ಚನ್ನಗಿರಿ:  ಚನ್ನಗಿರಿ ತಾಲೂಕು  ಶ್ರೀ ಕೊಟ್ಟೂರೇಶ್ವರಪಾದಯಾತ್ರೆ  ಸೇವಾ ಸಮಿತಿ  ವತಿಯಿಂದ  25  ವರ್ಷದ ಕೊಟ್ಟೂರೇಶ್ವರ  ಸ್ವಾಮಿಯ  ಪಾದಯಾತ್ರೆ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿದ್ದು,  ಚನ್ನಗಿರಿ  ತಾಲೂಕಿನಿಂದ  ಸುಮಾರು  ಸಾವಿರಕ್ಕೂ ಅಧಿಕ ಭಕ್ತಾದಿಗಳು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ  ಎಂದು  ಶ್ರೀ ಗುರುಕೊಟ್ಟೂರೇಶ್ವರ ಪಾದಯಾತ್ರೆ  ಸಮಿತಿಯ  ಅಧ್ಯಕ್ಷ ಕೋರಿ ಬಸವರಾಜ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ  ಮಾತನಾಡಿ, ಮಹಾರಥೋತ್ಸವದ  ಅಂಗವಾಗಿ ಪಾದಯಾತ್ರೆ ಬೀಳ್ಕೊಡುಗೆಯ ಬೆಳ್ಳಿ ಮಹೋತ್ಸವ  ಸಮಾರಂಭವನ್ನು ಫೆ.28 ರಂದು ಪಟ್ಟಣದ  ವಿಠ್ಠಲ ರುಕುಮಾಯಿ ಸಮುದಾಯ ಭವನದಲ್ಲಿ  ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದ ಸಾನಿಧ್ಯವನ್ನು  ಚನ್ನಗಿರಿ ಹಾಲಸ್ವಾಮಿ ವಿರಕ್ತ ಮಠದ ಡಾ. ಬಸವಜಯಚಂದ್ರ ಸ್ವಾಮಿಗಳು ಮತ್ತು ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಶಾಂತವೀರಸ್ವಾಮಿಗಳು ವಹಿಸಲಿದ್ದು ವೇಧಘೋಷವನ್ನು ಅಖಿಲಭಾರತ ವೀರಶೈವ ಪುರೋಹಿತ ಮಹಾಸಭಾದ ಅಧ್ಯಕ್ಷರಾದ ವಿದ್ವಾನ್ ಬೂದಿಸ್ವಾಮಿ ಹಿರೇಮಠ್  ವಹಿಸಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ  ಕಬ್ಬು ಬೆಳೆಗಾರರ ಸಂಘದ  ಅಧ್ಯಕ್ಷ ತೇಜಸ್ವಿಪಟೇಲ್, ಅಖಿಲಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್, ಚ.ಮ ಗುರುಸಿದ್ದಯ್ಯ, ಕೆ.ಪಿ.ಎಂ.ಶಿವಲಿಮಂಗಯ್ಯ, ಸಾಗರದ ಶಿವಲಿಂಗಪ್ಪ,  ತಾ.ಪಂ. ಮಾಜಿ ಅಧ್ಯಕ್ಷ  ಸಿ.ನಾಗರಾಜ್, ಡಾ. ಪವಿತ್ರಾ ಸಂತೋಷ್. ಜ್ಯೊತಿಕೋರಿ, ಭಾರತಿ ಕೋರಿ ಪ್ರಸಾದ್ ಬಾಗಹಿಸಲಿದ್ದಾರೆ.

ಪಾದಯಾತ್ರೆಗೆ  ಸರ್ವ  ಸಮಾಜದ  ಭಕ್ತಾದಿಗಳು ಭಾಗವಹಿಸಲಿದ್ದು ಫೆ‌. 29  ರ ಗುರುವಾರ ಬೆಳಗ್ಗೆ 3 ಕ್ಕೆ ಪಟ್ಟಣದ ಬಸವೇಶ್ವರ ದೇಗುಲದಿಂದ ಹೊರಡಲಾಗುವುದು.ಹೆಚ್ಚಿನ  ಮಾಹಿತಿಗೆ  9964738282  ರಲ್ಲಿ  ಸಂಪರ್ಕಿಸುವಂತೆ ಮನವಿ ಮಾಡಿದರು. 

ಈ ಸಂದರ್ಭದಲ್ಲಿ ವೀರಶೈವ ಸಮಾಜದ ಮುಖಂಡರಾದ ಪ್ರಭು,  ದಿನೇಶ್‌ಕೋರಿ, ನಾಗರಾಜ್ ಕೋರಿ,  ಕೆ.ಪಿ.ಎಂ. ಶಿವಲಿಂಗಸ್ವಾಮಿ,  ನವೀನ್, ವೀರಶೈವ  ಪುರೋಹಿತ  ಹಾಸಭಾದ ಮಾಜಿ ಅಧ್ಯಕ್ಷ ನೀಲಕಂಠ ಶಾಸ್ತಿಗಳು ಹಾಜರಿದ್ದರು.

Share.
Leave A Reply

Exit mobile version