ಶಿವಮೊಗ್ಗ ; ಇತ್ತೀಚೆಗೆ ನಗರದಲ್ಲಿ ಮೂರು ಕೊಲೆಯಾದ ಬೆನ್ನೇಲ್ಲೆ ಪುನಃ ಈಗ ರೌಡಿಗಳು ಕ್ರೂರತೆ ಮೆರೆದಿದ್ದಾರೆ. ಮಧ್ಯ ರಾತ್ರಿ ಲಾಂಗ್,ಮಚ್ಚುಗಳಿಂದ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳ ಗಾಜನ್ನು ಒಡೆದಿದ್ದಾರೆ.
ಹೊಸಮನೆ ಮೂರನೇತಿರುವಿನ ಬಳಿಯಿರುವ ಮಾರಿಕಾಂಬ ದೇವಸ್ಥಾನದ ಡಾ.ಬಾಬು ಜಗಜೀವನ್ ರಾಮ್ ಸಮುದಾಯ ಭವನದ ಸುತ್ತಮುತ್ತಲಿನ ಮನೆಗಳ ಮುಂದೆ ನಿಲ್ಲಿಸಿರುವ ವಾಹನಗಳ ಗಾಜುಗಳನ್ನು ಒಡೆದು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.
ಸಮುದಾಯ ಭವನದ ಬಳಿ ನಿಲ್ಲಿಸಿದ್ದ ನಾಲ್ಕು ಕಾರು, ನಾಲ್ಕು ದ್ವಿಚಕ್ರ ವಾಹನ ಹಾಗೂ ಎರಡು ಆಟೋಗಳಿಗೆ ಹಾನಿಯಾಗಿದೆ.ಮದುವೆಗಾಗಿ ತುಮಕೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದ ರಂಗರಾಜು ಅವರಿಗೆ ಸೇರಿದ ಮಾರುತಿ ಸ್ವಿಫ್ಟ್ ಕಾರು, ಜಗದೀಶ್ ಅವರಿಗೆ ಸೇರಿದ ಅಂಗಡಿ ಬೀಗವನ್ನಮಚ್ಚಿನಿಂದ ಹೊಡೆದಿದ್ದಾರೆ.ಸಂದೇಶ್ ಅವರಿಗೆ ಸೇರಿದ ಹೂಂಡೈ ವರ್ಣ ಕಾರುಇನ ಹಿಂಭಾಗದ ಗ್ಲಾಜುಗಳು ಸಂಪೂರ್ಣ ಹಾನಿಗೊಳಗಾಗಿದೆ, ಇಲ್ಲಿಂದ ಸ್ವಲ್ಪ ಮುಙದೆ ಸ್ಯಾಂಟ್ರೋ ಕಾರನ್ನೂ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ, ಮಂಜ, ಲಿಂಗರಾಜು ಅವರಿಗೆ ಸೇರಿದ ಎರಡು ಆಟೋಗಳ ಗಾಜನ್ನ ಹೊಡೆದಿದ್ದಾರೆ.ಸಿದ್ದಪ್ಪ, ಜಗದೀಶ್, ಚಂದ್ರಪ್ಪ ಸೇರಿದಂತೆ ನಾಲ್ವರ ಬೈಕ್ ಗಳನ್ನ ಕಿಡಿಗೇಡಿಗಳು ಹಾಳು ಮಾಡಿದ್ದಾರೆ. ರಾತ್ರಿ ಹುಟ್ಟುಹಬ್ಬ ಆಚರಣೆಯ ವೇಳೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ಒಂದು ತಿಂಗಳ ಹಿಂದೆ ಹೊಸಮನೆಯ ಎರಡನೇ ತಿರುವಿನಲ್ಲಿ ಓಮ್ನಿ ಮತ್ತು ಆಕ್ಟಿವಾ ಕಾರನ್ನ ದುಷ್ಕರ್ಮಿಗಳು ಹಾನಿ ಉಂಟು ಮಾಡಿದ್ದರು. ಒಂದು ತಿಂಗಳನಂತರ ಮತ್ತೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಸ್ಥಳೀಯರು ಗಾಂಜಾ ಗುಂಗಿನಿಂದ ಯುವಕರು ಈ ದುಷ್ಕೃತ್ಯ ಮೆರೆದಿರುವುದಾಗಿ ಆರೋಪಿಸಿದ್ದಾರೆ. ರಾತ್ರಿನೇ ಪೊಲೀಸರು ಸ್ಥಳಕ್ಕೆ ದಾವಿಸಿ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ. ಒಟ್ಟಿನಲ್ಲಿ ಇಂತಹ ಕಿಡಿಗೇಡಿಗಳಿಗೆ ಶಿವಮೊಗ್ಗದ ಪೊಲೀಸರು ಮಟ್ಟ ಹಾಕಲು ವಿಫಲವಾಗಿದ್ದು, ಮುಂದೆ ಸಫಲರಾಗುತ್ತಾರಾ ಎಂದು ಕಾದು ನೋಡಬೇಕು.