ಭದ್ರಾವತಿ : ಭದ್ರಾವತಿ ತಾಲೂಕು ಘಟಕದ ವೀರಶೈವ ಮಹಾಸಭಾ ಚುನಾವಣೆ ಜಿದ್ದಾಜಿದ್ದಿಯಿಂದ ನಡೆಯುತ್ತಿದ್ದು, ಮೊದಲಿಗೆ 200 ಮತಗಳು ತಿರಸ್ಕೃತಗೊಂಡಿವೆ.
ಈಗಾಗಲೇ ವಾಗೀಶ್ ಬಣ ಹಾಗೂ ವಿಜಯ್ ಕುಮಾರ್ ಬಣ, ನಿರ್ದೇಶಕರ ಸ್ಥಾನಕ್ಕೆ ಇಬ್ಬರು ಪಕ್ಷೇತರರು ನಿಂತಿದ್ದು, 1195 ಮತ ಚಲಾವಣೆಯಾಗಿದ್ದವು. ಇದರಲ್ಲಿ 200 ಮತಗಳು ತಿರಸ್ಕೃತಗೊಂಡಿವೆ.
ಎರಡು ತಂಡಗಳು ಬಲಿಷ್ಠವಾಗಿದ್ದು, ಈ 200 ಮತಗಳು ಯಾರ ಪಾಲಿಗೆ ಅದೃಷ್ಟ ತರುತ್ತವೆ, ಯಾರ ಪಾಲಿಗೆ ಮುಳ್ಳಾಗುತ್ತವೆ ಗೊತ್ತಾಗುತ್ತಿಲ್ಲ. ಕನಿಷ್ಠ 21 ಮತಗಳನ್ನು ಮಾತ್ರ ಹಾಕಬೇಕಿದ್ದು, ಹಲವರು ಇದಕ್ಕಿಂತ ಹೆಚ್ಚಿಗೆ ಮತಗಳನ್ನು ಹಾಕಿದ್ದಾರೆ ಪರಿಣಾಮ ಮತಗಳು ತಿರಸ್ಕೃತಗೊಂಡಿವೆ.
ಎರಡು ಬಣಗಳು ಕೂಡ ಅಷ್ಟೇ ಎಫೆಕ್ಟ್ ಆಗಿ ಚುನಾವಣೆ ಮಾಡಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವ, ಢವ ಶುರುವಾಗಿದೆ. ಕೆಲವರು ಮೌನಕ್ಕೆ ಶರಣಾದರೆ, ಇನ್ನೂ ಕೆಲವರು ಗೆಲುವಿಗಾಗಿ ಮನಸ್ಸಿನಲ್ಲಿಯೇ ಹರಕೆ ಹೊತ್ತಿದ್ದಾರೆ. ಮೊದಲ ಬಾರಿ ಚುನಾವಣೆ ನಡೆಯತ್ತಿರುವ ಕಾರಣ ಕುತುಹೂಲದಲ್ಲಿ ಎರಡು ಕಡೆಯವರು ಇದ್ದಾರೆ.
ಮೂರು ಬೂತ್ ಗಳನ್ನು ಮಾಡಲಾಗಿದ್ದು, ಹಾವು, ಏಣಿ ಆಟ ಶುರುವಾಗಿದೆ. ಇನ್ನು ತಂಡಗಳ ಅಭಿಮಾನಿಗಳು ಪೋನ್ ಲೀಡ್ ಯಾವುದು ಇದೆ, ಯಾರು ಮುಂದೆ ಇದ್ದಾರೆ, ಯಾವ ತಂಡ ಮುಂದೆ ಇದೆ ಎಂದು ಕುತುಹೂಲದಿಂದ ಕಾಯುತ್ತಿದ್ದಾರೆ.