ದಾವಣಗೆರೆ : ಬಿಗ್ ಬಾಸ್ 11 ನೇ ಸೀಸನ್ ಭಾನುವಾರ ಮುಗಿಯಲಿದ್ದು, ಬಹುತೇಕ ಹಾಡು ಹಕ್ಕಿ ಹನುಮಂತನಿಗೆ ಕಪ್ ಖಚಿತ ಎಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಜೊತೆಗೆ ರನ್ನರ್-ಅಪ್ ಹೆಸರು ಕೂಡ ಘೋಷಣೆ ಮಾಡಲಾಗಿದ್ದು, ತ್ರಿವಿಕ್ರಮ ರನ್ನರ್ ಅಫ್ ಆಗುವ ಸಾಧ್ಯತೆ ಹೆಚ್ಚಿದೆ. ಸಾಮಾನ್ಯವಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್‌ಬಾಸ್ ಕನ್ನಡ ಸೀಸನ್ 11ರ ಎಲ್ಲಾ ಮಾಹಿತಿ ಹಾಗೂ ದೃಶ್ಯಗಳು ಗೊತ್ತಾಗುವುದು ರಾತ್ರಿ 9:30ಕ್ಕೆ ಪ್ರಸಾರವಾಗುವ ಸಂಚಿಕೆಯಲ್ಲಿ ಬಿಟ್ಟರೆ ಪ್ರೋಮೋ ಮೂಲಕ ಮಾತ್ರ. ಹನುಮಂತ ಕೆಲ ಫಿನಾಲೆ ಟಿಕೆಟ್ ಟಾಸ್ಕ್ನಲ್ಲಿ ಗೆದ್ದಿದ್ದರು. ನಟ ಶರಣ್ ಹಾಗೂ ನಟಿ ಅದಿತಿ ಪ್ರಭುದೇವ ಅವರು ಟಿಕೆಟ್ ಟು ಫಿನಾಲೆ ಟಾಸ್ಕ್ ಗೆದ್ದ ಹನುಮಂತನಿಗೆ ಟಿಕೆಟ್ ನೀಡಿ ಶುಭ ಹಾರೈಸಿದ್ದರು.

ಮೊದಲ ಫೈನಲಿಸ್ಟ್

ಕನ್ನಡ ಸೀಸನ್ 11ರ ಮನೆಗೆ ಎಂಟ್ರಿ ಪಡೆದ ಸಿಂಗರ್ ಹನುಮಂತು ಸಾಕಷ್ಟು ಬಾರಿ ತನ್ನದೇ ಆಟವಾಡಿ, ಇತರರಿಗೆ ಚಳ್ಳೆಹಣ್ಣು ತಿನ್ನಿಸಿದ್ದ. ಅಷ್ಟೇ ಅಲ್ಲ ಮೊದಲ ಫೈನಲಿಸ್ಟ್ ಆಗಿ ಸಹ ಹೊರಹೊಮ್ಮಿದ್ದ. ಹನುಮಂತ ಮುಗ್ದ ಮಾತ್ರವಲ್ಲ, ತುಂಬಾ ಬುದ್ಧಿವಂತ ಕೂಡನಾಗಿದ್ದು, ತನ್ನದೇ ಆದ ತಂತ್ರ ಹೂಡಿದ್ದು, ತ್ರಿವಿಕ್ರಮ, ಮೋಕ್ಷಿತಾ, ಭವ್ಯ, ಹನುಮಂತ, ರಜತ್ ಫೈನಲ್‌ಗೆ ಹೋಗಿದ್ದು, ಭವ್ಯ ಈಗಾಗಲೇ ಹೊರ ಹೋಗಿದ್ದಾರೆ. ಈ ನಡುವೆ ತ್ರಿವಿಕ್ರಮ, ಹನುಮಂತ ನಡುವೆ ನೇರ ಸ್ಫರ್ಧೆ ಇದ್ದು, ಹನುಮಂತ ಗೆಲ್ಲುವ ಎಲ್ಲ ಲಕ್ಷಣಗಳಿದ್ದು, ಸೀಸನ್ 11ರ ವಿನ್ನರ್ ಆಗಲಿದ್ದಾನೆ.

ಒಟ್ಟಿನಲ್ಲಿ, ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯದ ಹಂತಕ್ಕೆ ಬಂದಿದೆ. ಸರಿಗಮಪ ಖ್ಯಾತಿಯ ಸಿಂಗರ್ ಹನುಮಂತು ಗೆಲುವು ನಿಶ್ಚಿತ ಎಂದು ಬಹಳಷ್ಟು ಮಂದಿ ಈಗಾಗಲೇ ನಿರ್ಧರಿಸಿದ್ದಾಗಿದೆ. ಸೋಷಿಯಲ್ ಮೀಡಿಯಾದಲ್ಲೂ ಹನುಮಂತನದೇ ಹವಾ ಜಾಸ್ತಿ ಇದೆ, ಜೊತೆಗೆ, ವೋಟಿಂಗ್ ಪ್ರಕ್ರಿಯೆಯಲ್ಲಿ ಕೂಡ ಹನುಮಂತ ಎಲ್ಲರಿಗಿಂತ ಮುಂದಿದ್ದಾರೆ ಎನ್ನಲಾಗಿದೆ. ಹೀಗಾಗಿ, ಸದ್ಯದ ಟ್ರೆಂಡ್ ಹನುಮಂತನ ಪರ ಇದ್ದು, ರಾತ್ರಿ ಯಾರು ವಿನ್ನರ್ ಎಂದು ಸ್ಪಷ್ಟವಾಗಲಿದೆ.

Share.
Leave A Reply

Exit mobile version