ದಾವಣಗೆರೆ: ಹುಬ್ಬಳ್ಳಿಯ ಯುವತಿ ಅಂಜಲಿ ಕೊಲೆ ಆರೋಪಿಯಿಂದ ಮತ್ತೊಂದು ಮಹಿಳೆಯ ಮೇಲೆ ಕೊಲೆಯತ್ನದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಬಳಿ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಕೊಲೆ ಆರೋಪಿ ವಿಶ್ವ ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದ ಹಲ್ಲೆಗೊಳಗಾದ ಮಹಿಳೆ ಲಕ್ಷ್ಮೀ ತುಮಕೂರಿನಿಂದ ಪ್ರಯಾಣ ಬೆಳೆಸಿದ್ದರು ಎಂದು ತಿಳಿದು ಬಂದಿದೆ.
ರೈಲಿನಲ್ಲಿ ಆತ ನೋಡುವ ದೃಷ್ಟಿ ಸರಿ ಇಲ್ಲ ಎಂದು ವಿಶ್ವನೊಂದಿಗೆ ಮಹಿಳೆ ಜಗಳ ಮಾಡಿಕೊಂಡಿದ್ದಾಳೆ.ಇದರಿಂದ ಸಿಟ್ಟಾಗಿದ್ದ ವಿಶ್ವ ಮಹಿಳೆ ಶೌಚಾಲಯಕ್ಕೆ ಹೋಗಿ ಬಾಗಿಲು ಒಪನ್ ಮಾಡುತ್ತಿದ್ದಂತೆ ಆಕೆಗೆ ವಿಶ್ವ ಚಾಕು ಹಾಕಿದ್ದಾನೆ.ಅದೃಷ್ಟವಶಾತ್ ಎಡಗೈಗೆ ಚಾಕು ತಗುಲಿದೆ, ಸ್ಥಳದಲ್ಲಿದ್ದ ಜನರು ಕೂಡಲೇ ಆತನನ್ನು ಹಿಡಿದು ಹೊಡೆದಿದ್ದಾರೆ.ಜನರಿಂದ ತಪ್ಪಿಸಿಕೊಳ್ಳಲು ಕೊಲೆ ಆರೋಪಿ ವಿಶ್ವ ರೈಲಿನಿಂದ ಧುಮುಕಿದ್ದಾನೆ.ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಬಳಿ ಆರೋಪಿ ವಿಶ್ವ ರೈಲಿನಿಂದ ಕೆಳಗೆ ದುಮುಕಿದ್ದಾನೆ.
ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ರೈಲ್ವೆ ಪೋಲೀಸರು ಅರೋಪಿಯನ್ನು ಹಾಗೂ ಹಲ್ಲೆಗೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಆಗ ಮಾಧ್ಯಮಗಳಲ್ಲಿ ವಿಶ್ವನ ಪೋಟೋ ನೋಡಿ ಕೊಲೆ ಅರೋಪಿ ಎಂದು ರೈಲ್ವೆ ಪೊಲೀಸರು ಗುರುತಿಸಿದ್ದಾರೆ. ಕೂಡಲೇ ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಲ್ಲೆಗೊಳಗಾದ ಮಹಿಳೆ ಲಕ್ಷ್ಮೀ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ತೆರಳಿದ್ದಾರೆ ಎನ್ನಲಾಗಿದೆ