ಭದ್ರಾವತಿ : ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಪುರುಷರ ಕಬ್ಬಡಿ ಕ್ರೀಡಾಕೂಟ ಕಡೂರಿನಲ್ಲಿ ನಡೆದಿದ್ದು, ನಗರದ ಸರ್ ಎಂವಿ ಕಾಲೇಜು ದ್ವೀತಿಯ ಸ್ಥಾನ ಪಡೆದಿದೆ.
ಈ ಕಬ್ಬಡಿ ಕ್ರೀಡಾಕೂಟ ಭಾರಿ ರೋಚಕವಾಗಿದ್ದು, ಅಂತಿಮ ಹಣಾಹಣಿಯಲ್ಲಿ ಸರ್ ಎಂವಿ ಕಾಲೇಜು ಜಯಗಳಿಸಿದೆ. ಹಲವಾರು ದಿನಗಳಿಂದ ಕ್ರೀಡಾಪಟುಗಳು ಈ ಕಬ್ಬಡಿ ಆಟವನ್ನು ಅಭ್ಯಾಸ ಮಾಡಿದ್ದರು. ಅಂತಿಮವಾಗಿ ಜಯಗಳಿಸುವ ಮೂಲಕ ಭದ್ರಾವತಿಗೆ ಕೀರ್ತಿ ತಂದಿದ್ದಾರೆ.ಈ ವಿಜಯಶಾಲಿ ತಂಡಕ್ಕೆ ತರಬೇತುದಾರರಾಗಿ ಕಾಲೇಜಿನ ದೈಹಿಕ ನಿರ್ದೇಶಕ ಕೆಎಂ ಮಹೇಶ್ ಕುಮಾರ್, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ಕಾಲೇಜು ಪ್ರಾಂಶುಪಾಲರು, ಬೋಧಕ, ಬೋಧಕತೇರ ವರ್ಗ ಅಭಿನಂದನೆ ಸಲ್ಲಿಸಿದೆ.