ದಾವಣಗೆರೆ : 23 ವರ್ಷಗಳ ಕಾಲ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿ ತಾಯ್ನಾಡಿಗೆ ಮರಳಿದ ದಾವಣಗೆರೆ ತಾಲ್ಲೂಕಿನ ಬಲ್ಲೂರು ಬಸವರಾಜ ಮುದೇನೂರು ರವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ಮಂಗಳವಾರ ಬೆಳಗ್ಗೆ 10.30 ಗಂಟೆಗೆ ಜನ ಶತಾಬ್ದಿ ರೈಲಿನಲ್ಲಿ ಆಗಮಿಸಿದ ಅವರನ್ನು ದಾವಣಗೆರೆ ಜಿಲ್ಲಾ ಪ್ಯಾರಾ ಮಿಲಿಟರಿ ಸಂಘ, ಜಿಲ್ಲಾ ರೈತರ ಒಕ್ಕೂಟ ಮತ್ತು ದೇಶಭಕ್ತ ಜನರು ಅರತಿ ಬೆಳಗಿ ಪುಷ್ಪಹಾರ ಹಾಕಿ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೈತಪರ ಹೋರಾಟಗಾರ ಕೊಳೇನಹಳ್ಳಿ ಬಿ ಎಂ ಸತೀಶ್ ರವರು ಮಾತನಾಡಿ, ನನ್ನ ಪಕ್ಕದ ಹಳ್ಳಿ ಬಲ್ಲೂರಿನ ಬಸವರಾಜ ಮುದೇನೂರು ರವರು ದೇಶದ ಗಡಿ ಪ್ರದೇಶ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಮೇಘಾಲಯ, ಅಸ್ಸಾಂ ಸೇರಿದಂತೆ ದೇಶದ ವಿವಿಧ ಗಡಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಅವರ ಸೇವಾವಧಿಯಲ್ಲಿ ವಿಶಿಷ್ಟ ಮತ್ತು ದೈರ್ಯ ಕಾರ್ಯಭಾರದ ಮೂಲಕ ಪ್ರಶಂಣೆಗೆ ಪಾತ್ರರಾಗಿದ್ದಾರೆ. ಇವರ ದೇಶ ನಿಷ್ಠೆ ಮೆಚ್ಚುವಂಥದ್ದು ಎಂದು ಹೇಳಿದರು.
ಮಾಜಿ ಮೇಯರ್ ಎಸ್.ಟಿ.ವಿರೇಶ್ ರವರು ಮಾತನಾಡಿ ಬಸವರಾಜ ಮುದೇನೂರು ರವರ ಕರ್ತವ್ಯ ನಿಷ್ಠೆ, ದೇಶಪ್ರೇಮ ಇಂದಿನ ಮಕ್ಕಳಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.
ಜಿಲ್ಲಾ ಪ್ಯಾರಾ ಮಿಲಿಟರಿ ಸಂಘದ ಮುಖಂಡರಾದ ಕೆ.ಆರ್.ಮಂಜನಾಯ್ಕ್, ಸುರೇಶರಾವ್, ಚನ್ನಬಸವಗೌಡ್ರು, ರೈತ ಮುಖಂಡರಾದ ಬಲ್ಲೂರು ಬಸವರಾಜ, ಜಡಗನಳ್ಳಿ ಚಿಕ್ಕಪ್ಪ, ಕನಗೊಂಡನಹಳ್ಳಿ ಎಸ್.ನಿಂಗಪ್ಪ, ಬಿಜೆಪಿ ಮುಖಂಡರಾದ ರಾಜು ನೀಲಗುಂದ, ಟಿಂಕರ್ ಮಂಜಣ್ಣ, ಟಿಪ್ಪುಸುಲ್ತಾನ್ ಮುಂತಾದವರು ಉಪಸ್ಥಿತರಿದ್ದರು.

Share.
Leave A Reply

Exit mobile version