ಚನ್ನಗಿರಿ : ಸತತ ಪ್ರಯತ್ನದಿಂದ ಮಾತ್ರ ಏನಾನ್ನಾದರೂ ಸಾಧನೆ ಮಾಡಬಹುದು ಎಂದು ದಾವಣಗೆರೆ ಉಪನ್ಯಾಸಕ ಮಲ್ಲೇಶ್ ನಾಯ್ಕ್ ಹೇಳಿದರು.
ಚನ್ನಗಿರಿ ತಾಲೂಕಿನ ಮಣ್ಣಮ್ಮ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಫ್ರೆಶರ್ಸ್ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಾಧನೆ ಮಾಡುವುದು ಸುಲಭವಲ್ಲ. ಅದಕ್ಕಾಗಿ ಸತತ ಪ್ರಯತ್ನ ಬೇಕು. ಹಗಲು ರಾತ್ರಿ ಶ್ರಮಿಸಬೇಕು. ಹಾಗೆಯೇ ಗುರು ಹಿರಿಯರ ಆರ್ಶೀವಾದವಿರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಕೊಂಡರು. ಜೊತೆಗೆ ಮಣ್ಣಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜಪ್ಪ ರವರ ವಯೋ ನಿವೃತ್ತಿ ಬಿಳ್ಕೊಡುಗೆ ಸಮಾರಂಭವು ಜರುಗಿತು. ಅಧ್ಯಕ್ಷತೆಯನ್ನು ಮಣ್ಣಮ್ಮ ವಿದ್ಯಾಸಂಸ್ಥೆ ಮುಖ್ಯಸ್ಥ ಸುರೇಶ್ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಡಿಡಿಪಿಯು ಶಿವರಾಜ್ ಎಂ ನಿವೃತ್ತ ಪ್ರಾಂಶುಪಾಲರು ಕರಿಯಪ್ಪ ,ನಾಗಯ್ಯ, ಸಿದ್ದೇಶ್, ಪುಷ್ಪಲತಾ ಮತ್ತು ಕಾಲೇಜಿನ ಉಪನ್ಯಾಸಕರಾದ ನಾಜಿಯಾ ಅಂಜುಮ್, ಚೈತ್ರ ,ಜಗದೀಶ್ ,ಅಣ್ಣಯ್ಯ ವಾಣಿಜ್ಯ ಉಪನ್ಯಾಸಕರು , ದೇವಸೇನಾ ನಾಯ್ಕ ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ತಮ್ಮ ಸೇವೆಯಿಂದ ವಯೋ ನಿವೃತ್ತಿ ಗೊಂಡಂತಹ ಶ ಮಂಜಪ್ಪರವರನ್ನು ನೀತಿಗೆರೆ ಗ್ರಾಮಸ್ಥರು ಹಾಲಿ ಮತ್ತು ನಿವೃತ್ತ ಪ್ರಾಂಶುಪಾಲರುಗಳು ಮತ್ತು ನೂರಾರು ವಿದ್ಯಾರ್ಥಿಗಳು ಸನ್ಮಾನಿಸಿದರು.