ದಾವಣಗೆರೆ : ಕಾಂಗ್ರೆಸ್ ಒಡೆದ ಮನೆಯಂತಾಗಿದೆ.ಸಿದ್ದರಾಮಯ್ಯ ಮತ್ತು ಡಿಕೆಶಿ ಬಿಟ್ಟು ಉಳಿದ 30 ಸಚಿವರನ್ನು ಡಿಸಿಎಂ ಮಾಡಿ ಹಾಗೂ ಉಳಿದ ಶಾಸಕರನ್ನು ಸಚಿವರನ್ನಾಗಿ ಮಾಡಿ ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ಟಿ ಭರವಸೆಗಳೆಲ್ಲಾ ಬೋಗಸ್ ಆಗಿವೆ. ಗ್ಯಾರಂಟಿ ಯೋಜನೆಗಳಿಗಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕ ಮಾಡಿದ್ದಾರೆ. ಇನ್ನು ಕ್ಯಾಬಿನೆಟ್ ದರ್ಜೆಯ ಅಧ್ಯಕ್ಷನಿಗೆ ಸ್ಟೇಟ್ ದರ್ಜೆ ಸ್ಥಾನಮಾನ ಉಪಾಧ್ಯಕ್ಷನಿಗೆ ನೀಡಿದ್ದಾರೆ ಅವರಿಗೆ ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ಕಚೇರಿ, ಕಾರು ಭತ್ಯೆ ಕೊಡಲು ಮುಂದಾಗಿದ್ದಾರೆ
ಇದಕ್ಕೆ ನಿಮ್ಮ ಮನೆ ದುಡ್ಡು ಕೊಡ್ತಾ ಇಲ್ಲ, ಜನರ ತೆರಿಗೆ ದುಡ್ಡು ಕೊಡ್ತಾ ಇರೋದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನು ಕೊಟ್ಟಿದ್ದೆ ಆದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ರಾಜ್ಯವನ್ನು ಪುನರ್ವಸತಿ ಮತ್ತು ಗಂಜಿ ಕೇಂದ್ರ ಮಾಡೋಕೆ ಹೋಗ್ತಾ ಇದ್ದಿರಾ ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.

ಸಿದ್ದರಾಮಯ್ಯನವರೇ ನೀವು ಸಿಎಂ, ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇಲ್ವಾ…..?..ನಿಮಗೆ ಶಾಸಕರು ಮತ್ತು ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲಾ ಅಂದರೆ ಯಾರನ್ನು ನಂಬುತ್ತೀರಾ….?ನಿಮ್ಮ ಐದು ಗ್ಯಾರಂಟಿ ಯೋಜನೆಗಳು ಪ್ಲಾಪ್ ಆಗಿದ್ದಾವೆ ಎಂದರು.

ಐದು ಗ್ಯಾರಂಟಿ ಜಾರಿಗೆ ವಿರೋಧ

ಐದು ಗ್ಯಾರಂಟಿಗಳಿಗಾಗಿ ವಿಚಾರ ಸಮಿತಿ ರಚನೆಗೆ ಮುಂದಾದ ಕಾಂಗ್ರೆಸ್ ವಿರುದ್ಧ ರೇಣುಕಾಚಾರ್ಯ ಗರಂ ಆದರು ಹಾಗೂ ತಮ್ಮಆಕ್ರೋಶ ಹೊರಹಾಕಿದರು.

ದಾವಣಗೆರೆ ಜಿಲ್ಲೆಯವರಿಗೆ ಎಂಪಿ ಟಿಕೆಟ್ ನೀಡಿ

ದಾವಣಗೆರೆಯಿಂದ ಲೋಕಸಭಾ ಟಿಕೆಟ್ ಸ್ಥಳೀಯರಿಗೆ ನೀಡುವಂತೆ ಮಾಜಿ ಶಾಸಕ ರೇಣುಕಾಚಾರ್ಯ ಒತ್ತಾಯಿಸಿದರು.ಜಿಲ್ಲೆಯ ಕಾರ್ಯಕರ್ತರು ಮತ್ತು ಮತದಾರರ ಅಪೇಕ್ಷೆ ಕೂಡ ಇದೆ ಆಗಿದೆ. ಸಮೀಕ್ಷೆ ಮಾಡಿಸಿ ಅದರಲ್ಲಿ ಯಾರ ಹೆಸರು ಬರುತ್ತೆ ಅವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಈ ಕುರಿತು ಹೈಕಮಾಂಡ್ ಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ ಎಂದರು. ಜಿ.ಎಂ ಸಿದ್ಧೇಶ್ವರ ನಾಲ್ಕು ಬಾರಿ ಸಂಸದರಾಗಿ ಆಯ್ಕೆ ಆಗಿದ್ದಾರೆ, ಈ ಬಾರಿ ದಾವಣಗೆರೆ ಜಿಲ್ಲೆಯವರಿಗೆ ಆಗಲಿ ಅನ್ನೋದು ನಮ್ಮ ವಿನಂತಿ ಎಂದರು.

ಹೆಗಡೆ ಹೇಳಿಕೆ ಒಪ್ಪೋದಿಲ್ಲ

ಅನಂತ್ ಕುಮಾರ್ ಹೆಗಡೆ ಹೇಳಿಕೆ ಯಾರು ಒಪ್ಪಲು ಸಾಧ್ಯವಿಲ್ಲ ಅವರು ಈ‌ಹಿಂದೆ ನಾವು ಬಂದಿದ್ದು ಸಂವಿಧಾನ ಬದಲಿಸಲು ಅಂದಿದ್ದರು. ಮೋದಿ ಸಬಕಾ ಸಾಥ್ ಸಬಕಾ ವಿಕಾಸ ಅನ್ನೊ ಸಿದ್ದಾಂತದ ಮೇಲೆ ಬಂದಿದ್ದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.ಸಿದ್ದರಾಮಯ್ಯ ರಾಜ್ಯದ  ಮುಖ್ಯಮಂತ್ರಿಯೇ…!ರಾಜಕೀಯ ವಿರೋಧ ಮಾಡಲಿ, ಏಕವಚನದಿಂದ ಅಗೌರವದಿಂದ ಮಾತನಾಡಬಾರದು. ಅನಂತ್ ಕುಮಾರ್ ಹೆಗಡೆ ಹೇಳಿಕೆ ಎಲ್ಲರೂ ಸರ್ವಸಮ್ಮತವಾಗಿ ಖಂಡಿಸುತ್ತೇವೆ ಎಂದರು.

ಹೆಗಡೆ ಮಾತನಾಡುವ ಭರದಲ್ಲಿ ಸಿದ್ದುಗೆ ಏಕವಚನದಿಂದ ಮಾತನಾಡಿದ್ದು ತಪ್ಪು, ಆಗಂತ ಸಿದ್ದರಾಮಯ್ಯ ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ಮಾತನಾಡಿದ್ದು ತಪ್ಪೆ ಎಂದರು.

ಹರಿಹರ ಮಾಜಿ ಶಾಸಕ ಎಸ್ ರಾಮಪ್ಪ ಹೇಳಿಕೆ ವಿಚಾರ‌  ಕುರಿತು‌ ಮಾತನಾಡಿದ ಎಂಪಿಆರ್ ನಾನು ಟಿಕೆ ಮಾಡಲು ಸಿದ್ಧನಿಲ್ಲ.ಟೀಕೆ ಟಿಪ್ಪಣಿಗಳು ಪರಿಶುದ್ಧವಾಗಿರಬೇಕು, ಹೊಲಸು ಮಾತು ಬರಬಾರದು. ನಮ್ಮ ಪಕ್ಷ ನಮಗೆ ಸಂಸ್ಕ್ರತಿ ಸಂಸ್ಕಾರ ಕೊಟ್ಟಿದೆ. ಹಾಗಾಗಿ ನಾವು ಸಂಸ್ಕ್ರತಿ ಅಡಿಯಲ್ಲಿ ಮಾತನಾಡಬೇಕು ಎಂದು‌ ತಿಳಿ ಹೇಳಿದರು.

ಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕು ಎಂದು ಭಾರತ ಸೇರಿದಂತೆ ವಿಶ್ವವೇ ಬಯಸಿದೆ.ಆ ನಿಟ್ಟಿನಲ್ಲಿ ರಾಜ್ಯದಿಂದ 28 ಸದಸ್ಯರನ್ನು ಗಿಫ್ಟ್ ಆಗಿ ಕೊಡಲು ಬಿಎಸ್ವೈ ಮತ್ತು ಬಿವೈವಿ ನಿರ್ಧಾರ ಮಾಡಿದ್ದಾರೆದಾವಣಗೆರೆಯಿಂದ ನಾವು ಸಹ ಬಿಜೆಪಿ ಸಂಸದನ್ನು ಆಯ್ಕೆ ಮಾಡುತ್ತೇವೆ ಖಾಲಿ ಪಿಲಿ 28 ಪಕ್ಷಗಳು ಸೇರಿಕೊಂಡು ಮಾಡಿರುವ I. N.D.I.A ಅವರ್ಯಾರೂ ಯಶಸ್ವಿ ಆಗಲ್ಲಾ ಎಂದರು.

Share.
Leave A Reply

Exit mobile version