ಜಗಳೂರು:ಜಮೀನಿಗೆ ಹೋಗಿದ್ದ ರೈತನ ಮೇಲೆ ನಾಲ್ಕು ಕರಡಿಗಳ ದಾಳಿ ಮಾಡಿ ಹಿಗ್ಗಾಮುಗ್ಗಾ ಕಡಿದು ಗಂಭೀರ ಗಾಯಗೊಳಿಸಿರುವ ಘಟನೆ ಜಗಳೂರು ತಾಲೂಕಿನ ಬೈರನಾಯಕನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಬೈರನಾಯಕನಹಳ್ಳಿಯ ರೈತ ಹನುಮಂತಪ್ಪ ಗಂಭೀರ ಗಾಯಗೊಂಡಿದ್ದು, ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈಗಾಗಲೇ ತಾಲೂಕಿನಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಹಾಗಾಗಿ ಕರಡಿ, ಹಂದಿಗಳು ಜಮೀನುಗಳತ್ತಾ ಮುಖ ಮಾಡುತ್ತಿವೆ.
ಹನುಮಂತಪ್ಪ ಸಂಜೆ ತಮ್ಮ ಜಮೀನಿಗೆ ತೆರಳಿದ್ದಾರೆ. ಆದರೆ ಕರಡಿ ಮತ್ತು ಮೂರು ಮರಿಗಳು ಹಿಂಭಾಗದಿಂದ ಬಂದು ಏಕ ಕಾಲದಲ್ಲಿ ಮೇಲೆ ಎಗರಿ ಮನಸ್ಸಿಗೆ ಬಂದಂತೆ ಕಡಿದಿವೆ. ರೈತ ಎಷ್ಟೆ ಕಿರುಚಾಡಿದರು ಯಾರಿಗೂ ಕೇಳಿಸಿಲ್ಲ. ಕೊನೆ ಕಡಿದು ಬಿಟ್ಟು ಹೋದ ಮೇಲೆ ಪಕ್ಕದ ಜಮೀನಿನ ರೈತರು ಬಂದುನೋಡಿದಾಗ ರಕ್ತದ ಮಡುವಿನಲ್ಲಿ ಮಲಗಿರುವುದು ಕಂಡು ತಕ್ಷಣ ಜಗಳೂರಿನ ಆಸ್ಪತ್ರೆಗೆ ಕರೆ ತಂದಿದ್ದಾರೆ.
ಆದರೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕಳಿಸಿದ್ದಾರೆ.ಆಸ್ಪತ್ರೆಗೆ ಅರಣ್ಯಾಧಿಕಾರಿಗಳುವಭೇಟಿ ನೀಡಿ ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.