Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»ಪ್ರಮುಖ ಸುದ್ದಿ»ನಗರೀಕರಣ, ಕಟ್ಟಡ ಕಾಮಗಾರಿಗಳು, ರಸ್ತೆ ಧೂಳಿನಿಂದ ಪಿಎಂ 10 ಧೂಳಿನ ಪ್ರಮಾಣವು ಗಣನೀಯ ಹೆಚ್ಚಳ ಧೂಳು, ವಾಹನಗಳಿಂದ ಶೇ. 16.9ರಷ್ಟು ಮಾಲಿನ್ಯ.
ಪ್ರಮುಖ ಸುದ್ದಿ

ನಗರೀಕರಣ, ಕಟ್ಟಡ ಕಾಮಗಾರಿಗಳು, ರಸ್ತೆ ಧೂಳಿನಿಂದ ಪಿಎಂ 10 ಧೂಳಿನ ಪ್ರಮಾಣವು ಗಣನೀಯ ಹೆಚ್ಚಳ ಧೂಳು, ವಾಹನಗಳಿಂದ ಶೇ. 16.9ರಷ್ಟು ಮಾಲಿನ್ಯ.

davangerevijaya.comBy davangerevijaya.com17 December 2024No Comments3 Mins Read
Facebook WhatsApp Twitter
Share
WhatsApp Facebook Twitter Telegram

ಬೆಂಗಳೂರು.

ನಗರದಲ್ಲಿ ನಿಧಾನಗತಿಯ ಸಂಚಾರ ದಟ್ಟಣೆ, ಬೃಹತ್ ವಾಹನಗಳ ಓಡಾಟ, ಗುಂಡಿಗಳು, ಕಟ್ಟಡ ತ್ಯಾಜ್ಯ ಸೇರಿದಂತೆ ನಾನಾ ಕಾರಣಗಳಿಂದ ಧೂಳು ಹೆಚ್ಚಾಗಿದ್ದು, ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಆರೋಗ್ಯದ ಚಿಂತೆಯಾಗಿದೆ. ಅಲ್ಲದೇ ವಾಯುಮಾಲಿನ್ಯದ ಪ್ರಮಾಣ ಹೆಚ್ಚಳವಾಗಿದೆ.

ನಗರದ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು, ರಸ್ತೆ ಪಕ್ಕದಲ್ಲಿ ಕಾಮಗಾರಿಗೋಸ್ಕರ ಗುಂಡಿಗಳನ್ನು ತೆಗೆದ ಕಾರಣ ವಾಹನಗಳ ಸಂಚಾರದ ವೇಳೆ ವಿಪರೀತ ಧೂಳು ಏಳುತ್ತಿದೆ. ಇದರಿಂದ ಗಾಳಿಯಲ್ಲಿ ತೇಲಾಡುವ ಧೂಳಿನ ಕಣಗಳ ಪ್ರಮಾಣವು ಮಿತಿ ಮೀರಿದ್ದು, ರಸ್ತೆ ಗುಂಡಿಗಳು ವಾಯುಮಾಲಿನ್ಯಕ್ಕೆ ಶೇ. 16.9ರಷ್ಟು ಕೊಡುಗೆ ನೀಡುತ್ತಿವೆ. ಇದರಿಂದ ಜನರು ಉಸಿರಾಡುವುದೇ ಕಷ್ಟವಾಗಿದೆ.

ನಗರದ ವಾಯುಮಾಲಿನ್ಯಕ್ಕೆ ಕಾರಣವಾದ ಮೂಲಗಳ ಪತ್ತೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸೆಂಟರ್ ಫಾರ್ ಸ್ಟಡಿ ಫಾರ್ ಸೆನ್ಸ್ ಟೆಕ್ನಾಲಜಿ ಆಂಡ್ ಪಾಲಿಸಿ (ಸಿಎಸ್‌ಟಿಇಪಿ) ಸಹಭಾಗಿತ್ವದಲ್ಲಿ ಕೈಗೊಂಡ ಅಧ್ಯಯನ ವರದಿಯಲ್ಲಿ ಈ ಅಂಶವು ಬೆಳಕಿಗೆ ಬಂದಿದೆ.

ಆರು ಹಂತಗಳಲ್ಲಿ ಗುರುತಿಸುವಿಕೆ.

ನಗರದ 11 ನಿರಂತರ ಪರಿವೇಷ್ಠಕ ವಾಯುಮಾಪನ ಕೇಂದ್ರಗಳ ವರದಿ ಪ್ರಕಾರ ಪಿಎಂ 10 ಹೊರತುಪಡಿಸಿ, ಉಳಿದ ಮಾನಕಗಳು ರಾಷ್ಟ್ರೀಯ ಮಿತಿ ಮೀರಿಲ್ಲ. ವಾಯು ಗುಣಮಟ್ಟವನ್ನು ಸೂಚ್ಯಂಕಗಳ ಆಧಾರದಲ್ಲಿ ಉತ್ತಮ, ಸಮಾಧಾನಕರ, ಸಾಧಾರಣ, ಕಳಪೆ, ತೀರಾ ಕಳಪೆ, ಗಂಭೀರ ಎಂಬ ಆರು ಸ್ತರಗಳಲ್ಲಿ ಗುರುತಿಸಲಾಗುತ್ತದೆ. ವಾತಾವರಣದಲ್ಲಿರುವ ಪಿಎಂ 2.5, ಗಂಧಕದ ಡೈ ಆಕ್ಸೈಡ್, ಸಾರಜನಕದ ಡೈ ಆಕ್ಸೈಡ್ ಹಾಗೂ ಅಮೋನಿಯಾ ಪ್ರಮಾಣದ ಆಧಾರದಲ್ಲಿ ವಾಯುಗುಣಮಟ್ಟದ ಸೂಚ್ಯಂಕವನ್ನು ನಿರ್ಧರಿಸಲಾಗುತ್ತದೆ.

ರಸ್ತೆ ಧೂಳಿನಿಂದ ಮಾಲಿನ್ಯ

ಸಿಲಿಕಾನ್ ಸಿಟಿಯ ಅನೇಕ ಪ್ರದೇಶಗಳು ಉತ್ತಮ ಗುಣಮಟ್ಟದ ಹಿರಿಮೆ ಕಳಚಿಕೊಂಡು ಈಗಾಗಲೇ ಸಮಾಧಾನಕರ ಹಂತಕ್ಕೆ ಜಾರಿವೆ. ಕೆಲ ಪ್ರದೇಶಗಳು ಸಾಧಾರಣ ಸ್ತರದ ಹೊಸ್ತಿಲು ದಾಟಿವೆ. ನಗರದ ವಾತಾವರಣದಲ್ಲಿ ಗಂಧಕದ ಡೈ ಆಕ್ಸೈಡ್, ಅಮೋನಿಯಾ, ನೈಟ್ರೇಟ್‌ಗಳ ಪ್ರಮಾಣ ರಾಷ್ಟ್ರೀಯ ಮಿತಿಗಳಿಗಿಂತ ಕಡಿಮೆಯೇ ಇದೆ. ಗಾಳಿಯಲ್ಲಿ ತೇಲಾಡುವ ಧೂಳಿನ ಕಣಗಳು (ಪಿಎಂ 10) ಒಂದು ಸಾವಿರ ಲೀಟರ್ ಗಾಳಿಯಲ್ಲಿ 10 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಧೂಳಿನ ಕಣಗಳ (ಪಿಎಂ 10) ಪ್ರಮಾಣವು 60 ಮೈಕ್ರೊ ಗ್ರಾಂ ಮೀರಬಾರದು. ಆದರೆ, ನಗರೀಕರಣ, ಕಟ್ಟಡ ಕಾಮಗಾರಿಗಳು, ರಸ್ತೆ ಧೂಳಿನಿಂದ ಪಿಎಂ 10 ಪ್ರಮಾಣವು ಗಣನೀಯವಾಗಿ ಹೆಚ್ಚಾಗಿದೆ. ನಗರದ ಹಲವೆಡೆ ಇದರ ಪ್ರಮಾಣವು ರಾಷ್ಟ್ರೀಯ ಮಿತಿಗಿಂತ ತೀರಾ ಜಾಸ್ತಿ ಇದೆ. ವಾಯುಗುಣಮಟ್ಟ ಕುಸಿಯಲು ರಸ್ತೆ ಗುಂಡಿಗಳ ಪಾತ್ರವೇ ಹೆಚ್ಚಾಗಿದೆ.

ಕಸಕ್ಕೆ ಬೆಂಕಿ, ಹೆಚ್ಚುತ್ತಿರುವ ಮಾಲಿನ್ಯ

ಬಿಬಿಎಂಪಿಯು ತ್ಯಾಜ್ಯ ಸಂಗ್ರಹ, ಸಾಗಣೆ ಮತ್ತು ವಿಲೇವಾರಿಗಾಗಿ ಕೋಟ್ಯಂತರ ರೂ. ವ್ಯಯಿಸುತ್ತಿದೆ. ಆದರೆ, ಹೊರವಲಯದಲ್ಲಿಸಮರ್ಪಕವಾಗಿ ಕಸ ಸಂಗ್ರಹಿಸಿ, ವಿಲೇವಾರಿ ಮಾಡುವ ಕೆಲಸ ಮಾಡುತ್ತಿಲ್ಲ. ಹೀಗಾಗಿ, ಸಾರ್ವಜನಿಕರು ಕಸಕ್ಕೆ ಬೆಂಕಿ ಇಟ್ಟು ಸುಡುತ್ತಿದ್ದಾರೆ. ಇದರಿಂದ ಶೇ. 5.9ರಷ್ಟು ಮಾಲಿನ್ಯ ಉಂಟಾಗುತ್ತಿರುವುದು ಸಿಎಸ್‌ಟಿಇಪಿ ಅಧ್ಯಯನ ವರದಿಯಿಂದ ಬಯಲಾಗಿದೆ.

ಕಸ ಸುಡುವುದರಿಂದಾಗುತ್ತಿರುವ ಮಾಲಿನ್ಯ ತಡೆಗೆ ಬಿಬಿಎಂಪಿ ವ್ಯಾಪ್ತಿಯ ಪ್ರದೇಶಗಳು, ಭೂಭರ್ತಿ ಘಟಕಗಳಲ್ಲಿ ತ್ಯಾಜ್ಯಕ್ಕೆ ಬೆಂಕಿ ಇಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಟ್ಟಡಗಳ ನಿರ್ಮಾಣ ಮತ್ತು ಕಟ್ಟಡಗಳ ತೆರವು ಸಂದರ್ಭದಲ್ಲಿ ಸಂಗ್ರಹವಾಗುವ ಅವಶೇಷಗಳನ್ನು ವಾಹನಗಳಲ್ಲಿ ಸಾಗಿಸುವಾಗ ತ್ಯಾಜ್ಯ ಹೊರಗೆ ಚೆಲ್ಲದಂತೆ ಹಾಗೂ ಅದಕ್ಕೆ ನೀರನ್ನು ಸಿಂಪಡಿಸಿ ಯಾವುದೇ ಮಾಲಿನ್ಯ ಉಂಟಾಗದAತೆ ಕ್ರಮ ಕೈಗೊಳ್ಳುವಂತೆ ವಿವಿಧ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಪರಿಸರ ನಿರಾಕ್ಷೇಪಣಾ ಪ್ರಮಾಣಪತ್ರ ನೀಡುವಾಗಲೇ ಧೂಳಿನ ಕಣಗಳಿಂದ ಉಂಟಾಗುವ ಮಾಲಿನ್ಯ ತಡೆಗೆ ಸುತ್ತಲೂ ತಗಡಿನ ಶೀಟ್‌ಗಳನ್ನು ಅಳವಡಿಸುವುದು, ನೀರು ಸಿಂಪಡಣೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದ್ದರೂ ಪ್ರಯೋಜನವಿಲ್ಲ

ವಾಹನಗಳಿಂದಲೇ ಹೆಚ್ಚು ವಾಯುಮಾಲಿನ್ಯ.

ನಗರದಲ್ಲಿ ವಾಯುಗುಣಮಟ್ಟ ಹದಗೆಡಲು ವಾಹನಗಳ ಕೊಡುಗೆಯೂ ಹೆಚ್ಚಿದೆ. ಮೆಟ್ರೋ ರೈಲು, ವಿದ್ಯುತ್‌ಚಾಲಿತ ವಾಹನಗಳ ಸಂಖ್ಯೆ ಜಾಸ್ತಿಯಾದರೂ ಮಾಲಿನ್ಯ ಪ್ರಮಾಣ ತಗ್ಗಿಲ್ಲ. ಮಾಲಿನ್ಯ ನಿಯಂತ್ರಣಕ್ಕಾಗಿ ಕೆಎಸ್‌ಪಿಸಿಬಿಯು ಡೀಸೆಲ್ ಮತ್ತು ಪೆಟ್ರೋಲ್ ಚಾಲಿತ ವಾಹನಗಳು ಹೊರಸೂಸುವ ಹೊಗೆಯನ್ನು ಮಾಪನ ಮಾಡಲು ಸುಸಜ್ಜಿತ ಉಪಕರಣಗಳನ್ನೊಳಗೊಂಡ 6 ವಾಹನಗಳನ್ನು ನಗರಕ್ಕೆ ಹಂಚಿಕೆ ಮಾಡಿದೆ. ಈ ವಾಹನಗಳು ಸಾರಿಗೆ ಇಲಾಖೆ, ಪೊಲೀಸ್, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸಹಭಾಗಿತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು, ಮಿತಿಗಿಂತ ಹೆಚ್ಚು ಹೊಗೆ ಹೊರಸೂಸುವ ವಾಹನಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ ಮಾಲಿನ್ಯ ಹೆಚ್ಚಾಗುತ್ತಿದೆ.
—
ವಾಯುಗುಣಮಟ್ಟ ಸಾಧಿಸದ ನಗರ.

ಕೇಂದ್ರದ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮವನ್ನು ಜಾರಿ ಮಾಡಿದೆ. ರಾಜ್ಯದ ನಾಲ್ಕು ನಗರಗಳಾದ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮತ್ತು ದಾವಣಗೆರೆಯನ್ನು ರಾಷ್ಟ್ರೀಯ ಪರಿವೇಷ್ಠಕ ವಾಯುಗುಣಮಟ್ಟ ಸಾಧಿಸದ ನಗರಗಳೆಂದು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಸ್‌ಟಿಇಪಿ ಅಧ್ಯಯನ ವರದಿ ಆಧರಿಸಿ ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ 44 ಅಂಶಗಳ ಕ್ರಿಯಾಯೋಜನೆಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿAದ ಸಿದ್ಧಪಡಿಸಿ, ಅನುಷ್ಠಾನಗೊಳಿಸಲಾಗುತ್ತಿದೆ.

ಮಾಲಿನ್ಯ ಪ್ರಮಾಣ ಯಾವುದರಿಂದ ಎಷ್ಟು (ಶೇಕಡಾವಾರು)
ರಸ್ತೆಧೂಳು-16.9%
ಸಾರಿಗೆ-50.6%
ಕಟ್ಟಡನಿರ್ಮಾಣ ಮತ್ತು ತೆರವು ಚಟುವಟಿಕೆ-11%
ತ್ಯಾಜ್ಯ ಸುಡುವುದು-5.9%
ಕೈಗಾರಿಕೆಗಳು-01%

ಮಾಪನ ಕೇಂದ್ರಗಳ ದತ್ತಾಂಶ.

ಐಟಿಪಿಎಲ್ ಬಳಿಯ ಗ್ರಾಫೈಟ್ ಇಂಡಿಯಾ 83
ಮೈಸೂರು ರಸ್ತೆಯ ಅಮ್ಕೊ ಬ್ಯಾಟರೀಸ್ 63
ಯಶವಂತಪುರ ಪೊಲೀಸ್ ಠಾಣೆ 92
ವಿಕ್ಟೋರಿಯಾ ಆಸ್ಪತ್ರೆ 58
ದೊಮ್ಮಲೂರಿನ ಟಿಇಆರ್‌ಐ ಕಚೇರಿ 67
ಪೀಣ್ಯ ಎಸಿಇ ಡಿಸೈನರ್ಸ್ 52
ಯಲಹಂಕದ ರೈಲ್ವೆ ಗಾಲಿ ಕಾರ್ಖಾನೆ 40
ಸೆಂಟ್ರಲ್ ಸಿಲ್ಕ್ ಬೋರ್ಡ್ 71
ಮಹದೇವಪುರದ ಕಾಜಿಸೊಣ್ಣೆನಹಳ್ಳಿ 78
ಪೀಣ್ಯ ಕೈಗಾರಿಕಾ ಪ್ರದೇಶದ ಅರ್ಬನ್ ಇಕೋ ಪಾರ್ಕ್ 85
ದೊಮ್ಮಲೂರು 2ನೇ ಹಂತದ ಟಿಇಆರ್‌ಐ ಕಚೇರಿ 67.

“ಪ್ರತಿದಿನ, ನಾನು 7.5 ಕಿಮೀ ದೂರದಲ್ಲಿ ಪ್ರಯಾಣಿಸುತ್ತೇನೆ ಮತ್ತು ನನ್ನ ಪರ್ಯಾಯ ಮಾರ್ಗವು ಹೆಚ್ಚಿನ ಸಿಗ್ನಲ್‌ಗಳನ್ನು ಹೊಂದಿದ್ದರೂ, ನಾನು ಕನಿಷ್ಠ 20 ನಿಮಿಷಗಳಷ್ಟು ವೇಗವಾಗಿ ಕಚೇರಿಯನ್ನು ತಲುಪುತ್ತೇನೆ. ಇತರ ರಸ್ತೆಯು ಮೂರು ತಿಂಗಳಿನಿAದ ಭಯಾನಕವಾಗಿದೆ, ಸೋನಿ ವರ್ಲ್ಡ್ ಸಿಗ್ನಲ್‌ಗೆ ಹತ್ತಿರದಲ್ಲಿ ಸಾಕಷ್ಟು ಧೂಳು ಹೆಚ್ಚು ಭಯಾನಕವಾಗಿಸುತ್ತದೆ,
-ದೀಪಾ, ಸವಾರರು

feauchre Top News
Share. WhatsApp Facebook Twitter Telegram
davangerevijaya.com
  • Website

Related Posts

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,651 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,321 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,083 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,586 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
ಪ್ರಮುಖ ಸುದ್ದಿ

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

By davangerevijaya.com12 June 20250

*ದಾವಣಗೆರೆಯಲ್ಲಿ ಅಂಚೆ  ವಿಭಾಗೀಯ  ಕಚೇರಿ ಬರಲು ಇವರು ಕಾರಣ * ದಾವಣಗೆರೆ ಅಂಚೆ ಇಲಾಖೆ ಪ್ರಥಮ ಅಧೀಕ್ಷಕ *ನಿಷ್ಠೆ, ಪ್ರಾಮಾಣಿಕತೆಯಿಂದ…

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025

ನೊಂದವರ ಕಷ್ಟಕ್ಕೆ ಸ್ಪಂದಿಸಲು‌ ಅಧಿಕಾರಿಗಳಿಗೆ ಸಲಹೆ: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

10 June 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,651 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,321 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,083 Views

Subscribe to Updates

Get the latest creative news from SmartMag about art & design.

Recent Posts
  • ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.
  • ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ
  • ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?
  • ನೊಂದವರ ಕಷ್ಟಕ್ಕೆ ಸ್ಪಂದಿಸಲು‌ ಅಧಿಕಾರಿಗಳಿಗೆ ಸಲಹೆ: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
  • ಆರ್ ಸಿಬಿ ವಿಜಯೋತ್ಸವ ವೇಳೆ 11 ಜನರ ಸಾವು : ಸಿಬಿಐಗೆ ವಹಿಸಲು ಮಾಜಿ ಸಚಿವ ಒತ್ತಾಯ
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.