ಬೆಂಗಳೂರು : ತನ್ನ ಹೆತ್ತ ಪೋಷಕರನ್ನು ಬಿಟ್ಟು ಗಂಡನನ್ನೇ ನಂಬಿದ್ದ ತನ್ನ ಅರ್ಧಾಂಗಿಯನ್ನು ಕೊಂದು, ಆಕೆಯ ಅಂಗಾಂಗಳನ್ನು ಕತ್ತರಿಸಿ ಫ್ರೀಡ್ಜ್ ನಲ್ಲಿ ಇಟ್ಟು ಪತಿ ಪರಾರಿಯಾಗಿರುವ ಘಟನೆ ವೈಯಾಲಿಕಾವಲ್ನ ಮುನ್ನೇಶ್ವರ ಬ್ಲಾಕ್ನ ಮನೆಯೊಂದರ ಮೊದಲ ಮಹಡಿಯಲ್ಲಿ ನಡೆದಿದೆ.
ಮಹಾಲಕ್ಷ್ಮೀ (29) ಕೊಲೆಗೀಡಾದ ಮಹಿಳೆ. ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಲ್ಲದೇ, ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟಿದ್ದಾನೆ.
ಈ ಕುರಿತು ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್, ”ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರ ಮೊದಲ ಮಹಡಿಯಲ್ಲಿ ಮಹಿಳೆಯ ಮೃತದೇಹವನ್ನು ತುಂಡರಿಸಿ ಫ್ರಿಡ್ಜ್ನಲ್ಲಿ ಇಟ್ಟಿರುವ ಘಟನೆ ನಡೆದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಇದು ಸಂಭವಿಸಿ ನಾಲ್ಕೈದು ದಿನಗಳು ಆಗಿರಬಹುದು. ಕೊಲೆಯಾಗಿರುವ ಮಹಿಳೆಯ ಗುರುತು ಪತ್ತೆಯಾಗಿದೆ. ಹೊರರಾಜ್ಯದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಡಾಗ್ ಸ್ಕ್ವಾಡ್, ಬೆರಳಚ್ಚು ತಜ್ಞರ ತಂಡ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಎಫ್ಎಸ್ಎಲ್ ತಂಡ ಕೂಡ ಆಗಮಿಸುತ್ತಿದೆ. ತನಿಖೆ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ” ಎಂದು ಅವರು ಹೇಳಿದರು
ಮಹಿಳೆ ಇತ್ತೀಚೆಗಷ್ಟೇ ವೈಯಾಲಿಕಾವಲ್ನ ಮನೆಗೆ ಬಂದಿದ್ದಳು. ಇಂದು ಬೆಳಗ್ಗೆ ಆಕೆಯ ತಾಯಿ-ಸಹೋದರಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
”ನಾಯಿ ನೋಡಿಕೊಳ್ಳುವ ವಿಚಾರವಾಗಿ ಮೃತ ಯುವತಿ ಆಗಾಗ ನಮ್ಮೊಂದಿಗೆ ಮಾತನಾಡುತ್ತಿದ್ದಳು. ಹೆಚ್ಚು ಮಾತನಾಡುತ್ತಿರಲಿಲ್ಲ. ಮನೆಯಲ್ಲಿ ಒಬ್ಬಂಟಿಯಾಗಿ ಇರುತ್ತಿದ್ದಳು. ಕೆಲವು ದಿನಗಳ ಕಾಲ ಅವರ ಅಣ್ಣ ಇದ್ದ. ಅವರು ಹೋದ ಬಳಿಕ ಈಕೆ ಒಬ್ಬಳೇ ಮನೆಯಲ್ಲಿ ಇರುತ್ತಿದ್ದಳು. ಅವಳಿಗೆ ಮದುವೆಯಾಗಿತ್ತು ಎಂಬ ವಿಚಾರ ನಮಗೆ ಇವತ್ತೇ ಗೊತ್ತಾಯಿತು. ಇಲ್ಲಿಗೆ ಬಂದು ಐದು ತಿಂಗಳು ಆಗಿತ್ತು. ಬೆಳಗ್ಗೆ 9;30ಕ್ಕೆ ಹೊರಗೆ ಹೋದರೆ ರಾತ್ರಿ 10:30ಕ್ಕೆ ಮನೆಗೆ ವಾಪಸ್ ಬರುತ್ತಿದ್ದಳು. ಇವತ್ತು ಆಕೆಯ ತಾಯಿ ಮತ್ತು ಅಕ್ಕ ಬಂದಿದ್ದರು. ಮನೆಯಿಂದ ಏನೋ ವಾಸನೆ ಬರುತ್ತಿದೆ ಎಂದು ಫ್ರಿಡ್ಜ್ ತೆರೆದಿದಾಗ ಪ್ರಕರಣ ಬೆಳಕಿಗೆ ಬಂದಿದೆ” ಎಂದು ಮೇರಿ ಎಂಬಾಕೆ ಘಟನೆಗೆ ಬೇಸರ ವ್ಯಕ್ತಪಡಿಸಿದರು.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಹಿಳೆದೇಹವನ್ನು ೩೫ ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟು ಪರಾರಿ
ಬಿಹಾರ ಮೂಲದವರು
ಮನೆಯಲ್ಲಿ ವಾಸನೆ ಬಾರದಂತೆ ರಾಸಾಯನಿಕ ಸಿಂಪಡಿಸಿದ ಆರೋಪಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ. ವಿವಾಹಿತೆಯಾಗಿದ್ದ ಮೃತ ಮಹಿಳೆ ವೈಯಕ್ತಿಕ ಕಾರಣದಿಂದ ನೆಲಮಂಗಲದಲ್ಲಿ ವಾಸವಾಗಿದ್ದಳು. ನೇಪಾಳ ಮೂಲದ ಪತಿ ಹುಕುಂಸಿಂಗ್ ರಾಣಾ ಹಾಗೂ ೪ ವರ್ಷದ ಮಗುವನ್ನು ತೊರೆದು ಮುನೇಶ್ವರ ನಗರದಲ್ಲಿ ಕಳೆದ ೬ ತಿಂಗಳಿಂದ ಪ್ರತ್ಯೇಕ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದಳು. ಮಹಿಳೆಯ ಫೋನ್ ಸ್ವಿಚ್ಚ್ ಆಫ್ ಆಗಿದ್ದರಿಂದ ಅನುಮಾನಗೊಂಡ ಆಕೆಯ ತಾಯಿ ಹಾಗೂ ಕುಟುಂಬಸ್ಥರು ಮನೆಗೆ ಬಂದು ಬೀಗ ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹಾಗೂ ವೈಯಾಲಿಕಾವಲ್ ಠಾಣೆ ಪೊಲೀಸ್ ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ.
ಒಂದೊಂದು ದೇಹದ ತುಂಡು ಹೊರ ತೆಗೆದ ಸಿಬ್ಬಂದಿ:
ಫ್ರಿಡ್ಜ್ನಲ್ಲಿ ಇಟ್ಟಿದ ಮಹಿಳೆಯ ಮೃತ ದೇಹದ ಒಂದೊಂದು ತುಂಡುಗಳನ್ನು ಪೊಲೀಸರು ಹೊರತೆಗೆದು ವೈದ್ಯಕೀಯ ಪರೀಕ್ಷೆಗಾಗಿ ನಗರದ ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ. ಎಫ್ಎಸ್ಎಲ್ ತಂಡ ಸ್ಯಾಂಪಲ್ ಸಂಗ್ರಹಿಸಿದೆ. ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಮಹಿಳೆಯ ಫೋನ್ ಸೆ.೨ರಂದು ಸ್ವಿಚ್ಚ್ಆಫ್ ಆಗಿತ್ತು. ಅಂದೇ ಹತ್ಯೆಯಾಗಿರಬಹುದು ಎಂಬ ಪೊಲೀಸರು ಶಂಕಿಸಿದ್ದಾರೆ.
ಬೆಂಗಳೂರಿನ ಮಾಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಕೊಲೆಯಾದ ಮಹಿಳೆಯನ್ನು ಪ್ರತಿದಿನ ಯುವಕ ಕೆಲಸಕ್ಕೆ ಕರೆದುಕೊಂಡು ಹೋಗಿ ಬರುತ್ತಿದ್ದ. ಸದ್ಯ ಪೊಲೀಸರು ಯುವಕನ ಮೇಲೆಯೂ ಸಂಶಯ ವ್ಯಕ್ತಪಡಿಸಿದ್ದಾರೆ.