು ಒಳಗೊಂಡು ದೇಶಾದ್ಯಾಂತ ಸ್ವಯಂ ಸೇವಕ ಸಂಸ್ಥೆಯಾಗಿ ಸೇವೆ ಸಲ್ಲಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್ ಮೆಹರೋಜ್ ಖಾನ್ ರವರು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾನಿಲಯದ ಎನ್ ಎಸ್ ಎಸ್ ಭವನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಯಂಗ್ ಬ್ರಿಗೇಡ್ ಅಯೋಜಿಸಿದ್ದ ರಾಜ್ಯಮಟ್ಟದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಹಾರಾಷ್ಟ್ರದ ನಾಗ್ಪುರದಲ್ಲಿ ಬ್ರಿಟಿಷರ ವಿರುದ್ಧ ಬೃಹತ್ ಸತ್ಯಾಗ್ರಹ ನಡೆಯುವ ಸಂದರ್ಭದಲ್ಲಿ 1923ರ ಡಿಸೆಂಬರ್ 28 ರಂದು ಡಾ. ನಾರಾಯಣ ಸುಬ್ಬುರಾವ್ ಹರ್ಡಿಕರ್ ರವರು ಕಾಂಗ್ರೆಸ್ ಸೇವಾದಾಳ ವನ್ನು ಸ್ಥಾಪಿಸಿದರು. 

ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದ್ದ ಹೋರಾಟಗಾರರನ್ನು ಜೈಲಿಗೆ ಹಾಕಿ ಬ್ರಿಟಿಷರು ಚಿತ್ರಹಿಂಸೆ, ಕಿರುಕುಳ ನೀಡುತ್ತಿದ್ದರು, ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಿದ್ದ ವೇಳೆ ಕಾಂಗ್ರೆಸ್ ಸೇವಾದಳದ ಪಾತ್ರ ಕೂಡ ಮಹತ್ವದ್ದಾಗಿದೆ ಎಂದು ತಿಳಿಸಿದರು. ಇಂದು ದೇಶಾದ್ಯಂತ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸ್ವಯಂ ಸೇವಕರಾಗಿಯೂ ದೇಶ ಸೇವೆ ಮಾಡುತ್ತಿದ್ದಾರೆ ಎಂದು ಎಸ್ ಆರ್ ಮೆಹರೋಜ್ ಖಾನ್ ರವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಕಾಂಗ್ರೆಸ್ ಮಹಾನ್ ನಾಯಕರ ಪಾತ್ರವಿದೆ, ಕಾಂಗ್ರೆಸ್ ಪಕ್ಷ ಅಂದಿನಿಂದ ಇಂದಿನವರೆಗೂ ದೇಶ ಕಟ್ಟುವ ಹಾಗೂ ಅಭಿವೃದ್ಧಿ ಮಾಡುವ ಚಿಂತನೆಗಳನ್ನು ಒಳಗೊಂಡಿದೆ ಎಂದರು, ಅಂಥ ದೇಶದ ಮಹಾನ್ ಹೋರಾಟಗಾರು, ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡು ಕೆಲಸ ಮಾಡಬೇಕಿದೆ ಎಂದು ಅವರು ತಿಳಿಸಿದರು.

ಈ ಶಿಬಿರ ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯಲಿದ್ದು ದೇಶಕ್ಕಾಗಿ ಹೋರಾಟ ಮಾಡಿದವರು ಹಾಗೂ ಉತ್ತಮ ವಿಚಾರಗಳನ್ನು ತಿಳಿಸಿಕೊಡುವ ಮೂಲಕ ಶಿಬಿರ ಯಶಸ್ವಿಯಾಗಲಿ ಎಂದು ಇದೇವೇಳೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಯ ಸಿಂಡಿಕೇಟ್ ಸದಸ್ಯರಾದ ಡಾ. ಶ್ರೀನಿವಾಸ್ ವೇಲು ರವರು, ಈದಿನ. ಕಾಮ್ ಡಿಜಿಟಲ್ ಮಾಧ್ಯಮದ ಸಂಪಾದಕೀಯ ವಿಭಾಗದ ಮುಖ್ಯಸ್ಥರಾದ
ಡಾ. ವಾಸು ರವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಯಂಗ್ ಬ್ರಿಗೇಡ್ ನ ಜುನೈದ್ ಪಿ.ಕೆ ರವರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Share.
Leave A Reply

Exit mobile version