ಶಿವಮೊಗ್ಗ: ಹಿಂದುತ್ವಕ್ಕೆ ಸಿಕ್ಕ ಗೆಲುವು ಇದಾಗಿದೆ. ಕಾರ್ಯಕರ್ತರ ಗೆಲುವು ಇದಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು. ಬಿಜೆಪಿ ಕಚೇರಿ ಎದರು ಮಾತನಾಡಿದ ಅವರು, ಮತದಾರರು ಅಪಪ್ರಚಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತ ಎಂದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ ದೇವಿಯ ಮೂಕಾಂಬಿಕೆ ಆಶೀರ್ವಾದಿಂದ ರಾಘವೇಂದ್ರ ಗೆಲುವು ಸಾಧಿಸಿದ್ದಾರೆ. ಪಕ್ಷ ಸಿದ್ಧಾಂತಕ್ಕೆ, ಕಾರ್ಯಕರ್ತರ ಶ್ರಮಕ್ಕೆ ಸಂದ ಜಯ ಇದಾಗಿದೆ. ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಆರಗ ಜ್ಞಾನೇಂದ್ರ, ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಹರತಾಳು ಹಾಲಪ್ಪ, ದತ್ತಾತ್ರಿ, ಮಲ್ಲಿಕಾರ್ಜುನ ಹಕ್ರೆ, ಮೊದಲಾದವರು ಇದ್ದರು.