ಚನ್ನಗಿರಿ:  ಮಾವಿನಕಟ್ಟೆ ಶಾಂತಿಸಾಗರ ವಲಯ ಅರಣ್ಯ ವ್ಯಾಪ್ತಿಗೆ ಸೇರಿದ್ದ ಚನ್ನಗಿರಿ ತಾಲೂಕಿನ ಸುಣಿಗೆರೆ ಗ್ರಾಮದ ಸರ್ವೇ ನಂ 58 ಮತ್ತು 59 ರಲ್ಲಿ ಅರಣ್ಯ ಇಲಾಖೆಗೆ ಸೇರಿದ್ದ ಸ್ಥಳದಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದ  ಜಾಗವನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ.

ಸುಮಾರು 20 ಜನರು 60 ಎಕರೆ ಪ್ರದೇಶದಲ್ಲಿ ಜಮೀನು ಮತ್ತು ತೋಟಗಳನ್ನು ಮಾಡಿಕೊಂಡಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರತ್ನಪ್ರಭ ನೇತ್ರತ್ವದಲ್ಲಿ  ಮಾವಿನಕಟ್ಟೆ ವಲಯಾರಣ್ಯಾಧಿಕಾರಿ ಜಗದೀಶ್ ಮತ್ತು ಚನ್ನಗಿರಿ ವಲಯಾರಣ್ಯಾಧಿಕಾರಿ ಮಧುಸೂಧನ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು, ಪೋಲಿಸ್‌ಇಲಾಖೆ ಮತ್ತು  ಕಂದಾಯ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ  ಅರಣ್ಯ ಇಲಾಖೆಯ ಸ್ಥಳವನ್ನು ವಶಕ್ಕೆ ಪಡೆಯಲಾಯಿತು. ಬಳಿಕ 4 ಅಡಿಗಳ ಟ್ರಂಚನ್ನು ಹಾಕುವ ಮೂಲಕ ಅರಣ್ಯ ಇಲಾಖೆ ಜಾಗವನ್ನು ವಶಕ್ಕೆ ಪಡೆದಿದೆ. 

ಕಂದಾಯ ಇಲಾಖೆಗೆ ಸೇರಿದ್ದ ಈ ಸ್ಥಳವು 1984 ರಲ್ಲಿ ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿತ್ತು. ರೈತರು ಸುಮಾರು 20 ವರ್ಷಗಳಿಂದ ಅರಣ್ಯ ಇಲಾಖೆ ಸೇರಿದ್ದ  ಸ್ಥಳವನ್ನು ಜಮೀನು ಮತ್ತು ತೋಟಗಳಾಗಿ ಮಾರ್ಪಾಡುಗೊಳಿಸಿದ್ದರು. 

ಸುಣಿಗೆರೆ ಗ್ರಾಮಸ್ಥರು ಸಾಕಷ್ಟು  ಪ್ರತಿಭಟನೆ ಮಾಡಿ ತಾಲೂಕು ಅಡಳಿತ ಮತ್ತು ಜಿಲ್ಲಾಡಳಿತಕ್ಕೆ ನೀಡಿದ ದೂರಿನನ್ವಯ ಜಿಲ್ಲಾಡಳಿತದ ನಿರ್ದೇಶನಂದಂತೆ ರೈತರಿಗೆ ಒತ್ತುವರಿ ತೆರವುಗೊಳಿಸಲು ಸೂಕ್ತ ಕಾಲಾವಕಾಶ ನೀಡಿ ಅಹವಾಲು ಸ್ವೀಕರಿಸಿ ಮುಂಜಾನೆಯಿಂದಲೇ ಕಾರ್ಯಾಚರಣೆ ಮಾಡಿ ಸ್ಥಳವನ್ನು  ವಶಪಡಿಸಿಕೊಳ್ಳಲಾಗಿದೆ. 

ಕಾರ್ಯಾಚರಣೆಯಲ್ಲಿ ಮಾವಿನಕಟ್ಟೆ ವಲಯ ಮತ್ತು ಚನ್ನಗಿರಿ ವಲಯದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಚನ್ನಗಿರಿ ಪೋಲಿಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಸುಮಾರು 150 ಕ್ಕೂ ಹೆಚ್ಚು ಸಿಬ್ಬಂದಿಗಳು ಭಾಗವಹಿಸಿದ್ದರು.

Share.
Leave A Reply

Exit mobile version