ಬೆಂಗಳೂರು: ಪರಸ್ಪರ ಸೌಹಾರ್ದತೆ, ಸಹಬಾಳ್ವೆ, ಸಹನೆಯಿಂದ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಬೆಳೆಸಿಕೊಂಡರೆ ಸಮಾಜದ ಹಾಗೂ ದೇಶದ ಅಭಿವೃದ್ಧಿ ಸಾಧ್ಯ ಎಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಾದ ಉಪಾಧ್ಯಕ್ಷರಾದ ಎಸ್. ಆರ್ ಮೆಹರೋಜ್ ಖಾನ್ ರವರು ತಿಳಿಸಿದರು.

ನಗರದ ಕಬ್ಬನ್ ಪಾರ್ಕ್ ನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಹಶ್ಮಿ ಥಿಯೇಟರ್ ಪೋರಂ ಸಂಸ್ಥೆ ಕಾವ್ಯ, ನಾಟಕ, ಹಾಡು ಅನ್ನದ ಮೂಲಕ ಬಹುತ್ವ ಎಂಬ ಶೀರ್ಷಿಕೆ ಅಡಿಯಲ್ಲಿ ನಡೆದ “ಸೌಹಾರ್ದ ಸಂಭ್ರಮ” ಎಂಬ ಸುಂದರ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದರು.ಈ ಕಾರ್ಯಕ್ರಮ ವಿಶೇಷವಾಗಿದ್ದು ಪ್ರಸ್ತುತ ಕಾಲಘಟ್ಟದಲ್ಲಿ ಗಣರಾಜ್ಯೋತ್ಸ ಪ್ರಯುಕ್ತ ಇಂಥ ಕಾರ್ಯಕ್ರಮ ಆಯೋಜಿಸಿದ್ದು ವಿಶೇಷ ಎಂದು ಅಭಿಪ್ರಾಯಪಟ್ಟರು.

ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಿರುವ ನಮ್ಮ ದೇಶದಲ್ಲಿ ಕಲೆ, ಸಾಹಿತ್ಯ ಮತ್ತು ನಾಟಕ ಮೂಲಕ ಸಾಹಬಾಳ್ವೆ, ಸಹಜೀವನವನ್ನು ಕಾಣುತ್ತಿದ್ದೇವೆ. ಸಮಾಜದಲ್ಲಿ ನಾವು ಜವಾಬ್ದಾರಿಯಿಂದ ನಾವೆಲ್ಲರೂ ಒಂದೇ ಎಂಬುದನ್ನು ಈ ಕಾರ್ಯಕ್ರಮ ಇಂದು ಅನಾವರಣ ಮಾಡುವ ಮೂಲಕ ಹೊಸ ಅನುಭವ ನೀಡಿತು ಎಂದು ಯುವ ಸಮೂಹಕ್ಕೆ ತಿಳಿಸಿದರು.

ಮನುಷ್ಯನಾಗಿ ಹುಟ್ಟಿದ ಮೇಲೆ ರಕ್ತ ಸಂಬಂಧದಿಂದಲೇ ಸಂಬಂಧಿಕರಾಗಬೇಕೆಂದಿಲ್ಲ,
ಕೆಲವೊಮ್ಮೆ ಸಂದರ್ಭಕ್ಕೆ ಅನುಗುಣವಾಗಿ ಸ್ನೇಹ, ಪ್ರೀತಿ ವಾತ್ಸಲ್ಯದಿಂದಲೂ ಬಂಧುಗಲಾಗುತ್ತೇವೆ ಇಲ್ಲಿ ಜಾತಿ ಧರ್ಮಕ್ಕಿಂತ ನಾವು ನಮ್ಮವರು ಎಂದು ಪ್ರೀತಿಸುವ ಗುಣಬೇಕು ಇಂತ ಮಾನವೀಯ ಗುಣಗಳನ್ನು ಬೆಳಸಿಕೊಳ್ಳಲು ಇಂದಿನ ಯುವ ಜನತೆಗೆ ಕಲೆ, ನಾಟಕ, ಹಾಡುಗಳ ಮೂಲಕ ಹಶ್ಮಿ ಥಿಯೇಟರ್ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಎಸ್ ಆರ್ ಮೆಹರೋಜ್ ಖಾನ್ ರವರು ತಿಳಿಸಿದರು.

ಕಲೆಗೆ ಒಬ್ಬ ಮನುಷ್ಯನನ್ನು ಸಾಮಾಜಿಕವಾಗಿ ಹೇಗೆ ಬದುಕ ಬೇಕು ಎಂಬುದನ್ನು ತಿಳಿಸಿಕೊಡುವ ಶಕ್ತಿ ಇದೆ ಇದನ್ನು ಜನತೆಗೆ ಕಲಿಸಿಕೊಡುವ ಕೆಲಸವನ್ನು ಯುವ ಜನತೆ ಮೂಲಕ ಹಶ್ಮಿ ಥಿಯೇಟರ್ ಪೋರಂ ಮಾಡುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಹಶ್ಮಿ ಥಿಯೇಟರ್ ಪೋರಂ ನ ಪ್ರಮುಖರು, ಕಲಾವಿದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share.
Leave A Reply

Exit mobile version