ದಾವಣಗೆರೆ; ತಾಲ್ಲೂಕಿನ ‌ಗೋಣಿವಾಡದಲ್ಲಿರುವ ಸೋಮೇಶ್ವರ ವಸತಿಯುತ ವಿದ್ಯಾಲಯದ ಆವರಣದಲ್ಲಿ ಜ.5 ಹಾಗೂ 6 ರಂದು ಸಂಜೆ 5.45 ಕ್ಕೆ ಸೋಮೇಶ್ವರೋತ್ಸವ -2024 ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಎನ್. ಪ್ರಭಾವತಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಜ.5 ರಂದು‌ ನಡೆಯುವ ಸಮಾರಂಭದಲ್ಲಿ ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.ರಂಗಕರ್ಮಿ ಶ್ರೀನಿವಾಸ ಜಿ‌.ಕಪ್ಪಣ್ಣ ಉದ್ಘಾಟನೆ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ‌ ಡಿಡಿಪಿಐ ಜಿ.ಕೊಟ್ರೇಶ್, ಸರ್ ಎಂವಿ ಕಾಲೇಜಿನ ಕಾರ್ಯದರ್ಶಿ ಎಸ್ .ಜೆ ಶ್ರೀಧರ್,ನಿವೃತ್ತ ಸೇನಾಧಿಕಾರಿ ಡಾ.ಹಾಲೇಶ್ ,ಹಿರಿಯ ಪತ್ರಕರ್ತರಾದ ಬಾ.ಮ‌.ಬಸವರಾಜಯ್ಯ ಆಗಮಿಸಲಿದ್ದಾರೆ.

ಸೋಮೇಶ್ವರ ಸಿರಿ ಪ್ರಶಸ್ತಿಯನ್ನು ವಾಲ್ಮೀಕಿ ನಾಯಕ ವಿದ್ಯಾರ್ಥಿನಿಲಯದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀದೇವಿ ಮತ್ತು ಬಿ.ವೀರಣ್ಣ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.

ಜ.6 ರಂದು ಸಂಜೆ 5.45 ಕ್ಕೆ ನಡೆಯುವ ಸಮಾರಂಭದ ಉದ್ಘಾಟನೆಯನ್ನು ಮಾಜಿ ಸಚಿವ ಎಸ್.ಎ ರವೀಂದ್ರನಾಥ್ ಉದ್ಘಾಟನೆ ಮಾಡಲಿದ್ದಾರೆ.ಸಂಸದ ಜಿ.ಎಂ ಸಿದ್ದೇಶ್ವರ್ ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ.ಮುಖ್ಯ‌ಅತಿಥಿಗಳಾಗಿ ಶಾಸಕ ಕೆ.ಎಸ್ ಬಸವಂತಪ್ಪ,ಮಾಜಿ‌  ಮುಖ್ಯ ಸಚೇತಕ ಡಾ.ಎ.ಹೆಚ್ ಶಿವಯೋಗಿ ಸ್ವಾಮಿ,ಎನ್.ಎಂ.ಜೆ ಮುರುಗೇಶ್ ಆರಾಧ್ಯ,ಉಮೇಶ್ ಶೆಟ್ಟಿ,ಟಿ.ಕೆ ವೀರಪ್ಪ ಆಗಮಿಸಲಿದ್ದಾರೆ.ವಿದ್ಯಾಲಯದ ಅಧ್ಯಕ್ಷರಾದ ಹೆಚ್.ಆರ್ ಅಶೋಕ್ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆಂದರು.

ಇದೇ ವೇಳೆ ಎಸ್ ಎಸ್ ಎಲ್‌ಸಿಯಲ್ಲಿ ಶೇ 99.04 ಅಂಕ‌ಪಡೆದ ಶಾಲೆ ವಿದ್ಯಾರ್ಥಿನಿ ಕ್ರೀನಾ ಕೆ.ಎಸ್ ಅವರಿಗೆ ಸಾಧನ‌ಸಿರಿ ಪುರಸ್ಕಾರ ಮಾಡಲಾಗುವುದು ಎಂದರು.
ಸಮಾರಂಭದಲ್ಲಿ ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್ ಹಾಗೂ ಎಂ.ಡಿ‌.ಪಲ್ಲವಿಯವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆಡಳಿತಾಧಿಕಾರಿ ಎನ್.ಆರ್ ಹರೀಶ್ ಬಾಬು,ಮುಖ್ಯೋಪಾಧ್ಯಾಯರಾದ ಪಿ
ಮಾಲಾ ಇದ್ದರು.

Share.
Leave A Reply

Exit mobile version