ಅಶ್ಲೀಲ ಸಿ.ಡಿ. ಆರೋಪ ಪ್ರಕರಣ, ಹೈಕೋರ್ಟ್  ಡಿ.19ಕ್ಕೆ ಮುಂದೂಡಿ ಆದೇಶ.

ಬೆಂಗಳೂರು:

: ಮಾಜಿ ಸಚಿವ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅಶ್ಲೀಲ ಸಿ.ಡಿ. ಆರೋಪ ಪ್ರಕರಣದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಡಿ.19ಕ್ಕೆ ಮುಂದೂಡಿ ಆದೇಶಿಸಿದೆ. ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಿದ್ದರ ವಿರುದ್ಧ ಕೋರ್ಟ್ಗೆ ರಮೇಶ್ ಜಾರಕಿಹೊಳಿ ಕೋರ್ಟ್ ಹೋಗಿದ್ದರು. ನ್ಯಾ.ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿದ್ದು, ರಾಜ್ಯ ಸರ್ಕಾರವು ಇದುವರೆಗೂ ಲಿಖಿತ ವಾಸ್ತಾವಂಶ ಏನೆಂಬುದನ್ನು ಸಲ್ಲಿಸಿಲ್ಲ ಹಾಗೂ ನ್ಯಾಯಾಲಯದ ಹಿಂದಿನ ಆದೇಶಗಳನ್ನು ಸರಕಾರ ಪಾಲಿಸಿಲ್ಲ. ಸೂಚನೆ ಪಡೆಯಲು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು ಸಮಯ ಕೋರಿದ ಹಿನ್ನೆಲೆಯಲ್ಲಿ ಅರ್ಜಿ ಮುಂದೂಡಲಾಗಿದೆ


Share.
Leave A Reply

Exit mobile version