
ಶಿವಮೊಗ್ಗ; ನಗರದ ನೆಹರು ಸ್ಟೇಡಿಯಂ ಒಳಾಂಗಣ ಕ್ರೀಡಾಂಗಣದಲ್ಲಿ ಶೆಟಲ್ ಬ್ಯಾಟ್ಮಿಟನ್ ಆಡುತ್ತಿದ್ದಾಗ ಹೃದಯಾಘಾತದಿಂದ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಶಿವಮೊಗ್ಗ ಸೈಕಲ್ ಕ್ಲಬ್ನ ಸದಸ್ಯ ಹಾಗೂ ಶಟಲ್ ಬ್ಯಾಟ್ಮಿಟನ್ ಪ್ಲೇಯರ್. ಸುರಹೊನ್ನೆ ಮಲ್ಲಿಕಾರ್ಜುನ್ (50) ಮೃತಪಟ್ಟವರು. ಇವರಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದು. ಪತ್ನಿ ಕೆಇಬಿನಲ್ಲಿ ಅಧಿಕಾರಿಯಾಗಿದ್ದಾರೆ. ಮಲ್ಲಿಕಾರ್ಜುನ್ ಅವರು ಮೊದಲು ಜಿಲ್ಲಾ ಪಂಚಾಯಿತಿ, ಪ್ರಸ್ತುತ ಡಯಟ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಇವರಿಗೆ ಶಿವಮೊಗ್ಗ ಸೈಕಲ್ ಕ್ಲಬ್ ನ. ಅಧ್ಯಕ್ಷ ಶ್ರೀಕಾಂತ್ ಭಾರದ್ವಾಜ್.ಹಾಗೂ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರಣೋದಯ ಘಟಕ. ವಾಗೀಶ್. ಮತ್ತು ರೋಟರಿ ಸಂಸ್ಥೆ ಜಿ ವಿಜಯಕುಮಾರ್ ನರಸಿಂಹಮೂರ್ತಿ ಶಟಲ್ ಬ್ಯಾಟ್ಮಿಟನ್ ಆಟಗಾರರು ಹಾಗೂ ಸುರಹೊನ್ನೇ ಗ್ರಾಮಸ್ಥರು ತೀರ್ವ ಸಂತಾಪ ವ್ಯಕ್ತಪಡಿಸಿದ್ದಾರೆ