ಚನ್ನಗಿರಿ: ಸಮಾಜಕ್ಕೆ ಸಮಾನತೆಯ ಅವಕಾಶದ ಭೂಮಿ ಒದಗಿಸಿದವರು ಬಸವಾದಿ ಶಿವ ಶರಣರು ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ. ಗುರುಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ 855 ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಹಾಗೂ ಸರ್ವ ಶರಣ ಶರಣಿಯರ ಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಅಂದಿನ ಸಮಾಜದಲ್ಲಿ ಬೇರು ಬಿಟ್ಟಿದ್ದ ಅಂದಕಾರ, ಕಂದಾಚಾರ ಮೂಢನಂಬಿಕೆ ಅಸ್ಪೃಶ್ಯತೆ ಮೇಲು, ಕೀಳು ಬಡವಬಲ್ಲಿದ, ಸ್ತ್ರೀ, ಪುರುಷ, ಹಿರಿಯ ಕಿರಿಯ ಜಾತಿ ಮತ ಪಂಥ ವರ್ಗ ಬೇಧಗಳಿಗೆ ಅತ್ಯಂತ ಸುಳಿಗೆ ಸಿಕ್ಕು ನಗುತ್ತಿದ್ದ ಸಮಾಜ.
ಇಂತಹ ಸಮಾಜವನ್ನು ಅಂಧಕಾರದಿಂದ ಹೊರ ತಂದು ಸುಜ್ಞಾನದ ಬೀಜವನ್ನ ಬಿತ್ತಿದವರು 12ನೇ ಶತಮಾನದ ಶಿವಶರಣರು. ಸತ್ಯ ಶುದ್ಧ ಕಾಯಕದಿಂದ ತಾತ್ವಿಕ ತಲಾದಿಯಿಂದ ಸಾತ್ವಿಕ ಸಮಾಜ ನಿರ್ಮಾಣ ಮಾಡಿ ಅರಿವು ಆಚಾರ ವಿವೇಕದ ಮೂಲಕ ಸಂಗ್ರಹ ಬುದ್ಧಿಯನ್ನು ಹೊರತುಪಡಿಸಿ ದಾನ ದಾಸೋಹದ ಮೂಲಕ ಸಾಮಾಜಿಕ ಕಲ್ಯಾಣ ಮಾಡಿದವರು ಶರಣರು.
ಅರಮನೆಗಿಂತ ಅರಿವಿನ ಮನೆ ಮುಖ್ಯ. ಭೌತಿಕ ತೃಪ್ತಿಗಿಂತ ನೈತಿಕ ತೃಪ್ತಿ ಮುಖ್ಯ.. ಲಿಂಗವು ಜಾತಿಯ ಸೂಚಕವಲ್ಲ ಅದು ಜ್ಯೋತಿಯ ಸೂಚಕ. ಲೋಕಕ್ಕೆ ಜ್ಞಾನಿ ಮರಳು ಜ್ಞಾನಿಗೆ ಲೋಕ ಮರಳು ಎಂಬ ಸಂದೇಶಗಳನ್ನು ಶರಣರು ನೀಡಿರುವುದು ವಚನ ಸಾಹಿತ್ಯ ಎಂದು ಶ್ರೀಗಳು ಹೇಳಿದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ಧಾರವಾಡದ ನ್ಯಾಯವಾದಿಗಳು ಕೆ ಎಸ್ ಕೋರಿ ಶೆಟ್ಟರ್, ಇನ್‌ಸೈಟ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಜಿ ಬಿ ವಿನಯ್ ಕುಮಾರ್, ತಾ.ಪಂ. ಇ.ಓ.ಉತ್ತಮ, ಕನ್ನಡ ನಾಡು ಹಿತರಕ್ಷಣ ಸಮಿತಿ ರಾಜ್ಯಾಧ್ಯಕ್ಷರು ಕೆ ವಿ ಕೃಷ್ಣಮೂರ್ತಿ ಶರಣ ಜಿಎಸ್ ಶಿವಮೂರ್ತಿ, ಧನಂಜಯ್ ಟಿವಿ ಚಂದ್ರಪ್ಪ, ಗರಗ ಜಗದೀಶ ಉಪಸ್ಥಿತರಿದ್ದರು.