- ಪ್ರಮುಖ ಸುದ್ದಿ
- ದಾವಣಗೆರೆ ವಿಶೇಷ
- ಕ್ರೈಂ ಸುದ್ದಿ
- ರಾಜಕೀಯ ಸುದ್ದಿ
- ರೈತಮಿತ್ರ
- ಅಡಕೆ ಧಾರಣೆ
- ಚಿನ್ನ, ಬೆಳ್ಳಿ ಧಾರಣೆ
- Blog
Subscribe to Updates
Get the latest creative news from FooBar about art, design and business.
Author: davangerevijaya.com
ದಾವಣಗೆರೆ: ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಬಾವಿಹಾಳ್ ಎಂಬ ಸಣ್ಣ ಹಳ್ಳಿಯ ರಸ್ತೆ, ಇನ್ನೂ ಅಭಿವೃದ್ಧಿಯಾಗಿಲ್ಲ ಎಂದರೆ ನಾಚಿಕೆಗೇಡಿನ ಸಂಗತಿ ಎಂದು ಚಿತ್ರದುರ್ಗ ತಾಲೂಕಿನ ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು. ತಾಲೂಕಿನ ಬಾವಿಹಾಳ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಕರಿಯಮ್ಮ ದೇವಿ ದೇವಸ್ಥಾನದ ಕಟ್ಟಡ ಉದ್ಘಾಟನೆ ಮತ್ತು ಕಳಸಾರೋಹಣ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಪ್ರೊ.ಲಿಂಗಣ್ಣ ಐದು ವರ್ಷ ಶಾಸಕರಾಗಿದ್ದರು. ಈ ಹಿಂದೆ ಎಷ್ಟೋ ಜನ ಶಾಸಕರಾಗಿದ್ರು. ಈಗ ಬಸವಂತಪ್ಪ ಶಾಸಕರಾಗಿದ್ದಾರೆ. ಆದರೀಗ ಲಿಂಗಣ್ಣನವರೇ ನೀವು ಐದು ವರ್ಷ ಶಾಸಕರಾಗಿದ್ದಾಗ ಈ ರಸ್ತೆಯಲ್ಲಿ ಓಡಾಡಿದ್ದಿಯೋ ಇಲ್ಲವೋ, ನೀನು ಹೇಳು. ಐದು ವರ್ಷವಾದರೂ ರಸ್ತೆ ಹೀಗಿದಿಯೆಲ್ಲ ಎಂದರೆ ಹೇಗೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಅದೆಷ್ಟೋ ವರ್ಷಗಳು ಕಳೆದವು. ಗ್ರಾಮೀಣ ರಸ್ತೆಗಳು ಯಾರು ಓಡಾಡಲು ಆಗದಂತೆ ಕೆಟ್ಟದಾಗಿವೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಸಾಮಾಜಿಕ ಕಳಕಳಿ, ಸಾಮಾಜಿಕ ಬದ್ಧತೆ ಇರಬೇಕು. ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವುದು ಪ್ರತಿಯೊಬ್ಬ…
ದಾವಣಗೆರೆ: ದಾವಣಗೆರೆಯಲ್ಲಿ ನಡೆದ 31 ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ನಗರದ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ರಾಜ್ಯ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತ ಮತ್ತು ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರ, ದಾವಣಗೆರೆ ವತಿಯಿಂದ ಆಯೋಜಿಸಿದ್ದ 31ನೇ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ-2023 ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಬಿ.ಎನ್.ಭಾವನಾ (9 ನೇ ತರಗತಿ) ಮತ್ತು ಎಂ.ಪ್ರತೀಕ್ಷಾ (8 ನೇ ತರಗತಿ) ಇವರು ‘ಸ್ವಾವಲಂಭನೆಗಾಗಿ ಪರಿಸರ ವ್ಯವಸ್ಥೆ ಆಧಾರಿತ ವಿಧಾನಗಳು’ ಎಂಬ ಉಪ ವಿಷಯದ ಅಡಿಯಲ್ಲಿ ‘ಕತ್ತಾಳೆ ಪಟ್ಟಿ, ಪರಿಸರದ ಗಟ್ಟಿ’ ಎಂಬ ವಿಷಯವನ್ನು ಮಂಡನೆ ಮಾಡಿ ಗೆಲುವು ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಶಾಲಾ ವಿಜ್ಞಾನ ಶಿಕ್ಷಕಿ ಸವಿತಾ ಎನ್.…
ಚಿತ್ರದುರ್ಗ: ನಗರದ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಪತ್ರಿಕಾಗೋಷ್ಠಿ ಹಮ್ಮಿಕೊಂಡ ವೇಳೆ ಸಮುದಾಯದ ಮುಖಂಡರೊಂದಿಗೆ ಮಾತಿನ ಚಕಮಕಿ ನಡೆದಿದೆ. ದಲಿತ ಮಹಾಸಭಾ ಸಂಘಟನೆ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸುತ್ತಿದ್ದಂತಹ ಕಾರಜೋಳ ಕೊಠಡಿಗೆ ನೇರವಾಗಿ ಬಂದರು. ಈ ಸಂದರ್ಭದಲ್ಲಿ ಮಾತನಾಡಿದಂತಹ ಪದಾಧಿಕಾರಿಗಳು, ಬಿಜೆಪಿ ಅಧಿಕಾರದಲ್ಲಿದ್ದಂತಹ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ದಲಿತರಿಗೆ ನೀವು ಅನ್ಯಾಯ ಮಾಡಿದ್ದೀರಾ. ಸಮುದಾಯದ ಮುಖಂಡರಾಗಿ ಸಮುದಾಯಕ್ಕೆ ಕೊಡುಗೆ ಏನನ್ನು ನೀವು ನೀಡಿಲ್ಲ ಎಂದು ಪ್ರಶ್ನೆ ಮಾಡಿದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿದೆ. ಬಳಿಕ ಮಾಜಿ ಸಚಿವ ಕಾರಜೋಳ ಹಾಗೂ ಸಮುದಾಯದ ಮುಖಂಡರು ವಾದ-ಪ್ರತಿವಾದ ಮಂಡಿಸಿದರು. ಹಲ್ಲೆಗೆ ಯತ್ನ, ಬಂಧಿಸಲು ಆಗ್ರಹ ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ನನ್ನ ಮೇಲೆ ಹಲ್ಲೆ ಮಾಡಲು ಬಂದಂತಹ ವ್ಯಕ್ತಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೂರುವುದಾಗಿ ಗೋವಿಂದ್ ಕಾರಜೋಳ ಎಚ್ಚರಿಸಿದರು.
ದಾವಣಗೆರೆ : ಇನ್ಮುಂದೆ ಯಾರಾದ್ರೂ ಮೊಸರು ತಂದಿದ್ದೇನೆ ಉಪ್ಪಿನಕಾಯಿ ಕೊಡಿ ಅಂತ ಮನೆ ಬಾಗಿಲಿಗೆ ಬಂದ್ರೆ ಮಹಿಳೆಯರು ಎಚ್ಚರದಿಂದ ಇರಬೇಕು….ಅಯ್ಯೋ ಯಾಕೆ ಎಂದು ಪ್ರಶ್ನೆ ಕೇಳೋರಿಗೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಹೌದು….ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಗ್ರಾಮವೊಂದರಲ್ಲಿ ವ್ಯಕ್ತಿಯೊಬ್ಬ ಉಪ್ಪಿನಕಾಯಿ ಕೇಳಲು ಬಂದು ಮಹಿಳೆಯೊಬ್ಬಳ ಕೆನ್ನೆ ಕಚ್ಚಿದ್ದಾನೆ. ಮಂಜಪ್ಪ ಆಲಿಯಾಸ್ ಮಂಜುನಾಥ್ ಡಿ.ಹೆಚ್. ಎಂದು ಹೇಳಲಾಗುತ್ತಿದ್ದು, ಆ ವ್ಯಕ್ತಿಯನ್ನು ಬಂಧಿಸಬೇಕೆಂದು ಅಲ್ಲಿನ ಗ್ರಾಮದ ಮಹಿಳೆಯರು ದಾವಣಗೆರೆಯ ಎಸ್ಪಿ ಕಚೇರಿ ಬಳಿ ಆರೋಪಿಯ ಫೊಟೋವನ್ನು ಹಿಡಿದು ಪ್ರತಿಭಟನೆ ನಡೆಸಿದರು. ಏನಿದು ಘಟನೆ? ಮನೆಯಲ್ಲಿ ಒಬ್ಬಂಟಿ ಮಹಿಳೆ ಇರುವುದನ್ನು ಗಮನಿಸಿದ ಕಾಮುಕ ನನಗೆ ಉಪ್ಪಿನಕಾಯಿ ಬೇಕು ಎಂದು ಕೇಳುತ್ತಾ ಮನೆಯೊಳಗೆ ನುಗ್ಗಿದ್ದಾನೆ. ಬಳಿಕ ಅತ್ಯಾಚಾರಕ್ಕೆ ಯತ್ನಿಸಿ ಕೆನ್ನೆಯನ್ನು ಕಚ್ಚಿ ಪರಾರಿಯಾಗಿದ್ದಾನೆ. ಡಿಸೆಂಬರ್ 2 ರಂದು ಈ ಘಟನೆ ನಡೆದಿದ್ದು, ಪೊಲೀಸರಿಗೆ ದೂರು ಕೊಟ್ಟರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಹಿಳೆಯರು ಎಸ್ಪಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಕ್ರಮಕ್ಕೆ ಒತ್ತಾಯ ಮಹಿಳೆ ಮನೆಯಲ್ಲಿ ಒಬ್ಬಳೇ ಇರುವುದನ್ನು…
ದಾವಣಗೆರೆ : ರಾಜ್ಯದಲ್ಲಿ ತೀವ್ರ ಚರ್ಚೆಗೊಳಗಾಗಿರುವ ಕಾಂತರಾಜ್ ವರದಿ ಆಯೋಗದ ಜಾತಿಗಣತಿ ವಿಚಾರ ಅಂಗೀಕರಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಮನವಿ ಸಲ್ಲಿಸಲಾಗಿದೆ ಹಾಗೂ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಆದ್ದರಿಂದ ನಾವು ಕಾದು ನೋಡುತ್ತೇವೆ ಎಂದುಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು. ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಶಾಸಕರ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಜಾತಿಗಣತಿ ವರದಿ ಅಂಗೀಕರಿಸಿ ಬಿಡುಗಡೆ ಸಂಬಂಧ ಈಗಾಗಲೇ ಮಹಾಸಭಾವು ಸ್ಪಷ್ಟ ನಿರ್ಧಾರ ಹೇಳಿದೆ ಎಂದು ತಿಳಿಸಿದರು. ಜಾತಿಗಣತಿ ವರದಿ ಬಿಡುಗಡೆ ಮಾಡದೇ ವಿರೋಧ ಮಾಡುವುದು ಸರಿಯಲ್ಲ ಮೊದಲು ವರದಿ ಬಿಡುಗಡೆ ಆಗಲಿ. ಜಾತಿಗಣತಿ ವರದಿ ಬಿಡುಗಡೆ ಮಾಡದೇ ವಿರೋಧ ಮಾಡುವುದು ಸರಿಯಲ್ಲ. ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಅಭಿಪ್ರಾಯ ನಾವು ತಿಳಿಸಿದ್ದೇವೆ. ಸಿದ್ದರಾಮಯ್ಯ ಅವರೂ ಕೂಡ ನಾನು ಸಹ ವರದಿ ನೋಡಿಲ್ಲ, ಲೋಪದೋಷವಾಗಿದ್ದರೆ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಈ…
ದಾವಣಗೆರೆ: ರಾಜ್ಯದಲ್ಲಿ ವೈಜ್ಞಾನಿಕವಾಗಿ ಮತ್ತು ವಾಸ್ತವಾಂಶ ಆಧಾರಿತವಾಗಿ ಹೊಸದಾಗಿ ಜಾತಿ ಜನಗಣತಿ ಮಾಡಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ. ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಈ ಆಗ್ರಹ ಮಾಡಲಾಯಿತು. ವೀರಶೈವ ಲಿಂಗಾಯತ ಮಹಾಸಭಾ ಬಸವಾದಿ ಪ್ರಮಥರ ತತ್ವಗಳನ್ನು ಪರಿಪಾಲಿಸುತ್ತಿದ್ದು, ಸರ್ವರಿಗೂ ಲೇಸನ್ನು ಬಯಸುವ ಮತ್ತು ಸಮ ಸಮಾಜದ ನಿರ್ಮಾಣ ಮಾಡಬೇಕೆಂಬ ಶರಣರ ತತ್ವದ ಆಧಾರದ ಮೇಲೆಯೇ ನಡೆಯುತ್ತಿರುವ ಸಂಸ್ಥೆಯಾಗಿದೆ. ನಾವು ಜಾತಿ ಜನಗಣತಿಯ ವಿರೋಧಿಗಳಲ್ಲ ಎಂಬುದನ್ನು ಈ ಸಂದರ್ಭದಲ್ಲಿ ತಮಗೆ ಸ್ಪಷ್ಟಪಡಿಸಲು ಇಚ್ಛಿಸುತ್ತೇವೆ. ಆದರೆ, ಕಳೆದ 8 ವರ್ಷಗಳ ಹಿಂದೆ ನಡೆಸಲಾದ ಈ ಸಾಮಾಜಿಕ – ಆರ್ಥಿಕ ಸಮೀಕ್ಷೆ ಹಲವು ವೈರುಧ್ಯ ಮತ್ತು ಲೋಪಗಳಿಂದ ಕೂಡಿದ್ದು, ಇದನ್ನು ಸರಿಪಡಿಸುವ ಅಗತ್ಯವಿದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಹೀಗಾಗಿ ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮಹಾಸಭಾದ ಅನೇಕ ತಾಲೂಕು ಮತ್ತು ಜಿಲ್ಲಾ ಮಟ್ಟದ ಸಭೆಗಳಲ್ಲಿ…
ಚನ್ನಗಿರಿ: ಸಮಾಜಕ್ಕೆ ಸಮಾನತೆಯ ಅವಕಾಶದ ಭೂಮಿ ಒದಗಿಸಿದವರು ಬಸವಾದಿ ಶಿವ ಶರಣರು ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ. ಗುರುಬಸವ ಸ್ವಾಮೀಜಿ ಹೇಳಿದರು. ತಾಲೂಕಿನ ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ 855 ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಹಾಗೂ ಸರ್ವ ಶರಣ ಶರಣಿಯರ ಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಅಂದಿನ ಸಮಾಜದಲ್ಲಿ ಬೇರು ಬಿಟ್ಟಿದ್ದ ಅಂದಕಾರ, ಕಂದಾಚಾರ ಮೂಢನಂಬಿಕೆ ಅಸ್ಪೃಶ್ಯತೆ ಮೇಲು, ಕೀಳು ಬಡವಬಲ್ಲಿದ, ಸ್ತ್ರೀ, ಪುರುಷ, ಹಿರಿಯ ಕಿರಿಯ ಜಾತಿ ಮತ ಪಂಥ ವರ್ಗ ಬೇಧಗಳಿಗೆ ಅತ್ಯಂತ ಸುಳಿಗೆ ಸಿಕ್ಕು ನಗುತ್ತಿದ್ದ ಸಮಾಜ. ಇಂತಹ ಸಮಾಜವನ್ನು ಅಂಧಕಾರದಿಂದ ಹೊರ ತಂದು ಸುಜ್ಞಾನದ ಬೀಜವನ್ನ ಬಿತ್ತಿದವರು 12ನೇ ಶತಮಾನದ ಶಿವಶರಣರು. ಸತ್ಯ ಶುದ್ಧ ಕಾಯಕದಿಂದ ತಾತ್ವಿಕ ತಲಾದಿಯಿಂದ ಸಾತ್ವಿಕ ಸಮಾಜ ನಿರ್ಮಾಣ ಮಾಡಿ ಅರಿವು ಆಚಾರ ವಿವೇಕದ ಮೂಲಕ ಸಂಗ್ರಹ ಬುದ್ಧಿಯನ್ನು ಹೊರತುಪಡಿಸಿ ದಾನ ದಾಸೋಹದ ಮೂಲಕ ಸಾಮಾಜಿಕ ಕಲ್ಯಾಣ ಮಾಡಿದವರು ಶರಣರು. ಅರಮನೆಗಿಂತ ಅರಿವಿನ ಮನೆ ಮುಖ್ಯ. ಭೌತಿಕ…
ಚನ್ನಗಿರಿ: ಸ್ಪರ್ಧಾತ್ಮಕ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಇದ್ದು ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುವುದರ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಧಾರೆಯೆರೆಯುವ ಕಾರ್ಯ ಮಾಡುತ್ತಿವೆ ಎಂದು ಸ್ವಾಭಿಮಾನಿ ಬಳಗದ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಹೇಳಿದರು. ತಾಲೂಕಿನ ದೊಂದರಗಟ್ಟ ಗ್ರಾಮದಲ್ಲಿ ಪದ್ಮದೀಪ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪರ್ವ ೨೦೨೩ ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಸರಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳು ಸಾಕಷ್ಟು ಸ್ಪರ್ಧೆಯಿಂದ ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ತೋರುತ್ತಿದೆ. ಇದಕ್ಕೆ ಪದ್ಮದೀಪ ಸಂಸ್ಥೆಯ ವಿದ್ಯಾರ್ಥಿಗಳು ನಾಟಕ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟವನ್ನು ಸ್ಪರ್ಧಿಸುತ್ತಿರುವುದು ಸಾಕ್ಷಿಯಾಗಿದೆ. ಅದರಂತೆ ಚನ್ನಗಿರಿ ತಾಲೂಕಿನಲ್ಲಿ ಇಂತಹ ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗಿರುವುದು ಶ್ಲಾಘನೀಯ. ಚನ್ನಗಿರಿ ತಾಲೂಕಿನ ಸಾಕಷ್ಟು ಮಕ್ಕಳು ವಿವಿಧ ಕೋರ್ಸ್ ಗಳನ್ನು ಕಲಿಯಲು ಹೊರಜಿಲ್ಲೆಗಳಿಗೆ ಹೋಗುತ್ತಿದ್ದು ಇಂತಹ ಶಿಕ್ಷಣ ಸಂಸ್ಥೆಗಳು ಮತ್ತಷ್ಟು ಹೆಚ್ಚಿನ ಕೋರ್ಸ್ಗಳನ್ನು ತರುವ ಮೂಲಕ ನಮ್ಮ ಮಕ್ಕಳಿಗೆ …
ನಂದೀಶ್ ಭದ್ರಾವತಿ ದಾವಣಗೆರೆ ಎಗ್ ಲೆಸ್ ಕೇಕ್,ಚಕ್ಕುಲಿ,ನಿಪ್ಪಟ್ಟು, ಬಿಸಿಬೇಳೆಬಾತ್ ಇದೇನೂ ಊಟದ ಮೆನು ಅನ್ಕೊಂಡ್ರಾ…ಅಲ್ಲ ಇವೆಲ್ಲಾ ಸಿರಿಧಾನ್ಯದಿಂದ ತಯಾರಿಸಿದ ಖಾದ್ಯಗಳು. ಹೌದು…ದಾವಣಗೆರೆ ಕೃಷಿ ಇಲಾಖೆ ಆವರಣದಲ್ಲಿ ಜಿಲ್ಲಾ ಮಟ್ಟದಲ್ಲಿ ಸಿರಿ ಧಾನ್ಯ ಪಾಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 63 ಸ್ಪರ್ಧಿಗಳು ಖಾದ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯನ್ನು ಎರಡು ವಿಭಾಗದಲ್ಲಿ ವಿಂಗಡಿಸಲಾಗಿತ್ತು ಸಿರಿಧಾನ್ಯಗಳಿಂದ ಸಿಹಿ ಖಾದ್ಯ ಹಾಗೂ ಖಾರದ ಖಾದ್ಯ ಸ್ಪರ್ಧೆ ನಡೆಸಲಾಗಿತ್ತು.ಈ ಸಿರಿಧಾನ್ಯ ಪಾಕಮೇಳ ಜನಾಕರ್ಷಕವಾಗಿತ್ತು. ಬಾಯಲ್ಲಿ ನೀರೂರಿಸಿದ ಸಿರಿಧಾನ್ಯ ಖಾದ್ಯ ಧಾನ್ಯ ಬಳಸಿ ತಯಾರಿಸಿದ ಖೀಲ್ಸ, ಖರ್ಚಿಕಾಯಿ, ಲಡ್ಡು, ಬಿಸ್ಕೇಟ್, ಕೇಕ್, ಹೋಳಿಗೆ, ಚಕ್ಕುಲಿ, ಪುಲಾವ್, ಬಿಸಿ ಬೇಳೆಬಾತ್, ರಾಗಿ ಸೂಪ್, ಕೋಡುಬಳೆ, ನಿಪ್ಪಟ್ಟುಗಳು ಬಾಯಲ್ಲಿ ನೀರೂರಿಸಿದವು. ಪ್ರತಿ ಸ್ಪರ್ಧಿಗೆ ತಲಾ ಒಂದು ಬಗೆಯ ಸಿಹಿ ಹಾಗೂ ಖಾರವಾದ (ಸಸ್ಯಹಾರಿ) ಖಾದ್ಯ ತಯಾರಿಸಲು ಅವಕಾಶ ಕಲ್ಪಿಸಲಾಗಿತ್ತು. ದಾವಣಗೆರೆಯ ಸಿಹಿ ಖಾದ್ಯ ಗುಳ್ಳಡಿಕೆ ಉಂಡೆ ಹಾಗೂ ಸಾವೆ ಕಾರ್ನ್‌ಫ್ಲೆಕ್ ಹಾಗೂ ರಾಗಿ ಸೂಪ್ ಗಮನ ಸೆಳೆದವು. ಸ್ಪರ್ಧೆಯಲ್ಲಿ…
ನ್ಯಾಮತಿ : ಹಣಕ್ಕಾಗಿ ಈಚೆಗೆ ಲೋಕಾಯುಕ್ತ ಕಚೇರಿ ಅಧಿಕಾರಿ ಎಂದು ಹೇಳಿಕೊಂಡು ನ್ಯಾಮತಿ ತಹಸೀಲ್ದಾರ್‌ಗೆ ಬೆದರಿಕೆ ಕರೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ನ್ಯಾಮತಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ಸದಲಗ ಮುರುಗೇಶ್ ಕುಂಬಾರ ಎಂದು ತಿಳಿದು ಬಂದಿದ್ದು ಈತನ ನಡವಳಿಕೆಯಿಂದ ಪೊಲೀಸ್ ಇಲಾಖೆಯಿಂದ 2002ರಲ್ಲಿ ಕೆಲಸ ಕಳೆದುಕೊಂಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಮಹಾರಾಷ್ಟ್ರದ ಮಿರಜ್‌ನಲ್ಲಿ ನೆಲೆಸಿರುವ ಈತ ಸರ್ಕಾರಿ ಅಧಿಕಾರಿಗಳಿಗೆ ಇದೇ ರೀತಿಯಾಗಿ ಬೆದರಿಸಿ ಹಣ ವಸೂಲಿ ಮಾಡುವುದನ್ನೆ ತನ್ನ ವೃತ್ತಿ ಮಾಡಿಕೊಂಡಿರುವುದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ . ಈತನ ವಿರುದ್ಧ ರಾಜ್ಯದ ಹಲವು ಪೊಲೀಸ್ ಠಾಣೆಯಲ್ಲಿ 20ಕ್ಕೂ ಪ್ರಕರಣ ದಾಖಲಾಗಿದ್ದು ವಿಚಾರಣೆ ನಂತರ ಹೆಚ್ಚಿನ ಮಾಹಿತಿ ಹೊರ ಬರಲಿರುವುದಾಗಿ ನ್ಯಾಮತಿ ಪೊಲೀಸ್ ಠಾಣೆ ಪಿಐ, ಎನ್.ಎಸ್.ರವಿ ತಿಳಿಸಿದ್ದಾರೆ.