ದಾವಣಗೆರೆ : ಕಪೋಲ ಕಲ್ಪಿತ ಹೇಳಿಕೆಗಳು ಮತ್ತು ಸುದ್ದಿಗಳ ಬಗ್ಗೆ ಎಚ್ಚರವಾಗಿರಿ.. ಯಾವುದು ಸತ್ಯ, ಯಾವುದು ಸುಳ್ಳು ಅನ್ನೋದರ ಬಗ್ಗೆ ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಇಷ್ಟು ಕೀಳು ಮಟ್ಟಕ್ಕೆ ಇಳಿದಿದ್ದೇಕೆ BJP? ಜನರ ಭಾವನೆಗಳೇ BJPಯ ಅಸಲಿ ಬಂಡ್ವಾಳವಾ.?
ಲೋಕಸಭಾ ಚುನಾವಣೆಯಲ್ಲಿ ಹೇಗಾದ್ರೂ ಮಾಡಿ ಮತ್ತೆ ಗೆದ್ದು ಕೇಂದ್ರದಲ್ಲಿ ಗದ್ದುಗೆ ಹಿಡಿಯಬೇಕು ಅಂತೇಳಿ ಬಿಜೆಪಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಒಂದು ಕಡೆ ಈ ಸಲ ದೇಶದಲ್ಲಿ NDA 400ಕ್ಕೂ ಹೆಚ್ಚು ಸೀಟುಗಳನ್ನ ಗೆಲ್ಲೋದ್ರ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೆ ಅಂತೇಳೋ ಮೂಲಕ ಜನರ ಮೈಂಡ್ ಸೆಟ್ ಮಾಡೋ ತಂತ್ರಗಾರಿಕೆ ಹೆಣೆಯಲಾಗುತ್ತಿದೆ. ಮತ್ತೊಂದು ಕಡೆ ಕಾಂಗ್ರೆಸ್ ವಿರುದ್ಧ ಕಪೋಲಕಲ್ಪಿತ ಹೇಳಿಕೆಗಳು, ಊಹಾ ಪೋಹದ ಹೇಳಿಕೆಗಳನ್ನ ಕೊಟ್ಟು ಬಹುಸಂಖ್ಯಾತ ಹಿಂದೂಗಳ ಭಾವನೆಗಳನ್ನ ಕೆರಳಿಸೋವಂತಾ ಕೆಲಸಕ್ಕೆ ಕೈಹಾಕಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಒಂದು ಹೇಳಿಕೆ ಕೊಟ್ಟಿದ್ರು. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಹಿಂದೂ ಮಹಿಳೆಯರ ಮಂಗಳಸೂತ್ರವನ್ನೇ ಕಿತ್ಕೊಂತಾರೆ ಅಂತೇಳಿದ್ರು.
ಇದು ಎಷ್ಟರ ಮಟ್ಟಿಗೆ ಸರಿ.? ಓರ್ವ ಪ್ರಧಾನಿ ಸ್ಥಾನದಲ್ಲಿದ್ದು ಹೀಗೆ ಹಿಂದೂಗಳನ್ನ ಭಾವನಾತ್ಮಕವಾಗಿ ಹಿಡಿದಿಡಲು ಕಾಂಗ್ರೆಸ್ ವಿರುದ್ಧ ಜನರನ್ನ ಎತ್ತಿಕಟ್ಟೋದು ಎಷ್ಟು ಸರಿ ಅನ್ನೋ ಮಾತುಗಳೂ ಕೇಳಿಬಂದಿದ್ವು. ಇನ್ನ ಚುನಾವಣಾ ಟೈಮಲ್ಲಿ ಮೋದಿ ಕಳೆದ 10 ವರ್ಷದ ತಮ್ಮ ಸಾಧನೆಗಳ ಬಗ್ಗೆ ಅದ್ಯಾಕೆ ಹೇಳ್ತಾಯಿಲ್ಲ.
ಬಿಜೆಪಿ ಮುಖಂಡರು ಬರೀ ಹಿಂದೂ-ಮುಸ್ಲಿಂ, ಪಾಕಿಸ್ತಾನ, ಮಂದಿರ ಮಸೀದಿಗಳ ಬಗ್ಗೆ ಯಾಕೆ ಹೇಳಿಕೆಗಳನ್ನ ಕೊಡ್ತಾಯಿದ್ದಾರೆ ಅನ್ನೋದನ್ನ ಜನಸಾಮಾನ್ಯರು ಅರ್ಥ ಮಾಡ್ಕೋಬೇಕಾಗಿದೆ.
ನಿಮಗೆ ಗೊತ್ತಿರ್ಲಿ, ಇತ್ತೀಚೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಕೂಡ ಒಂದು ಹೇಳಿಕೆ ಕೊಟ್ಟಿದ್ರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ್ರೆ ಪಾಕಿಸ್ತಾನ ಮಾದರಿ ಆಡಳಿತ ಬರುತ್ತದೆ. ಕಾಂಗ್ರೆಸ್‌ನವರು ತುಷ್ಟೀಕರಣದ ಪರಾಕಾಷ್ಠೆ ತಲುಪುತ್ತಿದ್ದಾರೆ ಅಂತೇಳಿ ಪ್ರಲ್ಹಾದ್ ಜೋಶಿ ಟೀಕಾ ಪ್ರಹಾರ ಮಾಡಿದ್ದಾರೆ. ಹಾಗಾದ್ರೆ ಪ್ರಹ್ಲಾದ್ ಜೋಷಿ ಸಾಹೇಬ್ರು ಅದ್ಯಾವ ಆಧಾರದ ಮೇಲೆ ಇಂಥ ಹೇಳಿಕೆ ಕೊಟ್ರೋ ಗೊತ್ತಿಲ್ಲ.? 2004ರಿಂದ 2008ರವರೆಗೂ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇತ್ತಲ್ವಾ.? ಆಗ ಜೋಷಿ ಸಾಹೇಬ್ರು ಹೇಳಿದಂತೆ ದೇಶದಲ್ಲಿ ಪಾಕಿಸ್ತಾನ ಮಾದರಿ ಆಡಳಿತ ಇತ್ತ..? ಇವರ ವೋಟ್ಬ್ಯಾಂಕ್ಗಾಗಿ, ಬಹುಸಂಖ್ಯಾತ ಹಿಂದೂಗಳನ್ನ ಓಲೈಸಿಕೊಳ್ಳೋದಕ್ಕಾಗಿ ಬಿಜೆಪಿ ನಾಯಕರು ಹೀಗೆ ಬೇಕಾಬಿಟ್ಟಿ ಹೇಳಿಕೆಗಳನ್ನ ಕೊಡೋದು ಎಷ್ಟು ಸರಿ ಅಂತೇಳಿ ಜನ ಪ್ರಶ್ನೆ ಕೇಳ್ತಿದ್ದಾರೆ.
ನಿಮಗೆ ಗೊತ್ತಿರ್ಲಿ ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆದಿದ್ದನ್ನ ಬಿಜೆಪಿ ನಾಯಕರು ಹನುಮಾನ್ ಚಾಲಿಸಾ ಕೇಳುತ್ತಿದ್ದಕ್ಕೆ ಹಲ್ಲೆ ನಡೆಸಲಾಯ್ತು ಅಂತ ಬಿಂಬಿಸಿದ್ರು. ನೇಹಾ ಹತ್ಯಾ ಪ್ರಕರಣ ನಿಜಕ್ಕೂ ಖಂಡನೀಯ.. ಅಪರಾಧಿಗೆ ಕಠಿಣ ಶಿಕ್ಷೆ ಆಗ್ಲೇಬೇಕು. ಆದ್ರೆ ಈ ಪ್ರಕರಣದಲ್ಲಿ ಮುಸ್ಲಿಂ ಯುವಕ ಇದ್ದಾನೆ ಅನ್ನೋ ಕಾರಣಕ್ಕೆ ಈ ವಿಷ್ಯ ಬಿಜೆಪಿಗರಿಗೆ ಹೆಚ್ಚು ಮುಖ್ಯವಾಗ್ತಾಯಿದೆ. ಆಗಿಂದಾಗ್ಗೆ ಇಂಥ ಪ್ರಕರಣಗಳು ಸದ್ದು ಮಾಡ್ತಾನೇ ಇವೆ. ದೇಶದ ಮೂಲೆ ಮೂಲೆಗಳಲ್ಲಿ ಹಿಂದೂ ಹೆಣ್ಮಕ್ಕಳು ಹಿಂದೂ ಯುವಕರಿಂದ್ಲೂ ಕೊಲೆಗಳಾದಂತಾ ಪ್ರಕರಣಗಳು ದಂಡಿಯಾಗೇ ಇವೆ. ಆದ್ರೆ ಅಲ್ಲಿ ಅನ್ಯ ಧರ್ಮದ ಯುವಕರ ತಪ್ಪಿದ್ರೆ ಮಾತ್ರ ಬಿಜೆಪಿಗರ ಹುಸಿ ಹಿಂದೂತ್ವ ಜಾಗೃತವಾಗುತ್ತೆ. ಅದು ತಮ್ಮ ವೋಟ್ಬ್ಯಾಂಕ್ಗೆ ಅನುಕೂಲವಾಗುತ್ತೆ ಅಂತೇಳಿ ಬಾಯ್ಬಾಯ್ ಬಡ್ಕೊಳೋದು ಅನ್ನೋ ಮಾತುಗಳೂ ಕೇಳಿ ಬರ್ತಾಯಿವೆ.
ಹಾಗಾದ್ರೆ ಬಿಜೆಪಿಗರು ಹಿಂದೂಗಳನ್ನ ಕೇವಲ ತಮ್ಮ ವೋಟಿಗಾಗಿ ಭಾವನಾತ್ಮಕವಾಗಿ ಕೆರಳಿಸುತ್ತಿದ್ದಾರಾ..? ಚುನಾವಣಾ ಟೈಮಲ್ಲಿ ಕಾಂಗ್ರೆಸ್ ವಿರುದ್ಧ ಕಪೋಲಕಲ್ಪಿತ ಹೇಳಿಕೆಗಳನ್ನ ಕೊಟ್ಟು ಜನರ ದಾರಿ ತಪ್ಪಿಸುತ್ತಿರೋದು ಎಷ್ಟು ಸರಿ.?