ದಾವಣಗೆರೆಯಲ್ಲಿನ ಬೆಣ್ಣೆ ದೋಸೆಗೆ ಬಡವರಿಗೆ ನೀಡುವ ಪಡಿತರ ಅಕ್ಕಿ ಬಳಕೆಯಾಗುತ್ತಿದ್ದು, ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ  ಪ್ರತಿಕ್ರಿಯಿಸಿದ ಜನ, ಹೋಟೆಲ್ ಮಾಲೀಕರು ಯಾರು ಕೂಡ ದುಬಾರಿ ಅಕ್ಕಿಯನ್ನು ದೋಸೆಗೆ ಹಾಕುವುದಿಲ್ಲ. ಹಾಕಿದರೂ ರುಚಿ ಇರೋದಿಲ್ಲ..ಆದ್ದರಿಂದ ಪಡಿತರ ಅಕ್ಕಿಯನ್ನು ಬೆಣ್ಣೆ ದೋಸೆ ಹೋಟೆಲ್ ನಲ್ಲಿ ಬಳಸಲಾಗುತ್ತದೆ ಎನ್ನುತ್ತಾರೆ…ಅವರು ಹೇಳಿದ ಸಂಪೂರ್ಣ ಡೀಟೆಲ್ಸ್ ನಿಮ್ಮ ದಾವಣಗೆರೆ ವಿಜಯದಲ್ಲಿ

ನಂದೀಶ್ ಭದ್ರಾವತಿ, ದಾವಣಗೆರೆ 

ನಾನು ಚಿಕ್ಕವನಾಗಿದ್ದಾಗ ಹಸಿವಿನಿಂದ ಬಳಲುತ್ತಿರುವವರನ್ನು ನೋಡುತ್ತಿದ್ದೇ, ಹಸಿವಿನಿಂದ ಬಳಲುತ್ತಿರೋರಿಗೆ ಒಂದತ್ತು ಅನ್ನ ಸಿಗುತ್ತಿರಲಿಲ್ಲ, ಆದ್ದರಿಂದ ಬಡವರಿಗಾಗಿ ಅನ್ನ ಭಾಗ್ಯ ಯೋಜನೆಯಡಿ ಅಕ್ಕಿ ತಂದೇ ಎಂದು ಸಿಎಂ ಸಿದ್ದರಾಮಯ್ಯ ಆಗಾಗ ಸಭೆ, ಸಮಾರಂಭಗಳಲ್ಲಿ ಹೇಳುತ್ತಾ ಇರುತ್ತಾರೆ….ಆದರೆ ಇದರ ಹಿಂದೆ ಇರುವ ಕರಾಳ ದಂಧೆ ಮಾತ್ರ ಯಾರು ಊಹಿಸೋದಕ್ಕೆ ಸಾಧ್ಯವಿಲ್ಲ..

ಸಿಎಂ ಸಿದ್ದರಾಮಯ್ಯ ಬಡವರಿಗೆ ಒಳ್ಳೆಯದನ್ನೇ ಮಾಡಿದ್ದಾರೆ..ಆದರೆ ಕೆಲ ಮಂದಿ ಪಡಿತರ ಅಕ್ಕಿಯನ್ನುಕಲೆಕ್ಟ್ ಮಾಡಿ ದೋಸೆ, ಇಡ್ಲಿ ಹೋಟೆಲ್, ರೈಸ್ ಮಾಲೀಕರು ಗಳಿಗೆ ಕೊಡುತ್ತಿದ್ದಾರೆ ಎಂಬುದನ್ನು ದಾವಣಗೆರೆ ವಿಜಯ ಅಂಕೆ, ಸಂಖ್ಯೆ ಸಮೇತ ನೀಡುತ್ತದೆ…ಹಾಗಾದ್ರೆ ತಡೆ ಏಕೆ ಈ ಸುದ್ದಿ ಓದಿ.

ದಾವಣಗೆರೆ ಜಿಲ್ಲಾಧಿಕಾರಿ ವೆಂಕಟೇಶ್ ದೋಸೆ ಹಬ್ಬ ಮಾಡಲು ರೆಡಿಯಾಗಿರುವುದೇನೂ ಸರಿ…ಆದರೆ ಆ ದೋಸೆಗೆ ಬಳಸುವ ಅಕ್ಕಿ ಯಾವುದು ಎಂದು ತಿಳಿದುಕೊಳ್ಳಬೇಕಾಗಿದೆ.

ಒಂದು ಕಡೆ ಚಾನೆಲ್ ನಲ್ಲಿ ನೀರಿಲ್ಲ, ನೀರು ಬಿಟ್ಟರೂ ಸರಿಯಾದ ಸಮಯಕ್ಕೆ ಬರಲಿಲ್ಲ, ಇನ್ನೊಂದು ಕಡೆ ಅಕಾಲಿಕ ಮಳೆ ಭತ್ತವನ್ನು ನಾಶ ಮಾಡಿತು.‌..ಇರುವ ಅಲ್ಪ, ಸ್ವಲ್ಪ ನೀರಿನಲ್ಲಿ ಬೆಳೆದ ಭತ್ತಕ್ಕೆ ರೋಗ ಬಂತು, ಇಳುವರಿ ಕಡಿಮೆಯಾಯಿತು..ಇದರ ನಡುವೆ ಭತ್ತವನ್ನು ಕಡಿಮೆ ದರಕ್ಕೆ ದಲ್ಲಾಳಿ ತೆಗೆದುಕೊಂಡು ಸ್ಟಾಕ್ ಮಾಡಿದ. ಭತ್ತಕ್ಕೆ ಉತ್ತಮ ದರ ಬಂತು, ರೈತನ ಕೈ ಖಾಲಿಯಾಯಿತು..ಆದರೂ ಸರಕಾರ ಪಡಿತರ ಅಕ್ಕಿಯನ್ನು ತಕ್ಕಮಟ್ಟಿಗೆ ನೀಡುತ್ತಿದೆ…ಆದರೆ ಈ ಅಕ್ಕಿ ಅಕ್ರಮವಾಗಿ ಬಳಕೆಯಾಗುತ್ತಿದೆ.

ಸೋನಾ ಮಸೂರಿ ಅಕ್ಕಿಗೆ ಹೆಚ್ಚಿನ ದರ

ಸದ್ಯ ಅಕ್ಕಿಯ ದರ ಒಂದು ಕೆಜಿಗೆ ನಲವತ್ತರಿಂದ, ಎಪ್ಪತ್ತರ ಸಮೀಪವಿದೆ.. ಯಾರಾದರೂ ಇಷ್ಟೋಂದು ದರ ಕೊಟ್ಟು ಬೆಣ್ಣೆ ದೋಸೆ ಹೋಟೆಲ್ ನಡೆಸಬಹುದಾ ಎಂದು ಕೇಳಿದರೆ ಖಂಡಿತಾ ಸಾಧ್ಯವಿಲ್ಲ ಅಂತಾರೆ…ಹಾಗಾದ್ರೆ ಬೆಣ್ಣೆ ದೋಸೆಗೆ ಅಕ್ಕಿ ಎಲ್ಲಿಂದ ಬರುತ್ತದೆ ಎಂದು ಬೆನ್ನಟ್ಟಿದಾಗ ಗೊತ್ತಾಗಿದ್ದು, ಬೆಣ್ಣೆ ದೋಸೆಗೆ ಪಡಿತರ ಅಕ್ಕಿಯನ್ನು ಬಳಸಲಾಗುತ್ತದೆಯೆಂದು.

ಹೇಗೆ ದೋಸೆ ಅಂಗಡಿಗೆ ಅಕ್ಕಿ ಬರುತ್ತದೆ

ಸೊಸೈಟಿಯಲ್ಲಿ ಜನರಿಗೆ ಅಕ್ಕಿ ಕೊಟ್ಟ ನಂತರ ಬಡವರು ಊಟ ಮಾಡೋದಕ್ಕೆ ಬಳಸುತ್ತಾರೆ. ಇನ್ನೂ ಕೆಲವರು ಆಟೋದಲ್ಲಿ ಬರುವ ಮಧ್ಯವರ್ತಿಗಳಿಗೆ ಕೆ.ಜಿಗೆ 15 ರೂ.ನಂತೆ  ನೀಡುತ್ತಾರೆ. ಅವರು ಅದನ್ನು ಸ್ಟಾಕ್ ಮಾಡಿಕೊಂಡು ಹೆಚ್ಚಿನ ದರಕ್ಕೆ ಬೆಣ್ಣೆ ದೋಸೆ ಹೋಟೆಲ್ ಗಳು, ರೈಸ್ ಮಿಲ್ ಮಾಲೀಕರಿಗೆ ಕೆಜಿಗೆ 20 ರೂ. ನಂತೆ ಕೊಡುತ್ತಾರೆ. ಅವರು ಆ ಅಕ್ಕಿ ಬಳಸಿ ಹಿಟ್ಟು ಮಾಡುತ್ತಾರೆ.

ಬೆಣ್ಣೆ ದೋಸೆ ಹೋಟೆಲ್ ಗೆ ಅಧಿಕ ಲಾಭ

ಸಾಮಾನ್ಯವಾಗಿ ಒಂದು ಕೆಜಿ ಅಕ್ಕಿ ಹಿಟ್ಟಿಗೆ 15 ರಿಂದ 20 ದೋಸೆ ಬರುತ್ತದೆ…ಬೆಣ್ಣೆ ದೋಸೆ ಹೋಟೆಲ್ ನಲ್ಲಿ ಒಂದು ದೋಸೆಗೆ 40 ರೂ. ದರ ಇದೆ. ಅಲ್ಲಿಗೆ ಇಪ್ಪತ್ತು ದೋಸೆಗೆ ಎಂಟುನೂರು ರೂಪಾಯಿ ಆಗುತ್ತದೆ. ಐದುನೂರು ಖರ್ಚು ಮಾಡಿದರೂ ಒಂದು ಕೆಜಿ ಹಿಟ್ಟಿಗೆ 300 ರೂ. ಉಳಿಯುತ್ತದೆ. ಅಲ್ಲಿಗೆ ಒಂದು ಕೆಜಿಗೆ 20 ರೂ. ಗೆ ತೆಗೆದುಕೊಂಡ ಬೆಣ್ಣೆ ದೋಸೆ ಮಾಲೀಕನಿಗೆ ಒಂದು ದಿನಕ್ಕೆ ಒಂದು ಕೆಜಿಗೆ 280 ರೂ. ಉಳಿಯುತ್ತದೆ. ಇನ್ನು ಒಂದು ಹೋಟೆಲ್ ಒಂದು ದಿನಕ್ಕೆ ಕನಿಷ್ಠ ಐದು ಕೆಜಿ ಹಿಟ್ಟು ಬಳಸಿದರೂ ದಿನಕ್ಕೆ 2400 ರೂ.ಆಗುತ್ತದೆ. ತಿಂಗಳಿಗೆ 72,000 ರೂ. ಆಗುತ್ತದೆ..ಇದರಲ್ಲಿ 40 ಸಾವಿರ ಖರ್ಚು ಕಳೆದರೆ ಇನ್ನೂ 32 ಸಾವಿರ ಹಣ ಉಳಿಯುತ್ತದೆ. ಅಲ್ಲಿಗೆ 124 ಹೋಟೆಲ್ ಗಳಿಂದ  ಕನಿಷ್ಠ  9 ಲಕ್ಷ ಹಣ ಬರುತ್ತದೆ. ಇದು ಕೇವಲ ಕನಿಷ್ಠ ಲೆಕ್ಕವಷ್ಟೇ‌. ಇದರ ಅಂದಾಜು ಇನ್ನು ಹೆಚ್ಚಿದೆ.

ಸರಕಾರ ಪಡಿತರ ಅಕ್ಕಿಯನ್ನು ಒಳ್ಳೆ ಉದ್ದೇಶಕ್ಕಾಗಿ ನೀಡುತ್ತಿದ್ದು, ಇದು ಬೆಣ್ಣೆ ದೋಸೆ ಹೋಟೆಲ್ ಗಳಿಗೆ ಈ ರೀತಿ ದುರ್ಬಳಕೆ ಆಗುತ್ತಿದೆ..ಯಾರು ಕೂಡ ಸೋನಮಸೂರಿ ಅಕ್ಕಿ ಬಳಸಿ ಬೆಣ್ಣೆ ದೋಸೆ ಮಾಡೋದಿಲ್ಲ. ಇನ್ನಾದರೂ ಡಿಸಿ ವೆಂಕಟೇಶ್ ಈ ಸತ್ಯವನ್ನು ಅರಿತು, ಅಕ್ರಮ ಪಡಿತರದಾರರ ಮೇಲೆ ಕ್ರಮ ಕೈಗೊಳ್ಳುತ್ತಾರಾ ಅಥವಾ ಬಡವರ ಅಕ್ಕಿ ಬಳಸಿ ಮಾಡುವ  ಬೆಣ್ಣೆ ದೋಸೆಗೆ ಪ್ರೋತ್ಸಾಹ ನೀಡುತ್ತಾರಾ ಎಂದು ಕಾದು ನೋಡಬೇಕು.

Share.
Leave A Reply

Exit mobile version